ನವದೆಹಲಿ: ಭಾರತ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮಾ (Rohit Sharma) ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಬಾಂಧವ್ಯದ ಬಗ್ಗೆ ಹಲವು ನಕಾರಾತ್ಮಕ ವರದಿಗಳಾಗಿವೆ. ಗಂಭೀರ್ ಹೆಡ್ ಕೋಚ್ ಆದ ಬಳಿಕ ಭಾರತ ತಂಡದ ವಾತಾವರಣ ಉತ್ತಮವಾಗಿಲ್ಲ ಎಂಬ ಬಗ್ಗೆಯೂ ಸುದ್ದಿಗಳು ಹರಿದಾಡಿವೆ. ಅಲ್ಲದೆ ಕೊಹ್ಲಿ ಹಾಗೂ ರೋಹಿತ್ ಸೇರಿದಂತೆ ಹಿರಿಯ ಆಟಗಾರರನ್ನು ನಿರ್ಲಕ್ಷ್ಯೆ ಭಾವನೆ ತೋರಲಾಗುತ್ತಿದೆ ಹಾಗೂ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈ ಇಬ್ಬರನ್ನೂ ಆಡಿಸುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಈ ಬಗ್ಗೆ ಸ್ಪಿನ್ ದಂತಕತೆ ಹರ್ಭಜನ್ ಸಿಂಗ್ (Harbhajan Singh) ಪ್ರತಿಕ್ರಿಯೆ ನೀಡಿದ್ದಾರೆ. ಏನೂ ಸಾಧನೆ ಮಾಡದವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯವನ್ನು ನಿರ್ಧರಿಸುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಹರ್ಭಜನ್ ಸಿಂಗ್, ಭಾರತದ ಹಿರಿಯ ಆಟಗಾರರ ಸುತ್ತಲಿನ ಪರಿಸರದ ಬಗ್ಗೆ ತೀಕ್ಷ್ಣವಾದ ಟೀಕೆಯನ್ನು ವ್ಯಕ್ತಪಡಿಸಿದರು. ಹೆಚ್ಚಿನ ಸಾಧನೆ ಮಾಡದ ವ್ಯಕ್ತಿಗಳಿಂದ ಅವರ (ರೋ-ಕೊ) ಭವಿಷ್ಯದ ಬಗ್ಗೆ ನಿರ್ಧಾರಗಳು ಪ್ರಭಾವಿತವಾಗಿವೆ ಎಂದು ತೋರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ, ರೋಹಿತ್ ಮತ್ತು ಗಂಭೀರ್ ನಡುವಿನ ಸಂವಹನ ಅಂತರದ ಬಗ್ಗೆ ನಡೆಯುತ್ತಿರುವ ವದಂತಿಗಳ ನಡುವೆ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.
IND vs SA: ಕೊಹ್ಲಿ, ಗಾಯಕ್ವಾಡ್ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
"ಇದು ನಮ್ಮ ತಿಳುವಳಿಕೆಯನ್ನು ಮೀರಿದ್ದು. ನಾನು ಒಬ್ಬ ಆಟಗಾರನಾಗಿರುವುದರಿಂದ ಮತ್ತು ನಾನು ನೋಡಿದ್ದು ನನಗೂ ಸಂಭವಿಸಿರುವುದರಿಂದ ನನಗೆ ಉತ್ತರಿಸಲು ಸಾಧ್ಯವಾಗದಿರಬಹುದು. ಇದು ನನ್ನ ಅನೇಕ ತಂಡದ ಸದಸ್ಯರಿಗೆ ಸಂಭವಿಸಿದೆ, ಆದರೆ ಇದು ತುಂಬಾ ದುರದೃಷ್ಟಕರ. ನಾವು ಅದರ ಬಗ್ಗೆ ಮಾತನಾಡುವುದಿಲ್ಲ ಅಥವಾ ಅದರ ಬಗ್ಗೆ ಚರ್ಚೆ ನಡೆಸುವುದಿಲ್ಲ," ಎಂದು ಹರ್ಭಜನ್ ಪಿಟಿಐಗೆ ತಿಳಿಸಿದ್ದಾರೆ.
ಹೆಚ್ಚು ಸಾಧಿಸದ ಜನರು ಕೊಹ್ಲಿ, ರೋಹಿತ್ ಭವಿಷ್ಯವನ್ನು ನಿರ್ಧರಿಸುತ್ತಾರೆ: ಹರ್ಭಜನ್ ಸಿಂಗ್
"ಹೆಚ್ಚು ಸಾಧಿಸದ ಜನರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ನಿರ್ಧರಿಸುತ್ತಿರುವುದು ಸ್ವಲ್ಪ ದುರದೃಷ್ಟಕರ," ಎಂದು ಹೇಳಿದ ಅವರು, ಕೊಹ್ಲಿ ಮತ್ತು ರೋಹಿತ್ ಅವರ ಮುಂದುವರಿದ ಶ್ರೇಷ್ಠತೆಯನ್ನು ಎತ್ತಿ ತೋರಿಸಿದರು. "ಅವರು ಯಾವಾಗಲೂ ರನ್ ಗಳಿಸಿದ್ದಾರೆ ಮತ್ತು ಯಾವಾಗಲೂ ಭಾರತಕ್ಕೆ ಉತ್ತಮ ಆಟಗಾರರಾಗಿದ್ದಾರೆ. ನನಗೆ ಅವರ ಬಗ್ಗೆ ತುಂಬಾ ಸಂತೋಷವಾಗಿದೆ, ಅವರು ತುಂಬಾ ಬಲಶಾಲಿಯಾಗುತ್ತಿದ್ದಾರೆ. ಕೇವಲ ಬಲಶಾಲಿಯಾಗುವುದಲ್ಲ, ಆದರೆ ಯುವ ಪೀಳಿಗೆ ಅನುಸರಿಸಬೇಕಾದ ಮಾದರಿಯನ್ನು ಮತ್ತು ಚಾಂಪಿಯನ್ ಆಗಲು ಏನು ಬೇಕು ಎಂಬುದನ್ನು ತೋರಿಸುತ್ತಾರೆ,ʼ ಎಂದು ಹೇಳಿದ್ದಾರೆ.
IND vs SA: ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಏಡೆನ್ ಮಾರ್ಕ್ರಮ್!
ಹರ್ಭಜನ್ ಸಿಂಗ್ ಅವರ ಹೇಳಿಕೆಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ನಡುವಣ ಬಾಂಧವ್ಯ ಕಠಿಣವಾಗಿ ಮುಂದುವರಿಯುತ್ತಿದೆ ಎಂಬುದು ಮುಂದುವರಿದಂತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತ ಒಡಿಐ ತಂಡಕ್ಕೆ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಆ ಮೂಲಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೈ ಬಿಡಲಾಗಿತ್ತು.