T20 world Cup: 175 ರನ್ ಜೊತೆಯಾಟದ ಮೂಲಕ ದೊಡ್ಡ ದಾಖಲೆ ಬರೆದ ಟಿಮ್ ಸೀಫರ್ಟ್-ಫಿನ್ ಆಲೆನ್!
ಯುಎಇ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆರಂಭಿಕರಾದ ಫಿನ್ ಆಲೆನ್ ಹಾಗೂ ಟಿಮ್ ಸೀಫರ್ಟ್ ಅವರು 175 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಕಿವೀಸ್ ತಂಡದ 10 ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದರು. ಈ ದೊಡ್ಡ ಜೊತೆಯಾಟದ ಮೂಲಕ ಈ ಜೋಡಿ ವಿಶೇಷ ದಾಖಲೆಯನ್ನು ಬರೆದಿದೆ.
175 ರನ್ ಜೊತೆಯಾಟವಾಡಿದ ಟಿಮ್ ಸೀಫರ್ಟ್, ಫಿನ್ ಆಲೆನ್. -
ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ (NZ vs UAE) ನ್ಯೂಜಿಲೆಂಡ್, ಯುಎಇ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿಯೂ ಕಿವೀಸ್ ಹೊರಹೊಮ್ಮಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿನಲ್ಲಿ ಆರಂಭಿಕ ಜೋಡಿ ಟಿಮ್ ಸೀಫರ್ಟ್ (Tim Seifert) ಮತ್ತು ಫಿನ್ ಆಲೆನ್ (Finn Allen) ಪ್ರಮುಖ ಪಾತ್ರವನ್ನು ವಹಿಸಿದರು. 174 ರನ್‌ಗಳ ಗುರಿಯನ್ನು ಈ ಜೋಡಿ ವಿಕೆಟ್ ನೀಡದೆ ಬೆನ್ನಟ್ಟಿತು. ಇವರ ಅಬ್ಬರದ ರನ್ ಚೇಸ್ ಮೂಲಕ, 2022ರಲ್ಲಿ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ಆರಂಭಿಕ ಜೋಡಿ ದಾಖಲೆಯನ್ನು ಇದೀಗ ಸೀಫರ್ಟ್–ಆಲೆನ್ ಜೋಡಿ ಮುರಿಯಿತು.
ಯುಎಇ ವಿರುದ್ಧ 174 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪರ ಆರಂಭಿಕ ಜೋಡಿ ಫಿನ್ ಆಲೆನ್ ಮತ್ತು ಟಿಮ್ ಸೀಫರ್ಟ್ ಮೊದಲ ವಿಕೆಟ್‌ಗೆ 175 ರನ್‌ಗಳ ಅಬ್ಬರದ ಜೊತೆಯಾಟವಾಡಿತು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ ಅತಿ ದೊಡ್ಡ ಜೊತೆಯಾಟವಾಡಿದ ಮೊದಲ ಜೋಡಿ ಎಂಬ ನೂತನ ದಾಖಲೆಯನ್ನು ಕಿವೀಸ್ ಜೋಡಿ ನಿರ್ಮಿಸಿತು. ಆ ಮೂಲಕ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ನಿರ್ಮಿಸಿದ್ದ 170 ರನ್‌ಗಳ ದಾಖಲೆಯನ್ನು ಅಲೆನ್–ಸೀಫರ್ಟ್ ಜೋಡಿ ಮುರಿಯಿತು.
NZ vs UAE: ಟಿಮ್ ಸೀಫರ್ಟ್-ಫಿನ್ ಆಲೆನ್ ಅಬ್ಬರ, ಯುಎಇ ಎದುರು ನ್ಯೂಜಿಲೆಂಡ್‌ಗೆ ದಾಖಲೆಯ ಜಯ!
ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದ ಅತಿ ದೊಡ್ಡ ಜೊತೆಯಾಟದ ದಾಖಲೆ
ಟಿಮ್ ಸೀಫರ್ಟ್-ಫಿನ್ ಅಲೆನ್ (ನ್ಯೂಜಿಲೆಂಡ್) vs ಯುಎಇ- 175* ರನ್ (2026)
ಜೋಸ್ ಬಟ್ಲರ್-ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) vs ಭಾರತ- 170 ರನ್ (2022)
ರೈಲಿ ರಸೋವ್-ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) vs ಬಾಂಗ್ಲಾದೇಶ- 168 ರನ್ (2022)
ಕುಮಾರ್ ಸಂಗಕ್ಕಾರ-ಮಹೇಲಾ ಜಯವರ್ಧನೆ (ಶ್ರೀಲಂಕಾ) vs ವೆಸ್ಟ್ ಇಂಡೀಸ್- 166 ರನ್ (2010)
ರಹಮಾನುಲ್ಲಾ ಗುರ್ಬಾಜ್-ಇಬ್ರಾಹಿಂ ಝರ್ಡಾನ್ (ಅಫ್ಘಾನಿಸ್ತಾನ) vs ಉಗಾಂಡಾ- 154 ರನ್ (2024)
Tim Seifert and Finn Allen put up a record-breaking stand to make it two in two at #T20WorldCup for New Zealand 👏
— ICC (@ICC) February 10, 2026
📝: https://t.co/5NVVxOjcFv pic.twitter.com/P7rqBCL0LT
ನ್ಯೂಜಿಲೆಂಡ್ 10 ವಿಕೆಟ್‌ಗಳ ಭರ್ಜರಿ ಜಯ
ಈ ಪಂದ್ಯದಲ್ಲಿ ಯುಎಇ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲೇ ಆರ್ಯನ್ಶ್ ಶರ್ಮಾ ವಿಕೆಟ್ ಕಳೆದುಕೊಂಡರೂ, ನಾಯಕ ಮೊಹಮ್ಮದ್ ವಸೀಮ್ ಮತ್ತು ಅಲಿಶನ್ ಶರಫು ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 107 ರನ್‌ಗಳ ಮಹತ್ವದ ಜೊತೆಯಾಟವಾಡಿತು. ವಸೀಮ್ 66 ರನ್‌ಗಳೊಂದಿಗೆ ತಂಡದ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದರೆ, ಶರಫು 55 ರನ್‌ಗಳ ವೇಗದ ಇನಿಂಗ್ಸ್ ಆಡಿದರು. 20 ಓವರ್‌ಗಳಲ್ಲಿ ಯುಎಇ 7 ವಿಕೆಟ್‌ಗಳಿಗೆ 173 ರನ್‌ಗಳನ್ನು ಗಳಿಸಿತು. ನ್ಯೂಜಿಲೆಂಡ್ ಪರ ಲಾಕಿ ಫರ್ಗ್ಯೂಸನ್ ಅತ್ಯುತ್ತಮ ಬೌಲರ್ ಆಗಿ ಮೂಡಿ ಬಂದು ಮೂರು ವಿಕೆಟ್‌ಗಳನ್ನು ಪಡೆದುಕೊಂಡರು.
Absolute carnage from Tim Seifert and Finn Allen rewrites #T20WorldCup record books 🔥 pic.twitter.com/kx4XA2upo5
— ICC (@ICC) February 10, 2026
ರನ್‌ಚೇಸ್‌ನಲ್ಲಿ ಫಿನ್ ಆಲೆನ್ ಮತ್ತು ಟಿಮ್ ಸೀಫರ್ಟ್ ಯಾವುದೇ ಒತ್ತಡವಿಲ್ಲದೆ ಆಟವಾಡಿದರು. ನ್ಯೂಜಿಲೆಂಡ್‌ನ ಆರಂಭಿಕ ಜೋಡಿ ಒಂದು ವಿಕೆಟ್ ಕೂಡ ಕಳೆದುಕೊಳ್ಳದೆ 174 ರನ್‌ಗಳ ಗುರಿಯನ್ನು 28 ಬಾಲ್‌ಗಳು ಬಾಕಿ ಇರುವಂತೆಯೇ ಮುಟ್ಟಿತು. ಸೀಫರ್ಟ್ 86 ರನ್‌ಗಳ ಅಜೇಯ ಇನಿಂಗ್ಸ್ ಆಡಿದರೆ, ಆಲೆನ್ 84 ರನ್‌ಗಳನ್ನು ಬಾರಿಸಿ ತಂಡದ ಸುಲಭ ಜಯಕ್ಕೆ ಪ್ರಮುಖ ಪಾತ್ರ ವಹಿಸಿದರು.