ನವದೆಹಲಿ: ಎರಡನೇ ಟೆಸ್ಟ್ ಪಂದ್ಯದ (IND vs SA) ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತವಾಗಿದೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಿಂದಲೂ ಹಿರಿಯ ವೇಗಿ ಕಗಸೊ ರಬಾಡ (Kagiso Rabada) ಹೊರ ಬಿದ್ದಿದ್ದಾರೆ. ಅವರು ಪಕ್ಕೆಲುಬು ಗಾಯದಿಂದ ಇನ್ನೂ ಗುಣಮುಖರಾಗದ ಕಾರಣ ಎರಡನೇ ಪಂದ್ಯದಲ್ಲಿಯೂ ಆಡುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವೂಮಾ (Temba Bavuma) ಸ್ಪಷ್ಟಪಡಿಸಿದ್ದಾರೆ. ಕೋಲ್ಕತಾ ಟೆಸ್ಟ್‌ಗೂ ಮುನ್ನ ಅಭ್ಯಾಸದ ವೇಳೆ ರಬಾಡ ಅವರು ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದರು.
ಕಗಿಸೊ ರಬಾಡ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಹಾಗೂ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರನ್ನು ಆಡಿಸಿ ಅಪಾಯ ತೆಗೆದುಕೊಳ್ಳಲು ತಂಡದ ವೈದ್ಯಕೀಯ ತಂಡ ಸಿದ್ದವಿಲ್ಲ ಎಂದು ಹರಿಣ ಪಡೆಯ ನಾಯಕ ತೆಂಬಾ ಬವೂಮಾ ತಿಳಿಸಿದ್ದಾರೆ.
"ಕಗಿಸೊ ರಬಾಡ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದಾರೆ," ಎಂದು ತೆಂಬಾ ಬವೂಮಾ ತಿಳಿಸಿದ್ದಾರೆ. ಅವರು ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರ ಆದರೆ, ಅವರು ಸಂಪೂರ್ಣವಾಗಿ ಗುಣಮುಖರಾಗಲು ಇನ್ನಷ್ಟು ಹೆಚ್ಚಿನ ಸಮಯದ ಅಗತ್ಯವಿದೆ. ಅವರ ಅನುಪಸ್ಥಿತಿ ಪ್ರವಾಸಿ ತಂಡಕ್ಕೆ ಎರಡನೇ ಟೆಸ್ಟ್‌ನಲ್ಲಿ ತಾಂತ್ರಿಕ ಹಿನ್ನಡೆಯನ್ನು ತಂದೊಡ್ಡಲಿದೆ. ಇದರ ಹೊರತಾಗಿಯೂ ಮೊದಲನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 30 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
IND vs SA: ಗುವಾಹಟಿಯ ನಿಗೂಡ ಪಿಚ್‌ನಲ್ಲಿ ಭಾರತಕ್ಕೆ ಟೆಸ್ಟ್ ಗೆಲ್ಲುವ ಸವಾಲು
ಎರಡೂ ತಂಡಗಳಿಗೂ ಗುವಾಹಟಿಯಲ್ಲಿ ಮೊದಲ ಅನುಭವ
ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರುವ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಪಿಚ್ ಮೇಲ್ಮೈಯ ಬಗ್ಗೆ ಬವೂಮಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪಿಚ್ ಸಾಮಾನ್ಯವಾಗಿ ಉಪಖಂಡದಲ್ಲಿ ಕಂಡುಬರುವ ರೀತಿಯ ಪರಿಸ್ಥಿತಿಗಳನ್ನು ಹೋಲುತ್ತದೆ. ಸ್ಪಿನ್ನರ್‌ಗಳು ಕ್ರಮೇಣ ನಿಯಂತ್ರಣ ತೆಗೆದುಕೊಳ್ಳುವ ಮುನ್ನ ಬ್ಯಾಟ್ ಮಾಡಲು ಪಿಚ್ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಇಲ್ಲಿನ ವಿಕೆಟ್ ನೋಡಲು ತುಂಬಾ ಫ್ರೆಶ್ ಆಗಿ ಕಾಣುತ್ತಿದೆ ಹಾಗೂ ಕೋಲ್ಕತ್ತಾಗೆ ಹೋಲಿಸಿದರೆ ವ್ಯತ್ಯಾಸದ ವಿಷಯದಲ್ಲಿ ಹೆಚ್ಚು ಇಲ್ಲಿನ ಪಿಚ್ ಸ್ಥಿರವಾಗಿರುತ್ತದೆ," ಎಂದು ತೆಂಬಾ ಬವೂಮಾ ತಿಳಿಸಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ಒಡಿಐ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ!
ಕಗಿಸೊ ರಬಾಡಗೆ ಬದಲಿ ಆಟಗಾರು ಯಾರು?
"ಕಗಿಸೊ ರಬಾಡ ಅವರ ಜಾಗಕ್ಕೆ ಸೂಕ್ತ ಆಟಗಾರನನ್ನು ನಾವು ಪಂದ್ಯದ ದಿನ ಬೆಳಿಗ್ಗೆ ನಿರ್ಧರಿಸುತ್ತೇವೆ," ಎಂದು ದಕ್ಷಿಣ ಆಫ್ರಿಕಾ ನಾಯಕ ಹೇಳಿದ್ದಾರೆ. ಇಲ್ಲಿನ ಪಿಚ್ ಬೌನ್ಸ್‌ಗೆ ನೆರವು ನೀಡಲಿದೆ. ಆರಂಭದಲ್ಲಿ ಹೆಚ್ಚಿನ ವೇಗದಿಂದ ಕೂಡಿದ್ದು, ಪಂದ್ಯ ಸಾಗುತ್ತಿದ್ದಂತೆ ನಿಧಾನಗತಿಯ ಬೌಲರ್‌ಗಳಿಗೆ ಪಿಚ್ ನೆರವು ನೀಡಲಿದೆ.
"ಆರಂಭಿಕ ಎರಡು ದಿನಗಳಲ್ಲಿ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಲಿದೆ. ನಂತರ ಸ್ಪಿನ್ನರ್‌ಗಳು ಇಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದರ ಪ್ರಕಾರ ಸ್ಪಿನ್ನರ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಮುನ್ಸೂಚನೆಯನ್ನು ಅವರು ನೀಡಿದ್ದಾರೆ ಅಥವಾ ಬೌಲಿಂಗ್ ವಿಭಾಗ ಬಹುಬೇಗ ಇಲ್ಲಿನ ಕಂಡೀಷನ್ಸ್‌ಗೆ ಹೊಂದಿಕೊಳ್ಳಲಿದೆ ಎಂಬುದು ಇದರಿಂದ ತಿಳಿಯಲಿದೆ.
IND vs SA: ಗೌತಮ್ ಗಂಭೀರ್ ಕೋಚಿಂಗ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಎಬಿ ಡಿ ವಿಲಿಯರ್ಸ್!
ಗುವಾಹಟಿಯಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಹಾಗಾಗಿ ಎರಡೂ ತಂಡಗಳಿಗೂ ಈ ಪಂದ್ಯದಲ್ಲಿ ಹೊಸ ಅನುಭವ ಸಿಗಲಿದೆ. ಹೀಗಾಗಿ ಈ ಪಂದ್ಯ ಅತ್ಯಂತ ಆಸಕ್ತಿದಾಯಕವಾಗಿರಲಿದೆ. ಅಂದ ಹಾಗೆ ಕೀ ವೇಗದ ಬೌಲರ್ ಕಗಿಸೊ ರಬಾಡ ಅವರ ಅನುಪಸ್ಥಿತಿ ಭಾರತ ತಂಡಕ್ಕೆ ಅನುಕೂಲವಾಗಲಿದೆ.