ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: 89 ರನ್‌ ಸಿಡಿಸಿ ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಸಂಜು ಸ್ಯಾಮ್ಸನ್‌!

Sanju samson breaks Virat Kohli's Record: ನ್ಯೂಜಿಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ 89 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಸಂಜು ಸ್ಯಾಮ್ಸನ್‌.

ಅಹಮದಾಬಾದ್‌: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ (Sanju Samson) ತಮ್ಮ ಸ್ಪೋಟಕ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದ ಅವರು, ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿಯೂ (IND vs NZ) ಅರ್ಧಶತಕದ ಇನಿಂಗ್ಸ್‌ ಆಡಿದರು. ಅವರು ಆಡಿದ 46 ಎಸೆತಗಳಲ್ಲಿ 89 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಚುಟುಕು ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವನ್ನು ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆ ಮೂಲಕ ವೆಸ್ಟ್‌ ಇಂಡೀಸ್‌ ಮಾಜಿ ಬ್ಯಾಟ್ಸ್‌ಮನ್‌ ಮಾರ್ನಸ್‌ ಸ್ಯಾಮ್ಯೂಲ್ಸ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ಎದುರು ತೋರಿದ್ದ ಪ್ರದರ್ಶನವನ್ನು ಸಂಜು ಸ್ಯಾಮ್ಸನ್‌ ಮಹತ್ವದ ಫೈನಲ್‌ ಪಂದ್ಯದಲ್ಲಿಯೂ ತೋರಿದರು. ಅವರು ಆಡಿದ 46 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 89 ರನ್‌ಗಳನ್ನು ಗಳಿಸಿದರು. ಆ ಮೂಲಕ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆ ಮೂಲಕ ವಿಂಡೀಸ್‌ ದಿಗ್ಗಜ ಮಾರ್ನಸ್‌‌ ಸ್ಯಾಮ್ಯೂಲ್ಸ್ ಅವರ ದಾಖಲೆಯನ್ನು ಮುರಿದರು. ಅಲ್ಲದೆ 77 ರನ್‌ ಗಳಿಸಿದ್ದ ಆಧುನಿಕ ದಿಗ್ಗಜ ವಿರಾಟ್‌ ಕೊಹ್ಲಿಯನ್ನು ಕೂಡ ಸಂಜು ಹಿಂದಿಕ್ಕಿದ್ದಾರೆ. ಕೊಹ್ಲಿ 2014ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಕೊಹ್ಲಿ 77 ರನ್‌ ಸಿಡಿಸಿದ್ದರು.

IND vs NZ: 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಹೆನ್ರಿಚ್‌ ಕ್ಲಾಸೆನ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌

ಸಂಜು ಸ್ಯಾಮ್ಸನ್ (ಭಾರತ) - 89 ರನ್‌ vs ನ್ಯೂಜಿಲೆಂಡ್, 2026

ಮಾರ್ಲನ್‌ ಸ್ಯಾಮುಯೆಲ್ಸ್-(ವೆಸ್ಟ್‌ ಇಂಡೀಸ್‌)-85 ರನ್‌ vs ಇಂಗ್ಲೆಂಡ್, 2016

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - 85‌ ರನ್‌ vs ಆಸ್ಟ್ರೇಲಿಯಾ, 2021



ಮೂರನೇ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌

ಈ ಇನಿಂಗ್ಸ್‌ನ ಮೂಲಕ ಸಂಜು ಸ್ಯಾಮ್ಸನ್‌ ಮತ್ತೊಂದು ದಾಖಲೆಯನ್ನು ಕೂಡ ಬರೆದಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿಯೂ ಅರ್ಧಶತಕವನ್ನು ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ ಸಂಜು ಸ್ಯಾಮ್ಸನ್‌. ಇದಕ್ಕೂ ಮುನ್ನ ಪಾಕಿಸ್ತಾನ ಮಾಜಿ ನಾಯಕ ಶಾಹೀದ್‌ ಅಫ್ರಿದಿ ಹಾಗೂ ವಿರಾಟ್‌ ಕೊಹ್ಲಿ ಈ ದಾಖಲೆಯನ್ನು ಬರೆದಿದ್ದರು.

IND vs NZ T20 World Cup Final: ನ್ಯೂಜಿಲೆಂಡ್‌ ಎದುರು ಟಾಸ್‌ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್‌!

ವೇಗದ ಅರ್ಧಶತಕ ಬಾರಿಸಿದ್ದ ಅಭಿಷೇಕ್‌ ಶರ್ಮಾ

ಇದಕ್ಕೂ ಮುನ್ನ ಸತತ ವೈಫಲ್ಯಗಳಿಂದ ಭಾರಿ ಟೀಕೆಗಳಿಗೆ ಗುರಿಯಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್ ಶರ್ಮಾ ಮಹತ್ವದ ಫೈನಲ್‌ ಪಂದ್ಯದಲ್ಲಿ ಅಬ್ಬರಿಸಿದರು. ಅವರು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇದು ಅತಿ ವೇಗದ ಅರ್ಧಶತಕವಾಗಿದ್ದು, ಏಡೆನ್ ಮಾರ್ಕ್ರಮ್‌, ಜಾಕೋಬ್ ಬೆಥೆಲ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ದಾಖಲಿಸಿದ್ದ 19 ಚೆಂಡುಗಳ ಅರ್ಧಶತಕಗಳನ್ನು ಹಿಂದಿಕ್ಕಿದರು. ಇದೇ ವೇಳೆ, ಟಿ20 ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ದಾಖಲಾದ ಅತಿ ವೇಗದ ಅರ್ಧಶತಕವೂ ಇದಾಗಿದೆ.