ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vz NZ: 4 ಕ್ಯಾಚ್‌ ಪಡೆದು ಅಜಿಂಕ್ಯ ರಹಾನೆ ದಾಖಲೆ ಸರಿಗಟ್ಟಿದ ರಿಂಕು ಸಿಂಗ್!‌

Rinku Singh 4 Catches: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ರಿಂಕು ಸಿಂಗ್ ನಾಲ್ಕು ಕ್ಯಾಚ್‌ಗಳನ್ನು ಹಿಡಿಯುವ ಮೂಲಕ, ಟಿ20ಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಸ್ಥಾನ ಪಡೆದರು.

ರಿಂಕು ಸಿಂಗ್‌ 4 ಕ್ಯಾಚ್‌ ಪಡೆಯುವ ಮೂಲಕ ಅಜಿಂಕ್ಯ ರಹಾನೆ ದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಶಾಖಪಟ್ಟಣಂ: ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯ ನಾಲ್ಕನೇ ಪಂದ್ಯದಲ್ಲಿ (IND vs NZ) ರಿಂಕು ಸಿಂಗ್ (Rinku Singh) ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶಿಸಿದರು. ಅವರು ನ್ಯೂಜಿಲೆಂಡ್ (New Zealand) ಬ್ಯಾಟ್ಸ್‌ಮನ್‌ಗಳ ನಾಲ್ಕು ಕ್ಯಾಚ್‌ಗಳನ್ನು ಯಶಸ್ವಿಯಾಗಿ ಪಡೆದರು. ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಡೆವೋನ್ ಕಾನ್ವೇ ಅವರನ್ನು ಕ್ಯಾಚ್ ಪಡೆದರು. ನಂತರ ರಿಂಕು ಸಿಂಗ್‌, ಗ್ಲೆನ್ ಫಿಲಿಪ್ಸ್ ಅವರ ಕ್ಯಾಚ್ ಅನ್ನು ಕೂಡ ಪಡೆಯುವಲ್ಲಿ ಸಫಲರಾದರು. ಸ್ಫೋಟಕ ಅರ್ಧಶತಕ ಗಳಿಸಿ ಆಡುತ್ತಿದ್ದ ಟಿಮ್ ಸೀಫರ್ಟ್ ಅವರನ್ನು ಅರ್ಷ್‌ದೀಪ್ ಬೌಲಿಂಗ್‌ನಲ್ಲಿ ರಿಂಕು ಸಿಂಗ್‌ ಬೌಂಡರಿ ಬಳಿ ಕ್ಯಾಚ್ ಪಡೆದರು. ನಂತರ ಅರ್ಷ್‌ದೀಪ್ ಸಿಂಗ್‌, ಜ್ಯಾಕ್ ಫೌಲ್ಕ್ಸ್ ಅವರ ವಿಕೆಟ್ ಪಡೆದರು ಮತ್ತು ರಿಂಕು ಸಿಂಗ್‌ ಅವರ ಕ್ಯಾಚ್‌ ಪಡೆದಿದ್ದರು.

ಟಿ20ಐ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಫೀಲ್ಡರ್ ಆಗಿ ರಿಂಕು ಸಿಂಗ್ ಜಂಟಿಯಾಗಿ ಗುರುತಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ 2014 ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ಕ್ಯಾಚ್‌ಗಳನ್ನು ಪಡೆದಿದ್ದರು. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಜಿಂಕ್ಯ ರಹಾನೆ ಮತ್ತು ಸುರೇಶ್ ರೈನಾ ತಲಾ ಒಂದು ಪಂದ್ಯದಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಆಡುವ ರಾಷ್ಟ್ರಗಳ ಆಟಗಾರರಲ್ಲಿ ಬಾಂಗ್ಲಾದೇಶದ ತಂಝಿದ್ ಹಸನ್ ಮಾತ್ರ ಟಿ20ಐ ಪಂದ್ಯದಲ್ಲಿ ಐದು ಕ್ಯಾಚ್‌ಗಳನ್ನು ಪಡೆದಿದ್ದಾರೆ.

T20 World Cup 2026: ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ರಾಹುಲ್‌ ದ್ರಾವಿಡ್‌!

38 ಇನಿಂಗ್ಸ್‌ಗಳಲ್ಲಿ 30 ಕ್ಯಾಚ್‌ಗಳನ್ನು ಪಡೆದ ರಿಂಕು ಸಿಂಗ್

ರಿಂಕು ಸಿಂಗ್ ಅವರನ್ನು ಭಾರತದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಕ್ಯಾಚಿಂಗ್ ವಿಷಯದಲ್ಲಿ ಅವರು ಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತಾರೆ. ಇಲ್ಲಿಯವರೆಗೆ ಆಡಿರುವ 39 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು 30 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಅವರು 38 ಇನಿಂಗ್ಸ್‌ಗಳಲ್ಲಿ ಫೀಲ್ಡಿಂಗ್ ಮಾಡಿದ್ದಾರೆ. ಅವರ ಪ್ರತಿ ಇನಿಂಗ್ಸ್‌ನ ಸರಾಸರಿ 0.789 ಕ್ಯಾಚ್‌ಗಳು. ಭಾರತಕ್ಕಾಗಿ ಟಿ20ಐ ಕ್ರಿಕೆಟ್‌ನಲ್ಲಿ 20 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರರಲ್ಲಿ ರಿಂಕು ಪ್ರತಿ ಇನಿಂಗ್ಸ್‌ಗೆ ಅತ್ಯುತ್ತಮ ಕ್ಯಾಚ್ ಸರಾಸರಿಯನ್ನು ಹೊಂದಿದ್ದಾರೆ.



ನ್ಯೂಜಿಲೆಂಡ್ 215 ರನ್ ಕಲೆ ಹಾಕಿತು

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ಏಳು ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲ್‌ ಆಯ್ಕೆ ಮಾಡಿಕೊಂಡರು. ನ್ಯೂಜಿಲೆಂಡ್ ಪರ ಟಿಮ್ ಸೀಫರ್ಟ್ 62, ಡೆವೋನ್ ಕಾನ್ವೇ 44 ಮತ್ತು ಡ್ಯಾರಿಲ್‌ ಮಿಚೆಲ್ ಅಜೇಯ 39 ರನ್ ಗಳಿಸಿದರು. ಭಾರತ ಪರ ಅರ್ಷದೀಪ್‌ ಸಿಂಗ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.