ʻಸೆಲೆಕ್ಟರ್‌ಗಳ ನಿರ್ಧಾರವನ್ನು ಗೌರವಿಸಬೇಕುʼ: ಟಿ20 ವಿಶ್ವಕಪ್ ಭಾರತ ತಂಡದಿಂದ ಕೈ ಬಿಟ್ಟ ಬಗ್ಗೆ ಶುಭಮನ್ ಗಿಲ್ ಪ್ರತಿಕ್ರಿಯೆ!
Shubman Gill On T20 WC Snub: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಶುಭಮನ್ ಗಿಲ್ ಅವರನ್ನು ಕಡೆಗಣಿಸಲಾಗಿದೆ. ಹಾಗಾಗಿ ಅಭಿಷೇಕ್ ಶರ್ಮಾ ಜೊತೆಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸಂಜು ಸ್ಯಾಮ್ಸನ್ ಅವರನ್ನು ಉಳಿಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಶುಭಮನ್ ಗಿಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಗಿಲ್ ಪ್ರತಿಕ್ರಿಯೆ. -
ನವದೆಹಲಿ: 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಭಾರತ ತಂಡದಿಂದ ತನ್ನನ್ನು ಕೈ ಬಿಟ್ಟಿರುವ ಬಗ್ಗೆ ಶುಭಮನ್ ಗಿಲ್ (Shubman Gill) ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವರ್ಷದ ಏಷ್ಯಾ ಕಪ್ ಟೂರ್ನಿಯಿಂದ ಇಲ್ಲಿಯವರೆಗೂ ಶುಭಮನ್ ಗಿಲ್ ಅವರನ್ನು ಟಿ20ಐ ತಂಡದಲ್ಲಿ ಉಪ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿ (IND vs NZ) ಹಾಗೂ ಟಿ20 ವಿಶ್ವಕಪ್ ಭಾರತ ತಂಡದಿಂದ ಕೈ ಬಿಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಶುಭಮನ್ ಗಿಲ್, ಆಯ್ಕೆದಾರರ ನಿರ್ಧಾರವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಜನವರಿ 11 ರಂದು ನ್ಯೂಜಿಲೆಂಡ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಈ ಸರಣಿಯ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭಮನ್ ಗಿಲ್‌ಗೆ ಪತ್ರಕರ್ತರು, ಟಿ20 ವಿಶ್ವಕಪ್ ಭಾರತ ತಂಡದಿಂದ ಕೈ ಬಿಟ್ಟ ಬಗ್ಗೆ ಪ್ರಶ್ನೆಯನ್ನು ಹಾಕಿದರು. ಆಯ್ಕೆದಾರರು ತೆಗೆದುಕೊಂಡಿರು ನಿರ್ಧಾರದಿಂದ ನಾನು ತೃಪ್ತಿಪಟ್ಟುಕೊಂಡಿದ್ದೇನೆ ಎಂದಿದ್ದಾರೆ.
ಭಾರತ vs ನ್ಯೂಜಿಲೆಂಡ್ 1ನೇ ಏಕದಿನ ಪಂದ್ಯದ ಸಮಯ, ಪ್ರಸಾರ, ಸಂಭಾವ್ಯ ಆಡುವ ಬಳಗದ ಮಾಹಿತಿ ಇಲ್ಲಿದೆ
"ಮೊದಲನೆಯದಾಗಿ, ನನ್ನ ಜೀವನದಲ್ಲಿ ನಾನು ಎಲ್ಲಿ ಇರಬೇಕೋ ಅಲ್ಲೇ ಇದ್ದೇನೆ ಎಂಬುದು ನನ್ನ ನಂಬಿಕೆ. ನನ್ನ ಹಣೆಬರಹದಲ್ಲಿ ಏನೇ ಬರೆದಿದ್ದರೂ, ನಾನು ಅದನ್ನು ಸಾಧಿಸುತ್ತೇನೆ. ಒಬ್ಬ ಆಟಗಾರನಾಗಿ, ನನ್ನ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಲು ನಾನು ಬಯಸುತ್ತೇನೆ. ಇದರ ಜೊತೆಗೆ ಆಯ್ಕೆದಾರರ ನಿರ್ಧಾರವನ್ನೂ ನಾನು ಗೌರವಿಸುತ್ತೇನೆ. ಟಿ20 ತಂಡಕ್ಕೆ ನಾನು ಶುಭ ಹಾರೈಸುತ್ತೇನೆ. ಅವರು ವಿಶ್ವಕಪ್ ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಶುಭಮನ್ ಗಿಲ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಭಾರತ ಟಿ20 ತಂಡದಲ್ಲಿ ಆಂಕರ್ ಪಾತ್ರವನ್ನು ನಿರ್ವಹಿಸುವ ಆಟಗಾರನ ಕೊರತೆ ಎದುರಾಯಿತು. ಇದನ್ನೂ ಈ ಹಿಂದೆ ವಿರಾಟ್ ಕೊಹ್ಲಿ ನಿರ್ವಹಿಸುತ್ತಿದ್ದರು. ಹಾಗಾಗಿ ಮುಂದಿನ ಟಿ20 ವಿಶ್ವಕಪ್ ಟೂರ್ನಿಯ ದೃಷ್ಟಿಯಲ್ಲಿ ಶುಭಮನ್ ಗಿಲ್ ಅವರನ್ನು ಆಂಕರ್ ಪಾತ್ರಕ್ಕಾಗಿ ಅವಕಾಶವನ್ನು ನೀಡಲಾಗಿತ್ತು. ಆದರೆ, ಅವರಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಆರಂಭಿಕನಾಗಿ ಉತ್ತಮ ಬ್ಯಾಟ್ ಮಾಡುತ್ತಿದ್ದ ಸಂಜು ಸ್ಯಾಮ್ಸನ್ ಅವರ ಪ್ರದರ್ಶನದ ಮೇಲೆಯೂ ಪರಣಾಮ ಬೀರಿತು. ಆದರೆ, ಇದೀಗ ಟಿ20ಐ ತಂಡದಿಂದ ಗಿಕ್ ಅವರನ್ನು ಕೈ ಬಿಡಲಾಗಿದೆ.
Virat Kohli: ದಿಗ್ಗಜ ಸಚಿನ್ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್ ಕೊಹ್ಲಿ
2026ರ ಐಸಿಸಿ ಟಿ20 ವಿಶ್ವಕಪ್ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್