IND vs SA: 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಗರ್ಲ್‌ಫ್ರೆಂಡ್‌ಗೆ ಪ್ಲೈಯಿಂಗ್ ಕಿಸ್ ಕೊಟ್ಟ ಹಾರ್ದಿಕ್ ಪಾಂಡ್ಯ!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಐದನೇ ಟಿ20ಐ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಭಾರತದ ಪರ ಅತ್ಯಂತ ಎರಡನೇ ಟಿ20ಐ ಅರ್ಧಶತಕವನ್ನು ಬಾರಿಸಿದರು.
ಅರ್ಧಶತಕದ ಬಳಿಕ ಪ್ಲೈಯಿಂಗ್ ಕಿಸ್ ಕೊಟ್ಟ ಹಾರ್ದಿಕ್. -
ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯ(IND vs SA) ಅಂತಿಮ ಪಂದ್ಯ ಡಿಸೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತದ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅದ್ಭುತ ಬ್ಯಾಟಿಂಗ್ ನಡೆಸಿದರು. ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಹಾರ್ದಿಕ್ ಪಾಂಡ್ಯ ಅವರ ಗೆಳತಿ ಮಹಿಕಾ ಶರ್ಮಾ ಕೂಡ ಸ್ಟ್ಯಾಂಡ್‌ನಲ್ಲಿ ಹಾಜರಿದ್ದರು. ಹಾರ್ದಿಕ್ ದೊಡ್ಡ ಹೊಡೆತಗಳನ್ನು ಹೊಡೆಯುತ್ತಿದ್ದಂತೆ ಮಹಿಕಾ ಚಪ್ಪಾಳೆ ತಟ್ಟುತ್ತಿದ್ದರು. ಹಾರ್ದಿಕ್ ತನ್ನ ಅರ್ಧಶತಕವನ್ನು ತಲುಪಿದಾಗ, ಮಹಿಕಾ ಶರ್ಮಾಗೆ ((Maheika Sharma) ಪಾಂಡ್ಯ ಫ್ಲೈಯಿಂಗ್ ಕಿಸ್ ನೀಡಿದರು. ನಂತರ ಆಕೆ ಕೂಡ ಹಾರ್ದಿಕ್‌ಗೆ ಫ್ಲೈಯಿಂಗ್ ಕಿಸ್ ನೀಡಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಟಿ20ಐಗಳಲ್ಲಿ ಭಾರತದ ಎರಡನೇ ವೇಗದ ಅರ್ಧಶತಕವಾಗಿದೆ. ಟೀಮ್ ಇಂಡಿಯಾ ಪರ ಟಿ20ಐಗಳಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದೆ, ಅವರು 2007 ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್‌ಗೆ ಓವರ್‌ನಲ್ಲಿ ಸತತ ಆರು ಸಿಕ್ಸರ್ ಬಾರಿಸಿದ್ದರು. ಅಂದ ಹಾಗೆ ಹಾರ್ದಿಕ್ ಪಾಂಡ್ಯ 25 ಎಸೆತಗಳನ್ನು ಎದುರಿಸಿ 63 ರನ್ ಗಳಿಸಿದರು, 252ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದು ವಿಶೇಷ. ಪಾಂಡ್ಯ ತಮ್ಮ ಇನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು.
IND vs SA: ಹಾರ್ದಿಕ್ ಪಾಂಡ್ಯ ಅಬ್ಬರ, 5ನೇ ಪಂದ್ಯ ಗೆದ್ದು ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!
ಜಾರ್ಜ್ ಲಿಂಡೆ ಓವರ್‌ನಲ್ಲಿ 20 ರನ್ ಸಿಡಿಸಿದ್ದ ಹಾರ್ದಿಕ್
ಭಾರತದ ಇನಿಂಗ್ಸ್‌ನ 14 ನೇ ಓವರ್ ಅನ್ನು ದಕ್ಷಿಣ ಆಫ್ರಿಕಾ ಪರ ಜಾರ್ಜ್ ಲಿಂಡೆ ಹಾಕಿದ್ದರು. ಅವರ ಓವರ್‌ನಲ್ಲಿ ಒಟ್ಟು 27 ರನ್‌ಗಳು ಬಂದವು. ಹಾರ್ದಿಕ್ ಪಾಂಡ್ಯ, ಲಿಂಡೆ ಅವರ 4 ಎಸೆತಗಳನ್ನು ಎದುರಿಸಿ 20 ರನ್ ಗಳಿಸಿದರು. ಹಾರ್ದಿಕ್ ಅವರ ಓವರ್‌ನಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಭಾರತ 232 ರನ್ ಕಲೆ ಹಾಕಿದ್ದ ಭಾರತ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡ, ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 231 ರನ್ ಗಳಿಸಿತು. ತಿಲಕ್ ವರ್ಮಾ 73 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಹಾರ್ದಿಕ್ ಪಾಂಡ್ಯ ಜೊತೆಗೆ, ಸಂಜು ಸ್ಯಾಮ್ಸನ್ (37) ಮತ್ತು ಅಭಿಷೇಕ್ ಶರ್ಮಾ (34) ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು.
HARDIK PANDYA SHOWING LOVE TO HIS GF#INDvSA pic.twitter.com/kOvPkcR5Jj
— rajan kumar (@r05rajan) December 19, 2025
ಭಾರತ ತಂಡಕ್ಕೆ 30 ರನ್ ಜಯ
ಬಳಿಕ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಕ್ವಿಂಟಿನ ಡಿ ಕಾಕ್ ಅವರು 35 ಎಸೆತಗಳಲ್ಲಿ 65 ರನ್ ಸಿಡಿಸಿದ್ದರು. ಇವರ ಜೊತೆಗೆ ಡೆವಾಲ್ಡ್ ಬ್ರೆವಿಸ್ 31 ರನ್ ಬಾರಿಸಿದ್ದರು. ಆದರೆ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ಅಂತಿಮವಾಗಿ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ ದಕ್ಷಿಣ ಆಫ್ರಿಕಾ 201 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಟೀಮ್ ಇಂಡಿಯಾ 30 ರನ್‌ಗಳಿಂದ ಗೆದ್ದು ಟಿ20ಐ ಸರಣಿಯನ್ನು 3-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಭಾರತದ ಪರ ವರುಣ್ ಚಕ್ರವರ್ತಿ 4 ವಿಕೆಟ್ ಕಿತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.