ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಕೆಎಲ್‌ ರಾಹುಲ್‌ ಶತಕ ಸಿಡಿಸದೆ ಇರಲು ಬಲವಾದ ಕಾರಣ ತಿಳಿಸಿದ ಡೇಲ್‌ ಸ್ಟೇನ್‌!

ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಅರ್ಧಶತಕ ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿರುವ ಕನ್ನಡಿಗ ಕೆಎಲ್‌ ರಾಹುಲ್‌ ಅವರ ಸಾಮರ್ಥ್ಯವನ್ನು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೇಲ್‌ ಸ್ಟೇನ್‌ ಶ್ಲಾಘಿಸಿದ್ದಾರೆ. ಅವರಿಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಅವಕಾಶ ಸಿಕ್ಕರೆ ಶತಕಗಳನ್ನು ಸಿಡಿಸಲಿದ್ದಾರೆ ಎಂದು ಹೇಳಿದ್ದಾರೆ.

ಕೆಎಲ್‌ ರಾಹುಲ್‌ಗೆ ಡೇಲ್‌ ಸ್ಟೇನ್‌ ಮೆಚ್ಚುಗೆ.

ನವದೆಹಲಿ: ದಕ್ಷಿಣ ಆಫ್ರಿಕಾ (ND vs SA) ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆರ್ಧಶತಕ ಬಾರಿಸಿ ಉತ್ತಮ ಲಯದಲ್ಲಿರುವ ಕೆಎಲ್‌ ರಾಹುಲ್‌ (KL Rahul) ಅವರ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ದಿಗ್ಗಜ ವೇಗಿ ಡೇಲ್‌ ಸ್ಟೇನ್‌ ( Dale Steyn) ಮಹತ್ವದ ಹೇಳಿಕೆ ನೀಡಿದ್ದಾರೆ. ಕೆಎಲ್‌ ರಾಹುಲ್‌ ಅವರು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಶತಕಗಳನ್ನು ಬಾರಿಸಬಹುದು. ರಾಹುಲ್‌ ಅವರು ನಾಯಕತ್ವದ ಜವಬ್ದಾರಿಯ ಹೊರತಾಗಿಯೂ, ಸ್ಥಿರತೆ ಮತ್ತು ಲಯವನ್ನು ಕಾಪಾಡಿಕೊಂಡಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.

ಈ ಕುರಿತು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಡೇಲ್‌ ಸ್ಟೇನ್‌, "ಕೆ ಎಲ್‌ ರಾಹುಲ್‌ ಅವರು ಹೇಗೆ ಶತಕಗಳನ್ನು ಬಾರಿಸಬೇಕೆಂದು ಅರಿತಿದ್ದಾರೆ. ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದರೆ ಅಥವಾ ಓಪನಿಂಗ್ ಮಾಡಿದರೆ, ಅವರು ಶತಕಗಳನ್ನು ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ಆ ಸ್ಥಾನಗಳು ಇತರ ಆಟಗಾರರಿಗೆ ಮಾತ್ರ ಮತ್ತು ಈ ತಂಡದಲ್ಲಿ ಅವರ ಪಾತ್ರ ಏನೆಂದು ಅವರಿಗೆ ತಿಳಿದಿದೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

IND vs SA: ಕೊಹ್ಲಿ, ಗಾಯಕ್ವಾಡ್‌ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಕೆಎಲ್‌ ರಾಹುಲ್‌ ನಾಯಕತ್ವವನ್ನು ಶ್ಲಾಘಿಸಿದ ಡೇಲ್‌ ಸ್ಟೇನ್

ನಾಯಕ ಶುಭ್‌ಮನ್‌ ಗಿಲ್‌ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕನ್ನಡಿಗ ಕೆಎಲ್‌ ರಾಹುಲ್‌ ಅವರು ನಾಯಕತ್ವದ ಜವಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಡೇಲ್‌ ಸ್ಟೇನ್‌ ಹಾಡಿ ಹೊಗಳಿದ್ದಾರೆ.

"ನಾಯಕ ಕೆಎಲ್ ರಾಹುಲ್‌ ಅವರಿಂದ ಉತ್ತಮ, ಸುಲಭ ಬ್ಯಾಟಿಂಗ್ ಮತ್ತು ಅವರು ಮೊದಲ ಪಂದ್ಯದಲ್ಲಿ ತಮ್ಮ ತಂಡವನ್ನು ಚೆನ್ನಾಗಿ ಮುನ್ನಡೆಸಿದ್ದಾರೆ. ಎರಡನೇ ಪಂದ್ಯದಲ್ಲಿಯೂ ಸಹ, ಯಾವಾಗ ನಿಧಾನವಾಗಿ ಆಡಬೇಕು ಮತ್ತು ಯಾವಾಗ ಬಿರುಸಾಗಿ ಆಡಬೇಕೆಂದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು," ಎಂದು ಮಾಜಿ ವೇಗಿ ಶ್ಲಾಘಿಸಿದ್ದಾರೆ.

IND vs SA: ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಏಡೆನ್‌ ಮಾರ್ಕ್ರಮ್‌!

ಅವರು ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ 83 ಇನಿಂಗ್ಸ್‌ಗಳಲ್ಲಿ 49.50ರ ಸರಾಸರಿಯಲ್ಲಿ 7 ಶತಕಗಳು ಮತ್ತು 20 ಅರ್ಧಶತಕಗಳನ್ನೊಳಗೊಂಡಂತೆ 3218 ರನ್‌ ಕಲೆಹಾಕಿದ್ದಾರೆ. ಅವರು ಕೊನೆಯ ಬಾರಿ 2023ರ ಏಕದಿನ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ 64 ಎಸೆತಗಳಲ್ಲಿ 102 ರನ್‌ ಬಾರಿಸಿದ್ದರು.

ಇದರ ನಡುವೆ ಕೆಎಲ್‌ ರಾಹುಲ್‌ ಅವರು ಅರ್ಧಶತಕ ಮತ್ತು ವಿರಾಟ್‌ ಕೊಹ್ಲಿ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರ ಶತಕಗಳ ಭರ್ಜರಿ ಪ್ರದರ್ಶನದ ಹೊರತಾಗಿಯೂ, ಭಾರತ ತಂಡ ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೋಲನುಭವಿಸಿತು. ಈ ಮೂಲಕ ಸರಣಿ 1-1 ರಿಂದ ಸಮಬಲಗೊಂಡಿದ್ದು, ಉಭಯ ತಂಡಗಳಿಗೂ ಅಂತಿಮ ಪಂದ್ಯ ನಿರ್ಣಾಯಕವಾಗಿದೆ. ಇನ್ನು ಸರಣಿಯ ಮೂರನೇ ಪಂದ್ಯ ಡಿಸೆಂಬರ್‌ 6ರಂದು ವಿಶಾಖಪಟ್ಟಣಂನ ವೈ ಎಸ್‌ ರಾಜಶೇಖರ ರೆಡ್ಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ತಂಡ ಈ ಪಂದ್ಯವನ್ನು ಗೆದ್ದು ತವರಿನಲ್ಲಿ ಸರಣಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.