IND vs SA: ಎರಡನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸೂಚಿಸಿದ ಆರ್ ಅಶ್ವಿನ್!
ಶನಿವಾರ ಗುಹವಾಟಿಯಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಕುರಿತು ಮಾತನಾಡಿರುವ ಮಾಜಿ ಸ್ಪಿನ್ ಬೌಲರ್ ಆರ್ ಅಶ್ವಿನ್, ಮೊದಲ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿರುವ ನಾಯಕ ಶುಭ್ ಮನ್ ಗಿಲ್ ಬದಲಿಗೆ ಸಾಯಿ ಸುದರ್ಶನ್ ಮತ್ತು ಅಕ್ಷರ್ ಪಟೇಲ್ ಬದಲಿಗೆ ನಿತೀಶ್ ರೆಡ್ಡಿ ಅವರಿಗೆ ತಂಡದಲ್ಲಿ ಸ್ಥಾನ ನೀಡುವುದು ಸೂಕ್ತ ಎಂದಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸೂಚಿಸಿದ ಆರ್ ಅಶ್ವಿನ್. -
ನವದೆಹಲಿ: ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ(IND vs SA) ಮುನ್ನ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ (Shubman Gill) ತಂಡದಿಂದ ಹೊರಬಿದ್ದಿರುವುದು ಆತಿಥೇಯರಿಗೆ ದೊಡ್ಡ ಹಿನ್ನಡೆಯಾಗಿದೆ. ಕೊಲ್ಕತಾ ಟೆಸ್ಟ್‌ನಲ್ಲಿ 30 ರನ್ ಗಳಿಂದ ಸೋಲು ಅನುಭವಿಸಿದ್ದ ಭಾರತ, ಎರಡು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಇದೀಗ ಸರಣಿಯನ್ನು ಸಮಬಲ ಮಾಡಿಕೊಳ್ಳಲು ಗುವಾಹಟಿಯಲ್ಲಿ ಗೆಲುವು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಿನ್ ದಂತಕತೆ ಆರ್ ಅಶ್ವಿನ್ (R Ashwin) ಮುಂದಿನ ಪಂದ್ಯಕ್ಕೆ ತಂಡದಲ್ಲಿ ಎರಡು ಬದಲಾವಣೆಗಳನ್ನು ಸೂಚಿಸಿದ್ದಾರೆ.
ಗಾಯಕ್ಕೆ ತುತ್ತಾಗಿರುವ ನಾಯಕ ಶುಭಮನ್ ಗಿಲ್ ಬದಲಿಗೆ ಸಾಯಿ ಸುದರ್ಶನ್ ಮರಳುತ್ತಾರೆ ಮತ್ತು ಭಾರತಕ್ಕೆ ಈಗಾಗಲೇ ಮೂರು ಸ್ಪಿನ್ ಬೌಲಿಂಗ್ ಆಯ್ಕೆಗಳಿರುವುದರಿಂದ ಅಕ್ಷರ್ ಪಟೇಲ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs SA: ಭಾರತ ತಂಡದ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಅಜಿಂಕ್ಯ ರಹಾನೆ!
ಭಾರತಕ್ಕೆ ಎರಡು ಬದಲಾವಣೆ ಸೂಚಿಸಿದ ಅಶ್ವಿನ್
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಮಾಜಿ ಸ್ಪಿನ್ನರ್ ಆರ್ ಅಶ್ವಿನ್, "ಅಕ್ಷರ್ ಪಟೇಲ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಮತ್ತು ಗಿಲ್ ಬದಲಿಗೆ ಸಾಯಿ ಸುದರ್ಶನ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸ್ಪಿನ್‌ನಲ್ಲಿ ಪರಿಣಾಮಕಾರಿಯಾಗಿ ಬೌಲ್ ಮಾಡಬೇಕೆಂದರೆ ಜಡೇಜಾ, ವಾಷಿ ಮತ್ತು ಕುಲ್ದೀಪ್ ಅವರೊಂದಿಗೆ ಆಡಬೇಕು. ಅದು ದೊಡ್ಡ ತಪ್ಪು ಎಂದು ನಾನು ಹೇಳುತ್ತಿಲ್ಲ ಆದರೆ ನಿಮಗೆ ಹೆಚ್ಚಿನ ಆಯ್ಕೆಗಳಿದ್ದರೆ, ಸ್ಪಿನ್ನರ್‌ಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಬಗ್ಗೆ ನೀವು ಗೊಂದಲಕ್ಕೊಳಗಾಗಬಹುದು. ಅಕ್ಷರ್ ಗುವಾಹಟಿ ಆಡದಿದ್ದರೆ ಬುಮ್ರಾ ಅವರೊಂದಿಗೆ ಪಂತ್ ಪ್ರಾರಂಭಿಸುತ್ತಿದ್ದರು. ನೀವು ನಿತೀಶ್ ಅವರನ್ನು ಆಡಿಸುತ್ತಿದ್ದರೆ, ನಿಮ್ಮ ಸ್ಟ್ರೈಕ್ ಬೌಲರ್‌ಗಳು ಯಾರಾಗಿರುತ್ತಾರೆ ಎಂಬುದರ ಕುರಿತು ನೀವು ಸ್ಪಷ್ಟವಾಗಿರಬೇಕು," ಎಂದು ಹೇಳಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ, ಎರಡನೇ ಟೆಸ್ಟ್‌ನಿಂದಲೂ ಕಗಿಸೊ ರಬಾಡ ಔಟ್!
ರಿಷಭ್ ಪಂತ್‌ಗೆ ಸಹ ಆಟಗಾರರ ಬೆಂಬಲ ತುಂಬಾ ಮುಖ್ಯ
ಭಾರತದ ಹಿರಿಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕೂಡ ಈ ಚರ್ಚೆಯ ಭಾಗವಾಗಿದ್ದರು. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ನಾಯಕ ರಿಷಭ್ ಪಂತ್ ಮುನ್ನಡೆಸುತ್ತಿರುವುದರಿಂದ ಅವರಿಗೆ ಸಾಥ್ ನೀಡವುದು ತುಂಬಾ ಮುಖ್ಯ ಎಂದು ಅವರು ತಿಳಿಸಿದ್ದಾರೆ.
"ರಿಷಭ್ ಪಂತ್ ಅವರಿಗೆ ಸಾಥ್ ನೀಡಲು ಸಹ ಆಟಗಾರರ ಬೆಂಬಲದ ಅಗತ್ಯವಿದೆ. ನೀವು ಮೂರು ಅಥವಾ ನಾಲ್ಕು ಆಯ್ಕೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಯೋಜನೆ ಇಲ್ಲದೆ ಕಣಕ್ಕಿಳಿದರೆ ಗೆಲುವು ಸಾಧ್ಯವಿಲ್ಲ. ಎದುರಾಳಿ ತಂಡವೂ ಬಲಿಷ್ಠ ತಂಡವಾಗಿದೆ. ಅವರು ಸರಣಿಯನ್ನು ಗೆಲ್ಲಲು ಬಯಸುತ್ತಾರೆ. ರಿಷಭ್ ತನ್ನ ಸಾಮರ್ಥ್ಯ ಮತ್ತು ವಿಧಾನಗಳನ್ನು ಬೆಂಬಲಿಸಬೇಕಾಗುತ್ತದೆ. ಅವರು ಆಟಗಾರರಿಗೆ ಸ್ವಲ್ಪ ಆತ್ಮವಿಶ್ವಾಸವನ್ನು ನೀಡಬೇಕಾಗುತ್ತದೆ. ಎರಡು ಪಂದ್ಯಗಳ ಸರಣಿಯಲ್ಲಿ ಹೆಚ್ಚಿನ ಸಮಯವಿಲ್ಲ," ಎಂದು ರಹಾನೆ ಹೇಳಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಮಾಡುವಾಗ ಗಾಯಗೊಂಡಿದ್ದ ಗಿಲ್ ಅವರು ತಂಡದಿಂದ ಬಿಡುಗಡೆಯಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ದೃಷ್ಟಿಯಿಂದ ಎರಡನೇ ಟೆಸ್ಟ್ ಭಾರತಕ್ಕೆ ನಿರ್ಣಾಯಕವಾಗಿದೆ.