ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಮೂರನೇ ಪಂದ್ಯದಲ್ಲಿ ಶತಕ ಬಾರಿಸಿ ಬಾಬರ್‌ ಆಝಮ್‌ ದಾಖಲೆ ಸರಿಗಟ್ಟಿದ ಡ್ಯಾರಿಲ್‌ ಮಿಚೆಲ್!

Darly Matchell Scored Century: ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಪಾಕಿಸ್ತಾನ ಮಾಜಿ ನಾಯಕ ಬಾಬರ್‌ ಆಝಮ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಶತಕ ಬಾರಿಸಿ ಬಾಬರ್‌ ಆಝಮ್‌ ದಾಖಲೆ ಸರಿಗಟ್ಟಿದ ಡ್ಯಾರಿಲ್‌ ಮಿಚೆಲ್‌!

ಸತತ ಎರಡನೇ ಶತಕ ಬಾರಿಸಿದ ಡ್ಯಾರಿಲ್‌ ಮಿಚೆಲ್‌. -

Profile
Ramesh Kote Jan 18, 2026 5:56 PM

ಇಂದೋರ್‌: ಭಾರತ ವಿರುದ್ದದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ(IND vs NZ) ನ್ಯೂಜಿಲೆಂಡ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಡ್ಯಾರಿಲ್‌ ಮಿಚೆಲ್‌ (Darly Mitchell) ತಮ್ಮ ಅಬ್ಬರವನ್ನು ಮುಂದುವರಿಸಿದ್ದಾರೆ. ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ 9ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಪಾಕಿಸ್ತಾನ ಮಾಜಿ ನಾಯಕ ಬಾಬರ್‌ ಆಝಮ್‌ (Babar Azam) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ ಹಾಗೂ ಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಅವರ ಸನಿಹಕ್ಕೆ ಬಂದಿದ್ದಾರೆ. ಅಂದ ಹಾಗೆ ಈ ಸರಣಿಯಲ್ಲಿ ಡ್ಯಾರಿಲ್‌ ಮಿಚೆಲ್‌ ಅವರ ಪಾಲಿಗೆ ಸತತ ಎರಡನೇ ಏಕದಿನ ಶತಕವಾಗಿದೆ.

ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ನ್ಯೂಜಿಲೆಂಡ್‌ ತಂಡ, ಕೇವಲ 5 ರನ್‌ಗಳಿಗೆ 2 ವಿಕೆಟ್‌ಗಳ್ನು ಬಹುಬೇಗ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ಗೆ ಬಂದ ಡ್ಯಾರಿಲ್‌ ಮಿಚಲೆ ಅತ್ಯುತ್ತಮವಾಗಿ ಬ್ಯಾಟ್‌ ಮಾಡಿದರು. ಅವರು ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ ರೀತಿ ಈ ಪಂದ್ಯದಲ್ಲಿಯೂ ಅದೇ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 131 ಎಸೆತಗಳಲ್ಲಿ 3 ಸಿಕ್ಸ್‌ ಹಾಗೂ 15 ಬೌಂಡರಿಗಳೊಂದಿಗೆ 137 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕಳೆದ 7 ಒಡಿಐ ಇನಿಂಗ್ಸ್‌ಗಳಲ್ಲಿ ನಾಲ್ಕನೇ ಶತಕ ಹಾಗೂ ಒಟ್ಟಾರೆ ತಮ್ಮ ವೃತ್ತಿ ಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದರು.

ಮೊದಲನೇ ಓವರ್‌ನಲ್ಲಿಯೇ ವಿಕೆಟ್‌ ಕಿತ್ತ ಅರ್ಷದೀಪ್‌ ಸಿಂಗ್‌ ; ಗೌತಮ್‌ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಕಿಡಿ!

ಭಾರತದಲ್ಲಿ ಅತಿ ಹೆಚ್ಚು ಒಡಿಐ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದರು. ಡ್ಯಾರಿಲ್‌ ಒಟ್ಟು 4 ಶತಕಗಳನ್ನು ಭಾರತದಲ್ಲಿ ಗಳಿಸಿದ್ದರೆ, ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿವಿಲಿಯರ್ಸ್‌ 5 ಶತಕಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.

ಬಾಬರ್‌ ಆಝಮ್‌ ದಾಖಲೆ ಸರಿಗಟ್ಟಿದ ಮಿಚೆಲ್‌

2023ರ ಬಳಿಕ ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಡ್ಯಾರಿಲ್‌ ಮಿಚೆಲ್‌, ಬಾಬರ್‌ ಆಝಮ್‌ ಹಾಗೂ ಕುಸಾಲ್‌ ಮೆಂಡಿಸ್‌ ಅವರ ಜೊತೆ ಐದನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಮಿಚೆಲ್‌ ಇದೀಗ 18 ಬಾರಿ 50ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ವಿರಾಟ್‌ ಕೊಹ್ಲಿ 22 ಬಾರಿ ಕಲೆ ಹಾಕುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಶುಭಮನ್‌ ಗಿಲ್‌ 20, ರೋಹಿತ್‌ ಶರ್ಮಾ 19 ಬಾರಿ 50ಕ್ಕೂ ಅಧಿಕ ರನ್‌ ಗಳಿಸಿದ್ದಾರೆ.



337 ರನ್‌ ಕಲೆ ಹಾಕಿದ ಕಿವೀಸ್‌

ಇನ್ನು ಈ ಪಂದ್ಯದಲ್ಲಿ ಡ್ಯಾರಿಲ್‌ ಮಿಚೆಲ್‌ ಜೊತೆಗೆ ಗ್ಲೆನ್‌ ಫಿಲಿಪ್ಸ್‌ ಕೂಡ ಭರ್ಜರಿ ಶತಕವನ್ನು ಬಾರಿಸಿದರು. ಅವರು ಆಡಿದ 88 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 106 ರನ್‌ಗಳನ್ನು ಬಾರಿಸಿದರು. ಆ ಮೂಲಕ ನ್ಯೂಜಿಲೆಂಡ್‌ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 337 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಎದುರಾಳಿ ಭಾರತ ತಂಡಕ್ಕೆ 338 ರನ್‌ಗಳ ಸವಾಲಿನ ಗುರಿಯನ್ನು ನೀಡಿದೆ.