ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಮೊದಲನೇ ಒಟಿಐನಲ್ಲಿ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ನೋಡಿ ಕೈಲ್‌ ಜೇಮಿಸನ್‌ ಹೇಳಿದ್ದಿದು!

Kyle Jamieson on Virat Kohli: ಮೊದಲನೇ ಏಕದಿನ ಪಂದ್ಯದಲ್ಲಿ 93 ರನ್‌ಗಳ ಇನಿಂಗ್ಸ್‌ ಆಡಿ ಭಾರತ ತಂಡದ 4 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದ ವಿರಾಟ್‌ ಕೊಹ್ಲಿಯನ್ನು ನ್ಯೂಜಿಲೆಂಡ್‌ ವೇಗದ ಬೌಲರ್‌ ಕೈಲ್‌ ಜೇಮಿಸನ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿರಾಟ್‌ ಕೊಹ್ಲಿ ವಿಭಿನ್ನ ಹಂತದ ಬ್ಯಾಟ್ಸ್‌ಮನ್‌ ಆಗಿದ್ದು, ಅವರಂಥ ಆಟಗಾರನನ್ನು ತಂಡದಲ್ಲಿ ಹೊಂದುವುದು ಸುಲಭವಲ್ಲ ಎಂದಿದ್ದಾರೆ.

ವಿರಾಟ್‌ ಕೊಹ್ಲಿಯನ್ನು ಶ್ಲಾಘಿಸಿದ ಕೈಲ್‌ ಜೇಮಿಸನ್‌.

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ (IND vs NZ) ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯನ್ನು (Virat Kohli) ಕಿವೀಸ್‌ ವೇಗಿ ಕೈಲ್‌ ಜೇಮಿಸನ್‌ (Kyle Jamieson) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕೊಹ್ಲಿ ಇದೀಗ ವಿಭಿನ್ನವಾಗಿ ಕಾಣುತ್ತಿದ್ದಾರೆ ಹಾಗೂ ಅವರಂಥ ಶ್ರೇಷ್ಠ ಆಟಗಾರನನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ 301 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ವಿರಾಟ್‌ ಕೊಹ್ಲಿ 93 ರನ್‌ಗಳನ್ನು ಕಲೆ ಹಾಕಿದರು ಹಾಗೂ ಭಾರತ ತಂಡದ 4 ವಿಕೆಟ್‌ ಗೆಲುವಿಗೆ ನೆರವು ನೀಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾನುವಾರ ವಡೋರದ ಬಿಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 54ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಶುಭಮನ್‌ ಗಿಲ್‌ ಜೊತೆ ಶತಕದ ಜೊತೆಯಾಟವನ್ನುಆಡಿದ ಕೊಹ್ಲಿ, ಭಾರತ ತಂಡದ ನಾಲ್ಕು ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದ್ದಾರೆ. ಅಂದ ಹಾಗೆ ಕೈಲ್‌ ಜೇಮಿಸನ್‌ ಅವರೇ ವಿರಾಟ್‌ ಕೊಹ್ಲಿಯನ್ನು 100ರ ಸನಿಹದಲ್ಲಿ ಔಟ್‌ ಮಾಡಿದರು. 93 ರನ್‌ ಗಳಿಸಿದ ಬಳಿಕ ಕೊಹ್ಲಿ ಮಿಡ್‌ ಆಫ್‌ನಲ್ಲಿ ಕ್ಯಾಚ್‌ ಕೊಟ್ಟಿದ್ದರು. ಆ ಮೂಲಕ ಕೇವಲ 7 ರನ್‌ ಅಂತರದಲ್ಲಿ ಶತಕ ವಂಚಿತರಾದರು.

IND vs NZ: ವಾಷಿಂಗ್ಟನ್‌ ಸುಂದರ್‌ ಔಟ್‌, ಎರಡನೇ ಒಡಿಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ವಿರಾಟ್‌ ಕೊಹ್ಲಿ ಹಾಗೂ ಕೈಲ್‌ ಜೇಮಿಸನ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಡ್ರೆಸ್ಸಿಂಗ್‌ ರೂಂ ಹಂಚಿಕೊಂಡಿದ್ದರು. ವಿರಾಟ್‌ ಕೊಹ್ಲಿ ಸದ್ಯ ಅಗ್ರ ದರ್ಜೆಯಲ್ಲಿದ್ದಾರೆ ಹಾಗಾಗಿ ಅವರನ್ನು ಪಂದ್ಯದಲ್ಲಿ ನಿರ್ಣಯಿಸುವುದು ತುಂಬಾ ಕಷ್ಟ ಎಂದು ಕಿವೀಸ್‌ ವೇಗಿ ಹೇಳಿದ್ದಾರೆ.

32 ವರ್ಷಗಳ ಹಳೆಯ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಕೊಹ್ಲಿ ಸಜ್ಜು

ವಿರಾಟ್‌ ಕೊಹ್ಲಿ ಬಗ್ಗೆ ಕೈಲ್‌ ಜೇಮಿಸನ್‌ ಹೇಳಿದ್ದೇನು?

ಭಾನುವಾರ ಮೊದಲನೇ ಪಂದ್ಯದ ಸೋಲಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೈಲ್‌ ಜೇಮಿಸನ್‌, "ವಿರಾಟ್‌ ಕೊಹ್ಲಿಯವರು ಪ್ರಸ್ತುತ ಉತ್ತಮ ಅಥವಾ ಅಲ್ಲವೇ ಎಂದು ಎದುರಾಳಿ ತಂಡದ ಆಟಗಾರನ ದೃಷ್ಟಿಯಲ್ಲಿ ನಿರ್ಣಯಿಸುವುದು ಅಸಾಧ್ಯ. ಅವರು ದೀರ್ಘಾವಧಿ ಉತ್ತಮ ಆಟಗಾರನಾಗಿ ಬರುತ್ತಿದ್ದಾರೆ ಅಲ್ಲವೇ?," ಎಂದು ತಿಳಿಸಿದ್ದಾರೆ.

"ನೀವು ಪ್ರತಿ ಬಾರಿ ಅವರ ವಿರುದ್ಧ ಆಡುವಾಗಲೂ, ಸ್ಪರ್ಧಿಸಲು ನೀವು ಅತ್ಯುತ್ತಮವಾಗಿರಬೇಕು ಎಂದು ನೀವು ಭಾವಿಸುತ್ತೀರಿ. ಅವರು ಬೇರೆ ಮಟ್ಟದಲ್ಲಿದ್ದಾರೆ, ಅವರು ಹೆಚ್ಚಿನ ಕ್ರಿಕೆಟಿಗರಿಗಿಂತ ಬೇರೆ ಮಟ್ಟದಲ್ಲಿ ಆಟವನ್ನು ಆಡುತ್ತಾರೆ, (ಮತ್ತು) ಅವರು ಹೆಚ್ಚಿನ ಸಮಯ ಚೆನ್ನಾಗಿ ಕಾಣುತ್ತಿದ್ದರು," ಎಂದು ಕಿವೀಸ್‌ ವೇಗಿ ಶ್ಲಾಘಿಸಿದ್ದಾರೆ.

'ಐಪಿಎಲ್‌ನಲ್ಲೂ ಕಂಡಿದ್ದೇನೆ'; ಪ್ರೇಕ್ಷಕರ ವರ್ತನೆಗೆ ಗರಂ ಆದ ವಿರಾಟ್‌ ಕೊಹ್ಲಿ

"ನಾವು ಅವರನ್ನು ಹಿಡಿತದಲ್ಲಿಡಲು ಕೆಲವು ಯೋಜನೆಗಳನ್ನು ರೂಪಿಸಬೇಕಾಗಿದೆ, ಆದರೆ (ಹಾಗಾದರೆ) ನೀವು ಶ್ರೇಷ್ಠರನ್ನು ಹಿಡಿತದಲ್ಲಿಡುವುದಿಲ್ಲ, ಅವರಿಗೆ ಸ್ವಲ್ಪ ಮಟ್ಟಿಗೆ ಅವಕಾಶವಿದೆ, ಆದ್ದರಿಂದ ಅವರು ಆಡುವುದನ್ನು ನೋಡಿ ಆನಂದಿಸಿದೆ," ಎಂದು ಅವರು ಹೇಳಿದ್ದಾರೆ.