ನವದೆಹಲಿ: ಗೌತಮ್ ಗಂಭೀರ್ (Gautam Gambhir) ಭಾರತ ತಂಡಕ್ಕೆ ಹೆಡ್ ಕೋಚ್ ಆಗಿ ಬಂದಾಗಿನಿಂದಲೂ ಹಲವು ಊಹಾಪೋಹಾಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಿಶೇಷವಾಗಿ ವಿರಾಟ್ ಕೊಹ್ಲಿ (Virat Kohli) ಹಾಗೂ ಗಂಭೀರ್ ನಡುವೆ ಸಂಹವನ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ (Sitanshu Kotak) ಈ ಊಹಾಪೋಹಾಗಳನ್ನು ಅಲ್ಲೆಗೆಳೆದಿದ್ದಾರೆ. ಇದೆಲ್ಲವೂ ಸುಳ್ಳು ಎನ್ನುವ ಮೂಲಕ ಗಾಳಿ ಸುದ್ದಿಯನ್ನು ಕಡ್ಡಿ ಮುರಿದಂತೆ ತಳ್ಳಿ ಹಾಕಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ.
ಮುಂದಿನ ವರ್ಷದ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಿದ್ಧತೆಗಳನ್ನು ಪ್ರಾರಂಭಿಸುತ್ತಿರುವಾಗ, ಭಾರತದ ಏಕದಿನ ಬ್ಯಾಟಿಂಗ್‌ನ ಬೆನ್ನೆಲುಬಾಗಿ ಕೊಹ್ಲಿ ಮತ್ತು ರೋಹಿತ್ ಅವರು ನಿರ್ವಹಣೆಯೊಂದಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ ಎಂದು ಕೊಟಕ್ ಇದೇ ವೇಳೆ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ! ಈ ಆಟಗಾರನೇ ಭಾರತೀಯ ಕ್ರಿಕೆಟ್‌ಗೆ ಮಿಸ್ಟರ್ ಕನ್ಸಿಸ್ಟಂಟ್ ಎಂದ ಅಶ್ವಿನ್!
"ವಿರಾಟ್ ಮತ್ತು ರೋಹಿತ್ ಖಂಡಿತವಾಗಿಯೂ ಯೋಜನೆಯ ಭಾಗವಾಗಿದ್ದಾರೆ. ಈಗ ಅವರು ಒಂದೇ ಸ್ವರೂಪದಲ್ಲಿ ಆಡುತ್ತಿರುವುದರಿಂದ, ತಮ್ಮ ಉಪಸ್ಥಿತಿಯಿಂದ ಭಾರತ ಎಲ್ಲೆಡೆ ಗೆಲ್ಲಬೇಕೆಂದು ಅವರು ಬಯಸುತ್ತಾರೆ," ಎಂದು ಸಿತಾಂಶು ಕೊಟಕ್ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿದ್ದಾರೆ.
"ಅವರು ಹೊಂದಿರುವ ಅನುಭವದೊಂದಿಗೆ, ಅವರು ಇತರ ಆಟಗಾರರೊಂದಿಗೆ ಬಹಳಷ್ಟು ವಿಚಾರಗಳನ್ನು ಹಂಚಿಕೊಳ್ಳಬಹುದು ಮತ್ತು ಅವರು ಚರ್ಚಿಸುತ್ತಾರೆ. ಅವರು ಗೌತಮ್ ಅವರೊಂದಿಗೆ ಏಕದಿನ ಸ್ವರೂಪ, ನಮಗಿರುವ ಪಂದ್ಯಗಳು ಮತ್ತು ದಕ್ಷಿಣ ಆಫ್ರಿಕಾ ಸಂಬಂಧ ನಮ್ಮ ಯೋಜನೆಗಳ ಬಗ್ಗೆ ಚರ್ಚಿಸುತ್ತಾರೆ," ಎಂದಿದ್ದಾರೆ.
IND vs NZ: ʻಅವರು ಇಂದಿಗೂ ಬದಲಾಗಿಲ್ಲʼ-ವಿರಾಟ್ ಕೊಹ್ಲಿ ಬಗ್ಗೆ ಆರ್ ಅಶ್ವಿನ್ ಅಚ್ಚರಿ ಹೇಳಿಕೆ!
"ಹೆಚ್ಚಿನ ಸಮಯ ನಾನು ಅಲ್ಲೇ ಇರುತ್ತೇನೆ ಮತ್ತು ನಾನು ಕೇಳುತ್ತಿದ್ದರೆ, ಅವರು ಖಂಡಿತವಾಗಿಯೂ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಅವರು ಮಾತನಾಡುವುದನ್ನು ನಾನು ಯಾವಾಗಲೂ ನೋಡುತ್ತೇನೆ. ನಿಸ್ಸಂಶಯವಾಗಿ, ಸಾಮಾಜಿಕ ಮಾಧ್ಯಮದಲ್ಲಿ ನಾನು ತಪ್ಪಿಸಲು ಪ್ರಯತ್ನಿಸುವ ಬಹಳಷ್ಟು ವಿಷಯಗಳನ್ನು ನೀವು ನೋಡುತ್ತೀರಿ, ಆದರೆ ನಾನು ನೋಡಿದಂತೆ ಬಹಳಷ್ಟು ಸಕಾರಾತ್ಮಕ ಅಂಶಗಳಿವೆ," ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಕೊಹ್ಲಿ, ರೋಹಿತ್ ಮತ್ತು ಹೊಸ ಕೋಚಿಂಗ್ ಸಿಬ್ಬಂದಿ ನಡುವಿನ ಸಂಬಂಧದ ಬಗ್ಗೆ ಅನುಮಾನಗಳಿವೆ. ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ವೈಫಲ್ಯಗಳನ್ನು ಅನುಭವಿಸಿದ ಬಳಿಕ ಮತ್ತು ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಈ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಹಲವು ಸುದ್ದಿಗಳು ಚರ್ಚೆಗಳಲ್ಲಿವೆ.
IND vs NZ: ವಿರಾಟ್ ಕೊಹ್ಲಿ ದುರಂಹಕಾರಿ? ಮಾಜಿ ನಾಯಕನ ಬಗ್ಗೆ ಅಜಿಂಕ್ಯ ರಹಾನೆ ದೊಡ್ಡ ಹೇಳಿಕೆ!
ಅಂದ ಹಾಗೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ಜನವರಿ 14 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ವಿರಾಟ್ ಕೊಹ್ಲಿ ಮೊದಲನೇ ಪಂದ್ಯದಲ್ಲಿ 93 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತದ ಗೆಲುವಿಗೆ ನೆರವು ನೀಡಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಎರಡನೇ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.