ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ʻನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಿʼ-ರಯಾನ್‌ ಟೆನ್‌ ಡಶಾಟ್‌ಗೆ ತಿರುಗೇಟು!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಸೋತ ಬಳಿಕ ಭಾರತ ತಂಡದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದಿದ್ದ ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್‌ ಟೆನ್‌ ಡಶಾಟ್‌ ಅವರು ವ್ಯಾಪಾಕ ಟೀಕೆಗೆ ಗುರಿಯಾಗಿದ್ದಾರೆ. ಮೊದಲು ಅವರಿಗೆ ಸರಿಯಾಗಿ ಅವಕಾಶ ನೀಡಿ. ಅವರನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಆಕಾಶ್ ಚೋಪ್ರಾ ಹಾಗೂ ರಾಬಿನ್ ಉತ್ತಪ್ಪ ಅಸಮಾಧಾನ ಹೊರಹಾಕಿದ್ದಾರೆ.

ನಿತೀಶ್‌ ರೆಡ್ಡಿ ಬಗ್ಗೆ ಸಹಾಯಕ ಕೋಚ್‌ ಹೇಳಿಕೆಗೆ ವಿರೋಧ.

ನವದೆಹಲಿ: ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ (IND vs NZ) ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತು. ಹೀಗಾಗಿ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿವೆ. ಈ ಹಿನ್ನೆಲೆಯಲ್ಲಿ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದ ಗೆಲುವು ಎರಡೂ ತಂಡಗಳಿಗೂ ನಿರ್ಣಾಯಕವಾಗಿದೆ. ಇದರ ನಡುವೆ ಎರಡನೇ ಪಂದ್ಯ ಮುಗಿದ ಬಳಿಕ ಭಾರತ ತಂಡದ ಸಹಾಯಕ ಕೋಚ್ ರಯಾನ್‌ ಟೆನ್‌ ಡಶಾಟ್‌ (Ryan ten Doeschate), ನಿತೀಶ್ ಕುಮಾರ್ ರೆಡ್ಡಿ (Nitish kumar Reddy) ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದರು. ಇದೀಗ ಅವರ ಈ ಹೇಳಿಕೆಯ ವಿರುದ್ಧ ವ್ಯಾಪಾಕ ಟೀಕೆಗಳು ಕೇಳಿ ಬರುತ್ತಿದ್ದು, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ ಹಾಗೂ ರಾಬಿನ್ ಉತ್ತಪ್ಪ ನಿತೀಶ್ ಕುಮಾರ್ ರೆಡ್ಡಿ ಪರ ಬ್ಯಾಟ್ ಬೀಸಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ಭಾರತ ತಂಡದ ಸಹಾಯಕ ಕೋಚ್ ರಿಯಾನ್‌ ಟೆನ್‌ ಡಶಾಟ್‌ , "ನಿತೀಶ್ ಅವರೊಂದಿಗೆ, ನಾವು ಅವರನ್ನು ಅಭಿವೃದ್ಧಿಪಡಿಸುವ ಮತ್ತು ಅವರಿಗೆ ಆಟದ ಸಮಯವನ್ನು ನೀಡುವ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ ಮತ್ತು ನಂತರ ನೀವು ಅವರಿಗೆ ಆಟದ ಸಮಯವನ್ನು ಪಡೆದಾಗ, ಅವರು ಆಗಾಗ್ಗೆ ಪಂದ್ಯಗಳಲ್ಲಿ ಹೆಚ್ಚಿನದನ್ನು ಮಾಡದೆ ಇರುತ್ತಾರೆ. ಇಂದು ಬ್ಯಾಟ್‌ ಮಾಡಿದ ಯಾರಿಗಾದರೂ ಆ ಪರಿಸ್ಥಿತಿಯಲ್ಲಿ ನೀವು ಆಡುತ್ತಿರುವುದು ಮತ್ತು ಈ ವಿಕೆಟ್‌ನಲ್ಲಿ 15 ಓವರ್‌ಗಳನ್ನು ಕಳೆಯಲು ನಿಮಗೆ ಅವಕಾಶ ಸಿಕ್ಕಿರುವುದು ಸೂಕ್ತ ಅವಕಾಶ. ಹೀಗಾಗಿ ನೀವು ನಿಜವಾಗಿಯೂ ಆ ಅವಕಾಶಗಳನ್ನು ಬಳಸಿಕೊಳ್ಳಬೇಕು," ಎಂದು ಹೇಳಿದ್ದರು.

IND vs NZ: ʻಭಾರತದ ಪ್ಲೇಯಿಂಗ್‌ XIನಲ್ಲಿ ನಿತೀಶ್‌ ರೆಡ್ಡಿ ಪಾತ್ರವೇನು?ʼ-ಮೊಹಮ್ಮದ್‌ ಕೈಫ್‌ ಪ್ರಶ್ನೆ!

ರಯಾನ್‌ ಟೆನ್‌ ಡಶಾಟ್‌ ಅವರ ಹೇಳಿಕೆಯನ್ನು ಟೀಕಿಸಿದ ಆಕಾಶ್ ಚೋಪ್ರಾ

ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾತನಾಡಿ, ನಿತೀಶ್ ಕುಮಾರ್ ಆಡುವ ಪಂದ್ಯಗಳಲ್ಲಿ ಅವರಿಗೆ ಬ್ಯಾಟ್‌ ಮಾಡಲು ಸಾಕಷ್ಟು ಓವರ್ ಗಳಿರುವುದಿಲ್ಲ. ಇತ್ತ ಬೌಲಿಂಗ್‌ನಲ್ಲೂ ಕೂಡ ಅವರಿಗೆ ಬೌಲ್ ಮಾಡಲು ಹೆಚ್ಚು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

"ನಾವು ಅವರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಮಾಡುತ್ತೇವೆ, ಅಲ್ಲಿ ಅವರಿಗೆ ಸೀಮಿತ ಅವಕಾಶಗಳು ಸಿಗುತ್ತವೆ ಮತ್ತು ಅವರು ಬಹಳ ಕಡಿಮೆ ಓವರ್‌ಗಳನ್ನು ಬೌಲ್ ಮಾಡುತ್ತಾರೆ. ನೀವು ಅವಕಾಶಗಳನ್ನು ನೀಡದಿದ್ದರೆ, ನೀವು ಆರಂಭಿಕ ಅಥವಾ ಹೊಸ ಚೆಂಡಿನ ಬೌಲರ್ ಆಗದ ಹೊರತು ಯಾವುದೇ ಯುವ ಕ್ರಿಕೆಟಿಗನಿಗೆ ಪ್ರಭಾವ ಬೀರುವುದು ಕಷ್ಟಕರವಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ಪ್ಲೇಯಿಂಗ್‌ XI ಕಟ್ಟಿದ ಜಿತೇಶ್‌ ಶರ್ಮಾ!

ನಿತೀಶ್‌ಕುಮಾರ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ: ರಾಬಿನ್ ಉತ್ತಪ್ಪ

ಈ ಕುರಿತು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದು, ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಏಕದಿನ ಮಾದರಿಗೆ ನಿತೀಶ್ ಪದಾರ್ಪಣೆ ಮಾಡಿದ ಬಳಿಕ ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು ತಮ್ಮ 10 ಟೆಸ್ಟ್‌ಗಳಲ್ಲಿ ಒಟ್ಟು 86 ಓವರ್‌ಗಳನ್ನು ಬೌಲ್‌ ಮಾಡಿದ್ದಾರೆ ಮತ್ತು ಇದುವರೆಗೆ ಆಡಿರುವ ಮೂರು ಏಕದಿನ ಪಂದ್ಯಗಳಲ್ಲಿ ಕೇವಲ ಏಳು ಓವರ್‌ಗಳನ್ನು ಬೌಲ್‌ ಮಾಡಿದ್ದಾರೆ.

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ನಿತೀಶ್ ಕೇವಲ 10 ಓವರ್ ಬೌಲಿಂಗ್ ಮಾಡಿದ ಬಳಿಕ ಕೋಚ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಎಕ್ಸ್ ನಲ್ಲಿ ಒಬ್ಬ ಬಳಕೆದಾರರು ಸಹಾಯಕ ಕೋಚ್ ಅವರನ್ನು ಟೀಕಿಸಿದ್ದನ್ನು ಉಲ್ಲೇಖಸಿದರು.

"ಆಲ್‌ರೌಂಡರ್ ಆಗುವುದು ಸುಲಭವಲ್ಲ. ನೀವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ರೂಡಿಸಿಕೊಳ್ಳಬೇಕು. ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಕೂಡ ಹಾಗೆ ಆಗಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಕಳೆದ ಸಮಯದಿಂದಾಗಿ ಅವರು ಸಂಪೂರ್ಣ ಆಟಗಾರರಾದರು. ನಿತೀಶ್ ರೆಡ್ಡಿಗೂ ಆ ಸಮಯ ಬೇಕು" ಎಂದು ಉತ್ತಪ್ಪ ತಿಳಿಸಿದರು.