T20 World Cup 2026: ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ರಾಹುಲ್ ದ್ರಾವಿಡ್!
ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7 ರಂದು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ, ಈ ಟೂರ್ನಿಯ ನಿಮಿತ್ತ ಎಲ್ಲಾ ತಂಡಗಳು ಸಜ್ಜಾಗುತ್ತಿವೆ. ಈ ಬಾರಿ ಪ್ರಶಸ್ತಿ ಗೆಲ್ಲಬಹುದೆಂದು ಹಲವರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಇದೀಗ ದಿಗ್ಗಜ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅವರು ಕೂಡ ಈ ಬಾರಿ ಯಾವ ತಂಡ ವಿಶ್ವಕಪ್ ಗೆಲ್ಲಬಹುದೆಂದು ತಮ್ಮ ಭವಿಷ್ಯ ನುಡಿದಿದ್ದಾರೆ.
ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ ದ್ರಾವಿಡ್. -
ನವದೆಹಲಿ: ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು (ICC T20 World Cup 2026) ಫೆಬ್ರವರಿ 7 ರಂದು ಆರಂಭವಾಗಲಿದೆ. ಈ ಟೂರ್ನಿಯ ನಿಮಿತ್ತ ಎಲ್ಲಾ ತಂಡಗಳು ಸಜ್ಜಾಗುತ್ತಿವೆ. ಅದರಂತೆ ಭಾರತ ತಂಡ (India), ಇದೀಗ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಇದರ ನಡುವೆ ಈ ಬಾರಿ ಯಾವ ತಂಡ, ಟಿ20 ವಿಶ್ವಕಪ್ ಅನ್ನು ಗೆಲ್ಲಬಹುದೆಂಬ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕೂಡ, ತಮ್ಮದೇ ಆದ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಭಾರತ, ಆದರೂ ತವರು ತಂಡಕ್ಕೆ ಬ್ಯಾಟಿಂಗ್ ದಿಗ್ಗಜ ಎಚ್ಚರಿಕೆಯನ್ನು ನೀಡಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಸೋಲು ಅನುಭವಿಸಿದ ಬಳಿಕ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಭಾರತ ತಂಡ, 2024ರ ಐಸಿಸಿ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ರೋಹಿತ್ ಶರ್ಮಾಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಭಾರತ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅಲ್ಲ; ಭಾರತ ವೈಟ್‌ಬಾಲ್ ಕ್ರಿಕೆಟ್ ಸಕ್ಸಸ್‌ಗೆ ಈ ಆಟಗಾರನೇ ಕಾರಣ ಎಂದ ರಾಹುಲ್ ದ್ರಾವಿಡ್!
"ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ಕಣಕ್ಕೆ ಇಳಿಯಲಿದೆ, ಅವರು ಸುಲಭವಾಗಿ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದ್ದಾರೆ. ಈ ಹಂತದಲ್ಲಿ ತಂಡವನ್ನು ಹೇಗೆ ನಿರ್ವಹಿಸಬೇಕೆಂದು ನನಗೆ ತಿಳಿದಿದೆ ಹಾಗೂ ಕಲಿತಿದ್ದೇನೆ. ಏಕೆಂದರೆ ಇಲ್ಲಿ ಒಂದು ತಪ್ಪಿ ಮಾಡಿದರೂ ಟೂರ್ನಿಯಿಂದ ಹೊರ ನಡೆಯಬೇಕಾಗುತ್ತದೆ. ನಾಕ್‌ಔಟ್ ಹಂತದಲ್ಲಿ ಯಾರೂ ಬೇಕಾದರೂ ಉತ್ತಮ ಇನಿಂಗ್ಸ್ ಆಡಬಹುದು ಅಥವಾ ಉತ್ತಮವಾಗಿ ಬೌಲ್ ಮಾಡಬಹುದು," ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
"ಭಾರತ ತಂಡ ಎಷ್ಟೇ ಶಕ್ತಿಯುತವಾಗಿದ್ದರೂ, ಒಂದು ಕೆಟ್ಟ ದಿನದಿಂದ ಎಲ್ಲವೂ ಬದಲಾಗಬಹುದು. ಹಾಗಾಗಿ ಇದರ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ," ಎಂದು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
IND vs NZ: ಟಿ20ಐ ಸರಣಿಯ ಕೊನೆಯ 2 ಪಂದ್ಯಗಳ ನ್ಯೂಜಿಲೆಂಡ್ ತಂಡಕ್ಕೆ ಇಬ್ಬರು ಸ್ಟಾರ್ ಆಟಗಾರರ ಎಂಟ್ರಿ!
ರೋಹಿತ್ ಶರ್ಮಾರ ಕೊಡುಗೆಯನ್ನು ನೆನೆದ ದ್ರಾವಿಡ್
ರಾಹುಲ್ ದ್ರಾವಿಡ್ ಅವರ ಹೆಡ್ ಕೋಚ್ ಅವಧಿಯಲ್ಲಿ ಭಾರತ ತಂಡ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ. ದ್ರಾವಿಡ್ ಹೆಡ್ ಕೋಚ್ ಅವಧಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡಕ್ಕೆ ನಾಯಕನಾಗಿದ್ದರು. ರೋಹಿತ್ ಶರ್ಮಾ ಅವರು ಭಾರತ ತಂಡದ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಮನಸ್ಥಿತಿಯನ್ನು ಪುನರ್‌ನಿರ್ಮಾಣ ಮಾಡಿದ್ದಾರೆಂದು ಹೇಳಿದ್ದಾರೆ.
"ನಾವು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಸ್ವಲ್ಪ ಹಿಂದುಳಿದಿದ್ದೇವೆ ಎಂಬ ಭಾವನೆ ನನಗೆ ಇತ್ತು ಮತ್ತು ಅದನ್ನು ಸ್ವಲ್ಪ ಸರಿಪಡಿಸಬೇಕೆಂದು ನನಗೆ ಅನಿಸಿತ್ತು. ನಂತರ, ರನ್ ದರ ಹೆಚ್ಚುತ್ತಿತ್ತು, ಅಪಾಯ ತೆಗೆದುಕೊಳ್ಳುವುದು ಹೆಚ್ಚುತ್ತಿತ್ತು ಮತ್ತು ನಾವು ಆ ವಾಸ್ತವಕ್ಕೆ ಹೊಂದಿಕೊಳ್ಳಬೇಕಾಗಿತ್ತು," ಎಂದು ದ್ರಾವಿಡ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಬಗ್ಗೆ ಸುಳಿವು ನೀಡಿದ ಕನ್ನಡಿಗ ಕೆಎಲ್ ರಾಹುಲ್!
"ರೋಹಿತ್ ಶರ್ಮಾ ತಕ್ಷಣವೇ ಮುನ್ನಡೆ ಸಾಧಿಸಿದ್ದು ಅದ್ಭುತವಾಗಿತ್ತು. ಇತರರನ್ನು ಕೇಳುವ ಬದಲು, ವೇಗವನ್ನು ಹೊಂದಿಸುವ ಜವಾಬ್ದಾರಿಯನ್ನು ಅವರು ಸ್ವತಃ ವಹಿಸಿಕೊಂಡರು. ನಿಮ್ಮ ನಾಯಕ ಎದ್ದುನಿಂತು, 'ನನ್ನ ಸರಾಸರಿ ಅಥವಾ ನನ್ನ ವೈಯಕ್ತಿಕ ಸಂಖ್ಯೆಗಳ ವೆಚ್ಚದಲ್ಲಿ ಬಂದರೂ ಸಹ, ನಾನು ಇದನ್ನು ಮಾಡುತ್ತೇನೆ' ಎಂದು ಹೇಳಿದಾಗ, ಆ ಸಂದೇಶವನ್ನು ತಂಡದ ಮೂಲಕ ರವಾನಿಸುವುದು ತುಂಬಾ ಸುಲಭವಾಗುತ್ತದೆ," ಎಂದು ಅವರು ಹೇಳಿದ್ದಾರೆ.