ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಗೌತಮ್‌ ಗಂಭೀರ್‌ ಕೋಚಿಂಗ್‌ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಎಬಿ ಡಿ ವಿಲಿಯರ್ಸ್‌!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್‌ಗಳಿಂದ ಸೋತಿತ್ತು. ಸೋಲಿನ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಪಿಚ್ ಅನ್ನು ಸಮರ್ಥಿಸಿಕೊಂಡರು ಮತ್ತು ಸೋಲಿಗೆ ಆಟಗಾರರನ್ನೇ ದೂಷಿಸಿದರು. ಈ ಬಗ್ಗೆ ಇದೀಗ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ಗೌತಮ್‌ ಗಂಭೀರ್‌ ಕೋಚಿಂಗ್‌ ಬಗ್ಗೆ ಎಬಿಡಿ ಅಭಿಪ್ರಾಯ!

ಗೌತಮ್‌ ಗಂಭೀರ್‌ ಹೇಳಿಕೆಯನ್ನು ಖಂಡಿಸಿದ ಎಬಿ ಡಿ ವಿಲಿಯರ್ಸ್‌. -

Profile
Ramesh Kote Nov 20, 2025 4:15 PM

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs SA) ಭಾರತ ತಂಡ ಹೀನಾಯ ಸೋಲು ಅನುಭವಿಸಿತು. ಇದರ ನಂತರ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಅನ್ನು ಮಾಜಿ ಆಟಗಾರರಿಂದ ಹಿಡಿದು ಅಭಿಮಾನಿಗಳವರೆಗೆ ತೀವ್ರವಾಗಿ ಟೀಕಿಸಲಾಯಿತು. ಪಿಚ್ ಅಸಮಾನ ಬೌನ್ಸ್ ಅನ್ನು ತೋರಿಸಿತು, ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿತ್ತು ಮತ್ತು ಸ್ಪಿನ್ನರ್‌ಗಳಿಗೆ ಹೆಚ್ಚಿನ ತಿರುವು ತಂದುಕೊಟ್ಟಿತ್ತು. ಸೈಮನ್ ಹಾರ್ಮರ್ (Simon Harmer) ಎಂಟು ವಿಕೆಟ್‌ಗಳನ್ನು ಕಬಳಿಸಿ ಭಾರತದ ಸೋಲಿಗೆ ಮುದ್ರೆ ಹಾಕಿದರು. ಅಂತಿಮ ಇನಿಂಗ್ಸ್‌ನಲ್ಲಿ ಭಾರತ ತಂಡ 124 ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ, ಆ ಮೂಲಕ ಪಂದ್ಯವನ್ನು 30 ರನ್‌ಗಳಿಂದ ಸೋಲು ಅನುಭವಿಸಿತು. ಈ ಬಗ್ಗೆ ಇದೀಗ ಎಬಿ ಡಿ ವಿಲಿಯರ್ಸ್‌ (AB De Villiers) ಕಳವಳ ವ್ಯಕ್ತಪಡಿಸಿದ್ದಾರೆ.

ಪಂದ್ಯದ ನಂತರ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಪಿಚ್ ಅನ್ನು ಸಮರ್ಥಿಸಿಕೊಂಡರು, ಬ್ಯಾಟ್ಸ್‌ಮನ್‌ಗಳು ರಕ್ಷಣಾತ್ಮಕವಾಗಿ ಆಡಿದ್ದರೆ, ಅವರು ರನ್ ಗಳಿಸಬಹುದಿತ್ತು ಎಂದು ಹೇಳಿದ್ದರು. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟಿಂಗ್ ದಂತಕಥೆ ಎಬಿ ಡಿವಿಲಿಯರ್ಸ್ ಗಂಭೀರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದರು. ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, "ನಾನು ಕಣ್ಣು ಮಿಟುಕಿಸುವ ಮೊದಲೇ ಟೆಸ್ಟ್ ಪಂದ್ಯ ಮುಗಿದಿತ್ತು," ಎಂದು ಹೇಳಿದ ಅವರು, ಭಾರತದ ಕೋಚ್ ಗೌತಮ್ ಗಂಭೀರ್ ಅವರು ನಾವು ಬಯಸಿದ ಪಿಚ್‌ ಇದಾಗಿತ್ತು ಎಂದು ಹೇಳಿದ್ದರು. ಇದು ತುಂಬಾ ಆಸಕ್ತಿದಾಯಕ ಹೇಳಿಕೆ. ಬಹುಶಃ ಅವರು ಆಟಗಾರರನ್ನು ಟೀಕಿಸುತ್ತಿದ್ದಾರೆ. ನಾವು ಅಂತಹ ಪಿಚ್ ಅನ್ನು ಸಿದ್ಧಪಡಿಸಿದ್ದರೆ, ನಾವು ಏಕೆ ಪ್ರದರ್ಶನ ನೀಡಲಿಲ್ಲ?" ಎಂದು ಎಬಿಡಿ ಪ್ರಶ್ನೆ ಮಾಡಿದ್ದಾರೆ.

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಶುಭಮನ್‌ ಗಿಲ್‌ ಔಟ್‌?

ಭಾರತ ತಂಡದ ಬಗ್ಗೆ ಎಬಿಡಿ ಕಳವಳ

"ಕಳೆದ ಮೂರರಿಂದ ಐದು ವರ್ಷಗಳಲ್ಲಿ ಭಾರತ ತಂಡದಲ್ಲಿ ವಿಭಿನ್ನ ಪ್ರವೃತ್ತಿ ಕಂಡುಬಂದಿದೆ. ಭಾರತವನ್ನು ತವರಿನಲ್ಲಿ ಸೋಲಿಸುವುದು ತುಂಬಾ ಕಷ್ಟ ಎಂಬುದು ಸ್ಪಷ್ಟವಾಗಿದೆ, ಆದರೆ ಕಳೆದ ನಾಲ್ಕರಿಂದ ಐದು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಇದು ಭಾರತಕ್ಕೆ ಕಳವಳಕಾರಿ ವಿಷಯ. ಅವರು ತವರಿನಲ್ಲಿ ನಾಲ್ಕು ಪಂದ್ಯಗಳನ್ನು ಸೋತಿದ್ದಾರೆ... ಏನಾಗುತ್ತಿದೆ? ಅವರು ಸ್ಪಿನ್‌ನ ಕೆಟ್ಟ ಆಟಗಾರರಾಗಿದ್ದಾರೆಯೇ? ನಾನು ಹಾಗೆ ಭಾವಿಸುವುದಿಲ್ಲ. ಎದುರಾಳಿ ತಂಡಗಳು ಈಗ ಹೆಚ್ಚು ಸಿದ್ಧರಾಗಿ ಬಂದಿವೆ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿವೆ," ಎಂದು ಅವರು ತಿಳಿಸಿದ್ದಾರೆ.

IND vs SA: ʻಗೌತಮ್‌ ಗಂಭೀರ್‌ ಮೈದಾನದಲ್ಲಿ ಆಡುತ್ತಿಲ್ಲʼ-ಟೀಕಾಕಾರರಿಗೆ ಉತ್ತಪ್ಪ ತಿರುಗೇಟು!

ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿತ್ತು

ಭಾರತ ತಂಡ 2012ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು. ಇದಾದ ನಂತರ, 12 ವರ್ಷಗಳ ಕಾಲ ಭಾರತದಲ್ಲಿ ಯಾವುದೇ ತಂಡ ಸರಣಿಯನ್ನು ಗೆದ್ದಿರಲಿಲ್ಲ. ಈ ಅವಧಿಯಲ್ಲಿ, ಟೀಮ್ ಇಂಡಿಯಾ ಕೇವಲ ನಾಲ್ಕು ಟೆಸ್ಟ್‌ಗಳನ್ನು ಮಾತ್ರ ಸೋತಿತ್ತು. 2017 ಮತ್ತು 2023 ರಲ್ಲಿ ಆಸ್ಟ್ರೇಲಿಯಾ ಎರಡು ಟೆಸ್ಟ್‌ಗಳನ್ನು ಗೆದ್ದರೆ, ಇಂಗ್ಲೆಂಡ್ ಕೂಡ ಎರಡು ಟೆಸ್ಟ್‌ಗಳನ್ನು ಗೆದ್ದಿತ್ತು. ಆದರೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ, ಭಾರತ ತಂಡ ತವರಿನಲ್ಲಿ ಎಂಟು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಸೋಲು ಅನುಭವಿಸಿದೆ. ನ್ಯೂಜಿಲೆಂಡ್ ಕಳೆದ ವರ್ಷ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು.