ಭಾರತ vs ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿಫೈನಲ್ ಗೆದ್ದೋರು ಚಾಂಪಿಯನ್ ಫಿಕ್ಸ್!
India-England semi-final: ಸದ್ಯಕ್ಕೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿಲ್ಲ. ಆದರೆ ದೇಶದ ಕೆಲವೆಡೆ ಅಕಾಲಿಕ ಮಳೆಯಾಗುತ್ತಿದೆ. ಒಂದೊಮ್ಮೆ ಪಂದ್ಯದ ದಿನ ಮಳೆ ಬಂದು ಆಟ ನಡೆಯದೇ ಇದ್ದರೆ ಮೀಸಲು ದಿನವಿದೆ. ಮೀಸಲು ದಿನವೂ ಮಳೆಯಿಂದ ಫಲಿತಾಂಶ ಬರದೇ ಹೋದರೆ, ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ತಂಡ ಫೈನಲ್‌ಗೆ ಲಗ್ಗೆಯಿಡಲಿದೆ.
India-England semi-final -
ಮುಂಬಯಿ, ಮಾ.3: ದಾಖಲೆಯ 6ನೇ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್(India-England semi-final) ಆಡಲು ಭಾರತ ಮತ್ತು ಇಂಗ್ಲೆಂಡ್ ಸಜ್ಜಾಗಿದೆ. ಇತ್ತಂಡಗಳು ಗುರುವಾರ(ಮಾ.5) ಐಕಾನಿಕ್ ಕ್ರಿಕೆಟ್ ಮೈದಾನ ವಾಂಖೆಡೆಯಲ್ಲಿ ಮುಖಾಮುಖಿಯಾಗಲಿವೆ. ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ವಿಶ್ವಕಪ್ ಸಾಧನೆ ಹೇಗಿದೆ ಎಂಬ ವರದಿ ಇಲ್ಲಿದೆ.
ಉಭಯ ತಂಡಗಳು ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಖಾಮುಖಿಯಾಗುತ್ತಿರುವ ಸತತ ಮೂರನೇ ಆವೃತ್ತಿ ಇದಾಗಿದೆ. 2022 ಮತ್ತು 2024 ರಲ್ಲಿ ಸೆಮಿಫೈನಲ್‌ನಲ್ಲಿಯೂ ಮುಖಾಮುಖಿಯಾಗಿದ್ದವು. ಸಾರಸ್ಯವೆಂದರೆ ಇತ್ತಂಡಗಳ ನಡುವಣ ಸೆಮಿಫೈನಲ್‌ನಲ್ಲಿ ಗೆದ್ದ ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ. ಈ ಬಾರಿ ಯಾರಿಗೆ ಆ ಅದೃಷ್ಟ ಸಿಗಲಿದೆ ಎಂದು ಕಾದು ನೋಡಬೇಕಿದೆ.
9 ವರ್ಷಗಳಿಂದ ಭಾರತ ಅಜೇಯ
ವಾಂಖೆಡೆಯಲ್ಲಿ, ಇಂಗ್ಲೆಂಡ್ ಇದುವರೆಗೆ ಆರು ಟಿ20 ಪಂದ್ಯಗಳನ್ನು ಆಡಿದೆ. ಈ ಪೈ ಮೂರರಲ್ಲಿ ಗೆದ್ದಿದೆ ಮತ್ತು ಮೂರರಲ್ಲಿ ಸೋತಿದೆ. ಏತನ್ಮಧ್ಯೆ, ಭಾರತವು ಇಲ್ಲಿ ಏಳು ಟಿ20 ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳಲ್ಲಿ ಜಯಗಳಿಸಿದೆ. ಡಿಸೆಂಬರ್ 2017 ರಿಂದ ಭಾರತ ಈ ಮೈದಾನದಲ್ಲಿ ಒಂದೇ ಒಂದು ಟಿ20 ಪಂದ್ಯ ಸೋತಿಲ್ಲ. ಮುಂಬೈನಲ್ಲಿ ಭಾರತದ ಎರಡು ಸೋಲು 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು 2012 ರಲ್ಲಿ ಇಂಗ್ಲೆಂಡ್ ವಿರುದ್ಧ ಬಂದಿತು. ಭಾರತ ಮತ್ತು ಇಂಗ್ಲೆಂಡ್ ಟಿ20ಯಲ್ಲಿ ವಾಂಖೆಡೆಯಲ್ಲಿ 2 ಬಾರಿ ಮುಖಾಮುಖಿಯಾಗಿವೆ, ತಲಾ ಒಂದು ಗೆಲುವು ಹಂಚಿಕೊಂಡಿವೆ.
ಟಿ20 ವಿಶ್ವಕಪ್‌ನಲ್ಲಿ ಭಾರತ vs ಇಂಗ್ಲೆಂಡ್ ಮುಖಾಮುಖಿ ದಾಖಲೆ
ಪಂದ್ಯಗಳು: 5
ಭಾರತ ಗೆಲುವು: 3
ಇಂಗ್ಲೆಂಡ್ ಗೆಲುವು: 2
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮುಖಾಮುಖಿ ದಾಖಲೆ
ಪಂದ್ಯ: 2
ಭಾರತ ಗೆಲುವು: 1
ಇಂಗ್ಲೆಂಡ್ ಗೆಲುವು: 1
ಟಿ20 ವಿಶ್ವಕಪ್ ಸೆಮೀಸ್, ಫೈನಲ್‌ಗೆ ಭಾರತವೇ ಆತಿಥ್ಯ
ಸೆಮಿಫೈನಲ್ ಪಂದ್ಯಕ್ಕೆ ಮಳೆ ಬಂದರೆ?
ಸದ್ಯಕ್ಕೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿಲ್ಲ. ಆದರೆ ದೇಶದ ಕೆಲವೆಡೆ ಅಕಾಲಿಕ ಮಳೆಯಾಗುತ್ತಿದೆ. ಒಂದೊಮ್ಮೆ ಪಂದ್ಯದ ದಿನ ಮಳೆ ಬಂದು ಆಟ ನಡೆಯದೇ ಇದ್ದರೆ ಮೀಸಲು ದಿನವಿದೆ. ಮೀಸಲು ದಿನವೂ ಮಳೆಯಿಂದ ಫಲಿತಾಂಶ ಬರದೇ ಹೋದರೆ, ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ತಂಡ ಫೈನಲ್‌ಗೆ ಲಗ್ಗೆಯಿಡಲಿದೆ. ಈ ಅದೃಷ್ಟ ಇಂಗ್ಲೆಂಡ್‌ಗೆ ಸಿಗಲಿದೆ. ಸೂಪರ್-8ರ ಹಂತದಲ್ಲಿ ಇಂಗ್ಲೆಂಡ್ ಗ್ರೂಪ್-2 ರಲ್ಲಿ ಅಗ್ರಸ್ಥಾನ ಪಡೆದಿತ್ತು. ಭಾರತ ಗ್ರೂಪ್-2 ರಲ್ಲಿ ಎರಡನೇ ಸ್ಥಾನ ಪಡೆದಿತ್ತು.