ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು (IND vs SA) ಕಾದಾಟ ನಡೆಸುತ್ತಿವೆ. ಆದರೆ, ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಹಾಗೂ ಕೀ ಬೌಲರ್ ಕಗಿಸೊ ರಬಾಡ (Kagiso Rabada) ಅವರು ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಟಾಸ್ ವೇಳೆ ರಬಾಡ ಪ್ಲೇಯಿಂಗ್ XIನಲ್ಲಿ ಇರಲಿಲ್ಲ. ಈ ವೇಳೆ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಗೆ ಅಚ್ಚರಿ ಉಂಟಾಯಿತು. ಟಾಸ್ ವೇಳೆ ರಬಾಡ ಏಕೆ ಆಡುತ್ತಿಲ್ಲ ಎಂಬ ಬಗ್ಗೆ ನಾಯಕ ತೆಂಬಾ ಬವೂಮಾ (Temba Bavuma) ಬಹಿರಂಗಪಡಿಸಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಳಿಕ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವೂಮಾ ತಮ್ಮ ತಂಡದ ಪ್ಲೇಯಿಂಗ್ XI ಬಗ್ಗೆ ಮಾಹಿತಿ ಕೊಟ್ಟರು. ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ಹಿರಿಯ ವೇಗಿ ಕಗಿಸೊ ರಬಾಡ ಏಕೆ ಆಡುತ್ತಿಲ್ಲ ಎಂಬ ಬಗ್ಗೆ ಕಾರಣವನ್ನು ನೀಡಿದ್ದಾರೆ. ಅವರು ಪಕ್ಕೆಲುಬಿನ ಗಾಯದಿಂದ ಮೊದಲನೇ ಟೆಸ್ಟ್ ಪಂದ್ಯದಿಂದ ಆಡುತ್ತಿಲ್ಲ ಎಂದು ತೆಂಬಾ ಬವೂಮಾ ತಿಳಿಸಿದ್ದಾರೆ.
IND vs SA: ಜಸ್‌ಪ್ರೀತ್ ಬುಮ್ರಾ ದಾಳಿಗೆ ನಲುಗಿದ ಹರಿಣ ಪಡೆ; 159 ರನ್‌ಗೆ ಆಲೌಟ್
"ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದಿರುವ ಈ ಸಮಯದಲ್ಲಿ ನಾವು ಉತ್ತಮ ಹಂತದಲ್ಲಿದ್ದೇವೆ. ಹಾಗಾಗಿ ನಮಲ್ಲಿ ಯಾವುದೂ ಜಾಸ್ತಿ ಬದಲಾಗುವುದಿಲ್ಲ. ಪ್ರದರ್ಶನದ ಆಧಾರದ ಮೇಲೆ, ನಮ್ಮ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಏನನ್ನೂ ಮಾಡುತ್ತಿದ್ದೇವೆ, ಅದನ್ನು ಮುಂದುವರಿಸಲು ನಮಗೆ ಹೆಮ್ಮೆಯಾಗುತ್ತಿದೆ. ಪಿಚ್ ಸ್ವಲ್ಪ ಒಣಗಿದೆ ಜಾಸ್ತಿ ಹುಲ್ಲು ಕಾಣಿಸುತ್ತಿಲ್ಲ. ಭಾರತದಲ್ಲಿ ಕ್ರಿಕೆಟ್ ಆಡುವುದು ಕಷ್ಟ. ಪ್ರಥಮ ಇನಿಂಗ್ಸ್‌ನಲ್ಲಿ ರನ್ ಗಳಸುವುದು ಪಂದ್ಯದ ಪಾಲಿಗೆ ಕೀ ಸಂಗತಿಯಾಗಲಿದೆ. ಪಕ್ಕೆಲುಬು ಗಾಯದ ಕಾರಣ ಕಗಿಸೊ ರಬಾಡ ಅವರು ಮೊದಲನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಅವರ ಸ್ಥಾನಕ್ಕೆ ಕಾರ್ಬಿನ್ ಬಾಷ್ ಬಂದಿದ್ದಾರೆ," ಎಂದು ಹೇಳಿದ್ದಾರೆ.
ಭಾರತದ ಪ್ಲೇಯಿಂಗ್ XIನಲ್ಲಿ ಸ್ಪಿನ್ನರ್‌ಗಳು
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ತುಂಬಾ ಬದಲಾವಣೆಯನ್ನು ತರಲಾಗಿದೆ. ಸ್ಪಿನ್ ಸ್ನೇಹಿ ಪಿಚ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಹೆಚ್ಚಿನ ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗಿದೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಲಾಗಿದೆ.
ರಿಷಭ್ ಪಂತ್ ಅವರು ಪಾದದ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರು ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಧ್ರುವ್ ಜುರೆಲ್ ಅವರು ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹಾಗಾಗಿ ಅವರನ್ನು ಪ್ಲೇಯಿಂಗ್ XIನಲ್ಲಿ ಆಡಿದಿ ಸಾಯಿ ಸುದರ್ಶನ್ ಅವರನ್ನು ಕೈ ಬಿಡಲಾಗಿದೆ.
IND vs SA: ಸಾಯಿ ಸುದರ್ಶನ್ ಕೈಬಿಟ್ಟ ನಿರ್ಧಾರದಲ್ಲಿ ಅರ್ಥವಿಲ್ಲ; ದೊಡ್ಡ ಗಣೇಶ್ ಆಕ್ರೋಶ
ಉಭಯ ತಂಡಗಳ ಪ್ಲೇಯಿಂಗ್ XI
ದಕ್ಷಿಣ ಆಫ್ರಿಕಾ: ಏಡೆನ್ ಮಾರ್ಕ್ರಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ತೆಂಬಾ ಬವೂಮಾ (ನಾಯಕ), ಟೋನಿ ಡಿ ಜಾರ್ಜ್, ಟ್ರಿಸ್ಟನ್ ಸ್ಟಬ್ಸ್, ಕೈಲ್ ವಾರ್ನೆನ್ (ವಿಕೆಟ್ ಕೀಪರ್), ಸೈಮನ್ ಹಾರ್ಮರ್, ಮಾರ್ಕೊ ಯೆನ್ಸನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್