ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ನಾಲ್ಕನೇ ದಿನ ರಿಷಭ್‌ ಪಂತ್‌ ಕಣಕ್ಕೆ ಇಳಿಯುತ್ತಾರಾ? ಬಿಗ್‌ ಅಪ್‌ಡೇಟ್‌ ಕೊಟ್ಟ ಬೌಲಿಂಗ್‌ ಕೋಚ್‌!

Rishabh Pant's Injury Updates: ಮೂರನೇ ದಿನ ಭುಜದ ಗಾಯದಿಂದಾಗಿ ವಿಕೆಟ್ ಕೀಪಿಂಗ್ ಮಾಡದ ರಿಷಭ್ ಪಂತ್ ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಅವರು ನಾಲ್ಕನೇ ದಿನ ಮೈದಾನಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ತರಬೇತುದಾರ ಮಾರ್ನೆ ಮಾರ್ಕೆಲ್ ತಿಳಿಸಿದ್ದಾರೆ. ಮೂರನೇ ದಿನ ಪಂತ್‌ ಕಣಕ್ಕೆ ಇಳಿದಿರಲಿಲ್ಲ.

ರಿಷಭ್‌ ಪಂತ್‌ ಗಾಯದ ಬಗ್ಗೆ ಅಪ್‌ಡೇಟ್‌ ನೀಡಿದ ಮಾರ್ನೆ ಮಾರ್ಕೆಲ್.

ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ (IND vs SL) ಮೂರನೇ ದಿನ ಭಾರತ ತಂಡದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ (Rishabh Pant) ಮೈದಾನಕ್ಕಿಳಿಯಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಧ್ರುವ್‌ ಜುರೆಲ್‌ ವಿಕೆಟ್‌ಕೀಪಿಂಗ್‌ ಜವಾಬ್ದಾರಿ ನಿರ್ವಹಿಸಿದರು. ಜುರೆಲ್‌ ಎರಡನೇ ದಿನ ಮೂರು ಓವರ್‌ಗಳ ಕಾಲ ವಿಕೆಟ್‌ ಕೀಪಿಂಗ್‌ ನಿರ್ವಹಿಸಿದ್ದರು. ಪಂತ್‌ ಬದಲಿಗೆ ಸರ್ಫರಾಜ್‌ ಖಾನ್‌ ಅವರನ್ನು ಭಾರತ ತಂಡದ ಬದಲಿ ಫೀಲ್ಡರ್‌ ಆಗಿ ಕಣಕ್ಕಿಳಿಸಲಾಯಿತು. ಪಂತ್‌ ಮೈದಾನಕ್ಕಿಳಿಯದ ಹಿನ್ನೆಲೆಯಲ್ಲಿ ಅವರ ಫಿಟ್‌ನೆಸ್‌ ಬಗ್ಗೆ ಅನುಮಾನಗಳು ಮೂಡಿದ್ದವು. ಅಲ್ಲದೆ, ನಾಲ್ಕನೇ ದಿನ ಅವರು ಮೈದಾನಕ್ಕಿಳಿಯಲು ಸಾಧ್ಯವಾಗುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ, ಮೂರನೇ ದಿನದಾಟ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತ ತಂಡದ ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ (Morne Morkel) ಪಂತ್‌ ಅವರ ಗಾಯದ ಕುರಿತು ಮಾಹಿತಿ ನೀಡಿದರು.

“ರಿಷಭ್‌ ಪಂತ್‌ ಅವರ ಭುಜಕ್ಕೆ ಚೆಂಡು ಬಡಿದಿತ್ತು. ನಿನ್ನೆ ರಾತ್ರಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೆವು. ಅವರ ಭುಜಕ್ಕೆ ಸಾಕಷ್ಟು ಗಾಯವಾಗಿತ್ತು. ಇಂದು ಬೆಳಗ್ಗೆ ವಾರ್ಮ್‌ಅಪ್‌ ಮಾಡುವಾಗ ಅವರ ಚಲನವಲನದಲ್ಲಿ ಸ್ವಲ್ಪ ನಿರ್ಬಂಧ ಕಂಡುಬಂದಿತ್ತು,” ಎಂದು ಭಾರತ ತಂಡದ ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ ಹೇಳಿದ್ದಾರೆ.

ʻ2 ಅರ್ಧಶತಕ, 7 ವಿಕೆಟ್‌ʼ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮಿಂಚಿದ ಬೆನ್‌ ಸ್ಟೋಕ್ಸ್‌!

ಪಂತ್‌ ಅವರ ಗಾಯದ ಸ್ಥಿತಿಯನ್ನು ತಂಡದ ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಗಮನಿಸುತ್ತಿದ್ದು, ಅವರು ಸಂಪೂರ್ಣವಾಗಿ ಚೇತರಿಸಿಕೊಂಡರೆ ನಾಲ್ಕನೇ ದಿನ ವಿಕೆಟ್‌ಕೀಪಿಂಗ್‌ಗೆ ಮರಳುವ ಸಾಧ್ಯತೆ ಇದೆ. “ಇದೀಗ ರಾತ್ರಿಯಿಡೀ ಅವರ ಆರೋಗ್ಯ ಸ್ಥಿತಿಯನ್ನು ನಾವು ನಿರಂತರವಾಗಿ ಗಮನಿಸುತ್ತೇವೆ. ನಾಳೆ (ಬುಧವಾರ) ಅವರು ನಮ್ಮ ಪರ ವಿಕೆಟ್‌ಗಳ ಹಿಂದೆ ನಿಲ್ಲುತ್ತಾರೆ ಎಂದು ಆಶಿಸುತ್ತೇವೆ. ಪಂತ್‌ ತಂಡದಲ್ಲಿ ಇರುವುದು ಬಹಳ ಮುಖ್ಯ. ಏಕೆಂದರೆ ಆಟವನ್ನು ಅತ್ಯುತ್ತಮವಾಗಿ ಅರಿತುಕೊಳ್ಳುವ ಅವರ ಸಾಮರ್ಥ್ಯ ಅತ್ಯುತ್ತಮವಾಗಿದೆ,” ಎಂದು ಮಾರ್ಕೆಲ್‌ ತಿಳಿಸಿದ್ದಾರೆ.

ಕುಲ್ದೀಪ್‌ ಯಾದವ್‌ ಆಯ್ಕೆಯ ಬಗ್ಗೆ ಮಾರ್ನೆಲ್‌ ಪ್ರತಿಕ್ರಿಯೆ

ಎರಡನೇ ಟೆಸ್ಟ್‌ಗೂ ಮುನ್ನ ಕುಲ್ದೀಪ್‌ ಯಾದವ್‌ಗೆ ವೈರಲ್ ಜ್ವರ ಬರದಿದ್ದರೆ, ಅವರನ್ನು ಆಯ್ಕೆಗೆ ಪರಿಗಣಿಸಲಾಗುತ್ತಿತ್ತು ಎಂದು ಮಾರ್ಕೆಲ್ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ಇಲ್ಲ, ಆಯ್ಕೆ ನನ್ನ ಕೈಯಲ್ಲಿಲ್ಲ. ಮೊದಲ ಟೆಸ್ಟ್‌ಗೆ ಅವರಿಗೆ ನಿರ್ದಿಷ್ಟ ಪಾತ್ರಗಳನ್ನು ನೀಡಲಾಗಿದೆ ಎಂದು ನಾನು ನಂಬುತ್ತೇನೆ, ಅದು ಸವಾಲಿನದ್ದಾಗಿತ್ತು. ಆದಾಗ್ಯೂ, ನನ್ನ ಅಭಿಪ್ರಾಯದಲ್ಲಿ, ಅವರು ಖಂಡಿತವಾಗಿಯೂ ಅಂತಿಮ ಆಯ್ಕೆಗೆ ಸ್ಪರ್ಧಿಯಾಗುತ್ತಿದ್ದರು," ಎಂದು ಹೇಳಿದ್ದಾರೆ.

ʻವಿಶ್ವ ದರ್ಜೆಯ ಬೌಲರ್‌ ಆಗಿ ಬೆಳೆದ ಪ್ರಸಿಧ್‌ ಕೃಷ್ಣʼ: ಕನ್ನಡಿಗನ್ನು ಶ್ಲಾಘಿಸಿದ ಮಾರ್ನೆ ಮಾರ್ಕೆಲ್‌!

ಭಾರತ ತಂಡದ ಮುಂದಿನ ಯೋಜನೆ ಬಗ್ಗೆ ಮಾರ್ಕೆಲ್‌ ಮಾತು

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮಾರ್ಕೆಲ್, ಭಾರತ ತಂಡ ಬುಧವಾರ ಶ್ರೀಲಂಕಾದ ಕೊನೆಯ ಎರಡು ವಿಕೆಟ್‌ಗಳನ್ನು ಸಾಧ್ಯವಾದಷ್ಟು ಬೇಗ ತಮ್ಮ ಅನುಕೂಲವನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಶ್ರೀಲಂಕಾ ಪರ, ಸೋನಲ್ ದಿನುಷಾ, ಕೇಶರ ನುವಾಂಟ ಮತ್ತು ಲಹಿರು ಕುಮಾರ ಉತ್ತಮ ಇನಿಂಗ್ಸ್‌ ಆಡಿದರು. ಅಂತಹ ಸಂದರ್ಭಗಳು ಕ್ರಿಕೆಟ್‌ನ ಒಂದು ಭಾಗವಾಗಿದೆ ಎಂದು ಮಾರ್ಕೆಲ್ ತಿಳಿಸಿದ್ದಾರೆ.