ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಜಸ್‌ಪ್ರೀತ್‌ ಬುಮ್ರಾ ದಾಳಿಗೆ ನಲುಗಿದ ಹರಿಣ ಪಡೆ; 159 ರನ್‌ಗೆ ಆಲೌಟ್‌

ಭಾರತ ಪರ ಅಮೋಘ ಬೌಲಿಂಗ್‌ ದಾಳಿ ನಡೆಸಿದ ಬುಮ್ರಾ 27 ರನ್‌ ವೆಚ್ಚದಲ್ಲಿ 5 ವಿಕೆಟ್‌ ಉರುಳಿಸಿದರು. ಈ ಮೂಲಕ ತಮ್ಮ ಹಳೆಯ ಲಯವನ್ನು ಮತ್ತೆ ಕಂಡುಕೊಂಡರು. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಆಸೀಸ್‌ ವಿರುದ್ಧದ ಟಿ20ಯಲ್ಲಿ ಬುಮ್ರಾ ಆಡಿದ ಎಲ್ಲ ಪಂದ್ಯಗಳಲ್ಲಿಯೂ ದುಬಾರಿಯಾಗಿದ್ದರು. ಅಲ್ಲದೆ ವಿಂಡೀಸ್‌ ವಿರುದ್ದದ ತವರಿನ ಟೆಸ್ಟ್‌ ಸರಣಿಯಲ್ಲಿಯೂ ನಿರೀಕ್ಷಿತ ಪ್ರರ್ಶನ ತೋರಿರಲಿಲ್ಲ.

ಬುಮ್ರಾ ದಾಳಿಗೆ ನಲುಗಿ 159 ರನ್‌ಗೆ ಆಲೌಟ್‌ ಆದ ಹರಿಣ ಪಡೆ

ಬುಮ್ರಾ ದಾಳಿಗೆ ನಲುಗಿ 159 ರನ್‌ಗೆ ಆಲೌಟ್‌ ಆದ ಹರಿಣ ಪಡೆ -

Abhilash BC
Abhilash BC Nov 14, 2025 3:04 PM

ಕೋಲ್ಕತಾ: ಜಸ್‌ಪ್ರೀತ್‌ ಬುಮ್ರಾ(27ಕ್ಕೆ 5) ಅವರ ಘಾತಕ ದಾಳಿಗೆ ತತ್ತರಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಭಾರತ(IND vs SA) ವಿರುದ್ಧ ಕೋಲ್ಕತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನವೇ 159 ರನ್‌ಗೆ ಆಲೌಟ್‌ ಆಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಹರಿಣ ಪಡೆ ಉತ್ತಮ ಆರಂಭ ಪಡೆದರೂ ಇದನ್ನೂ ಮುಂದುವರಿಸುವಲ್ಲಿ ವಿಫಲವಾಯಿತು. ಆರಂಭಿಕರಾದ ಐಡೆನ್‌ ಮಾರ್ಕ್ರಮ್(‌31) ಮತ್ತು ರಯಾನ್ ರಿಕೆಲ್ಟನ್(23) ಮೊದಲ ವಿಕೆಟ್‌ಗೆ 57 ರನ್‌ ಒಟ್ಟುಗೂಡಿಸಿದರು. ಉಭಯ ಆಟಗಾರರ ವಿಕೆಟ್‌ ಪತನದ ಬಳಿಕ ತಂಡ ದಿಢೀರ್‌ ಕುಸಿತ ಕಂಡಿತು. ಈ ಎರಡೂ ವಿಕೆಟ್‌ ಜಸ್‌ಪ್ರೀತ್‌ ಬುಮ್ರಾ ಪಾಲಾಯಿತು. ನಾಯಕ ಟೆಂಬ ಬವುಮಾ ಕೇವಲ 3 ರನ್‌ ಗಳಿಸಲಷ್ಟೇ ಶಕ್ತರಾದರು. ಅವರ ವಿಕೆಟ್‌ ಕುಲ್‌ದೀಪ್‌ ಕಿತ್ತರು.

ಊಟದ ವಿರಾಮದ ಹೊತ್ತಿಗೆ ದಕ್ಷಿಣ ಆಫ್ರಿಕಾ 27 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತ್ತು. ಆ ಬಳಿಕ ಸತತ ವಿಕೆಟ್‌ ಕಳೆದುಕೊಂಡಿತು. ವಿಯಾನ್ ಮಲ್ದರ್ (224) ಹಾಗೂ ಟೋನಿ ಡಿ ಝಾರ್ಜಿ (24) ರನ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಟ್ರಿಸ್ಟಾನ್‌(15) ಮತ್ತು ವಿಕೆಟ್‌ ಕೀಪರ್‌ ಕೈಲ್ ವೆರ್ರೆನ್ನೆ(16) ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಲು ವಿಫಲರಾದರು.

ಭಾರತ ಪರ ಅಮೋಘ ಬೌಲಿಂಗ್‌ ದಾಳಿ ನಡೆಸಿದ ಬುಮ್ರಾ 27 ರನ್‌ ವೆಚ್ಚದಲ್ಲಿ 5 ವಿಕೆಟ್‌ ಉರುಳಿಸಿದರು. ಈ ಮೂಲಕ ತಮ್ಮ ಹಳೆಯ ಲಯವನ್ನು ಮತ್ತೆ ಕಂಡುಕೊಂಡರು. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಆಸೀಸ್‌ ವಿರುದ್ಧದ ಟಿ20ಯಲ್ಲಿ ಬುಮ್ರಾ ಆಡಿದ ಎಲ್ಲ ಪಂದ್ಯಗಳಲ್ಲಿಯೂ ದುಬಾರಿಯಾಗಿದ್ದರು. ಅಲ್ಲದೆ ವಿಂಡೀಸ್‌ ವಿರುದ್ದದ ತವರಿನ ಟೆಸ್ಟ್‌ ಸರಣಿಯಲ್ಲಿಯೂ ನಿರೀಕ್ಷಿತ ಪ್ರರ್ಶನ ತೋರಿರಲಿಲ್ಲ.

ಇದನ್ನೂ ಓದಿ IND vs SA: ಸಾಯಿ ಸುದರ್ಶನ್‌ ಕೈಬಿಟ್ಟ ನಿರ್ಧಾರದಲ್ಲಿ ಅರ್ಥವಿಲ್ಲ; ದೊಡ್ಡ ಗಣೇಶ್ ಆಕ್ರೋಶ

ಮತೋರ್ವ ವೇಗಿ ಮೊಹಮ್ಮದ್‌ ಸಿರಾಜ್‌ ಮತ್ತು ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ ತಲಾ ಎರಡು ವಿಕೆಟ್‌ ಪಡೆದರು. ಅಕ್ಷರ್‌ ಪಟೇಲ್‌ ಒಂದು ವಿಕೆಟ್‌ ಕಲೆಹಾಕಿದರು. ಪಕ್ಕೆಲುಬಿನ ಗಾಯದಿಂದಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಕಗಿಸೊ ರಬಾಡ ಈ ಪಂದ್ಯದಿಂದ ಹೊರಗುಳಿದರು.

ಉಭಯ ತಂಡಗಳ ಪ್ಲೇಯಿಂಗ್‌ ಇಲೆವೆನ್‌

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬಾವುಮಾ(ನಾಯಕ), ಟೋನಿ ಡಿ ಝೋರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರಿನ್ನೆ(ವಿ.ಕೀ.), ಸೈಮನ್ ಹಾರ್ಮರ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್.