ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻವಿಶ್ವ ದರ್ಜೆಯ ಬೌಲರ್‌ ಆಗಿ ಬೆಳೆದ ಪ್ರಸಿಧ್‌ ಕೃಷ್ಣʼ: ಕನ್ನಡಿಗನ್ನು ಶ್ಲಾಘಿಸಿದ ಮಾರ್ನೆ ಮಾರ್ಕೆಲ್‌!

ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರುತ್ತಿರುವ ಕನ್ನಡಿಗ ಪ್ರಸಿಧ್‌ ಕೃಷ್ಣ ಅವರನ್ನು ಭಾರತೀಯ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇವರು ಟೀಕೆಗಳನ್ನು ಮೆಟ್ಟಿ ನಿಂತು ವಿಶ್ವ ದರ್ಜೆಯ ಬೌಲರ್‌ ಆಗಿ ಸುಧಾರಣೆ ಕಂಡಿದ್ದಾರೆಂದು ಹೇಳಿದ್ದಾರೆ.

ಕನ್ನಡಿಗ ಪ್ರಸಿಧ್‌ ಕೃಷ್ಣ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಮಾರ್ನೆ ಮಾರ್ಕೆಲ್!

ಪ್ರಸಿಧ್‌ ಕೃಷ್ಣ ಅವರನ್ನು ಶ್ಲಾಘಿಸಿದ ಮಾರ್ನೆ ಮಾರ್ಕೆಲ್‌. -

Profile
Ramesh Kote Aug 25, 2026 11:07 PM

ಕೊಲಂಬೊ: ಶ್ರೀಲಂಕಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ (IND vs SL) ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರರುತ್ತಿರುವ ಕನ್ನಡಿಗ ಹಾಗೂ ವೇಗದ ಬೌಲರ್‌ ಪ್ರಸಿಧ್‌ ಕೃಷ್ಣ (Prasidh Krishna) ಅವರನ್ನು ಭಾರತ ತಂಡದ ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌ (Morne Morkel) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹೊರಗಿನಿಂದ ಬಂದ ಟೀಕೆಗಳನ್ನು ಕಡೆಗಣಿಸಿ ತಮ್ಮ ಆಟದ ಮೇಲೆ ಗಮನ ಹರಿಸಿದ ಪ್ರಸಿಧ್‌, ಇದೀಗ ತಮ್ಮನ್ನು ವಿಶ್ವದರ್ಜೆಯ ಬೌಲರ್‌ ಆಗಿ ರೂಪಿಸಿಕೊಂಡಿದ್ದಾರೆ ಎಂದು ಅವರು ಹೊಗಳಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಮಂಗಳವಾರ ಪ್ರಸಿಧ್‌ ಕೃಷ್ಣ 14 ಓವರ್‌ಗಳಲ್ಲಿ 47 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಭಾರತದ ಬೌಲಿಂಗ್‌ ದಾಳಿಯನ್ನು ಮುನ್ನಡೆಸಿದ ಅವರು ಶ್ರೀಲಂಕಾ ಬ್ಯಾಟರ್‌ಗಳಿಗೆ ಸಾಕಷ್ಟು ಕಾಟ ನೀಡಿದರು.

ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರ್ಕೆಲ್‌, “ಈ ಸ್ಪೆಲ್‌ ಪ್ರಸಿಧ್‌ ಅವರ ಮನೋಸ್ಥೈರ್ಯವನ್ನು ತೋರಿಸುತ್ತದೆ. ಮಾಧ್ಯಮಗಳಲ್ಲಿ ಅವರ ಬಗ್ಗೆ ಟೀಕೆಗಳು ಬರುತ್ತವೆ, ಕಾಮೆಂಟೇಟರ್‌ಗಳೂ ಟೀಕಿಸುತ್ತಾರೆ. ಆದರೆ ಇವೆಲ್ಲದರ ನಡುವೆಯೂ ಅವರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಈ ಸಮಯದಲ್ಲಿ ಅವರ ಬೌಲಿಂಗ್‌ ಅತ್ಯಂತ ಪ್ರಭಾವಶಾಲಿಯಾಗಿದೆ,” ಎಂದು ಹೇಳಿದ್ದಾರೆ.

IND vs SL: ಫಾಲೋ ಆನ್‌ ಭೀತಿಯಲ್ಲಿ ಶ್ರೀಲಂಕಾ, ಮೂರನೇ ದಿನವೂ ಭಾರತ ತಂಡ ಪ್ರಾಬಲ್ಯ!

ಹೊರಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ನಿರಂತರವಾಗಿ ಪರಿಶ್ರಮಿಸಿರುವ ಪ್ರಸಿಧ್‌ ಕೃಷ್ಣ, ತಮ್ಮ ಬೌಲಿಂಗ್‌ನಲ್ಲಿ ಮತ್ತಷ್ಟು ಸುಧಾರಣೆ ಕಂಡುಕೊಂಡಿದ್ದಾರೆ ಎಂದು ಮಾರ್ಕೆಲ್‌ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ಬೌಲಿಂಗ್‌ ಕೋಚ್‌, ವೇಗಿ ಪ್ರಸಿಧ್‌ ಕೃಷ್ಣ ನಿರಂತರ ಟೀಕೆಗಳು, ಪ್ರತಿಕ್ರಿಯೆಗಳು ಹಾಗೂ ಒತ್ತಡದ ನಡುವೆಯೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದನ್ನು ಕಲಿತಿದ್ದಾರೆ ಎಂದು ಹೇಳಿದ್ದಾರೆ.

ಹೊರಗಿನ ಮಾತುಗಳನ್ನು ಕಡೆಗಣಿಸಿ ಕ್ರಿಕೆಟ್‌ ಆಡಬೇಕು

ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ಕೆಲ್‌, “ಎಲ್ಲಾ ರೀತಿಯ ಧ್ವನಿಗಳನ್ನು ಬದಿಗೊತ್ತಿ ಕೇವಲ ಕ್ರಿಕೆಟ್‌ ಆಡುವುದರತ್ತ ಗಮನ ಹರಿಸುವುದು ಮುಖ್ಯ. ಒಂದು ತಂಡವಾಗಿ ನಾವು ಪ್ರಸಿಧ್‌ ಅವರ ಸಾಮರ್ಥ್ಯದ ಬಗ್ಗೆ ಯಾವಾಗಲೂ ಅರಿವಿದೆ.

ನೀವು ಈ ವಾತಾವರಣಕ್ಕೆ ಬಂದಾಗ ಒಂದು ಬಿಲಿಯನ್‌ ಕ್ರಿಕೆಟ್‌ ಅಭಿಮಾನಿಗಳನ್ನು ಮೆಚ್ಚಿಸಲು ಬಯಸುತ್ತೀರಿ. ನಿರಂತರವಾಗಿ ನಿಮ್ಮ ಮೇಲೆ ನಿಗಾ ಇರುತ್ತದೆ ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸವನ್ನೂ ವಿಶ್ಲೇಷಿಸಲಾಗುತ್ತದೆ,” ಎಂದು ತಿಳಿಸಿದ್ದಾರೆ.

ಭಾರತ ತಂಡದ ಡಬ್ಲ್ಯುಟಿಸಿ ಫೈನಲ್‌ ಭವಿಷ್ಯ ನುಡಿದ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌!

ಪ್ರಸಿಧ್‌ ಕೃಷ್ಣ ಅವರಲ್ಲಿ ಆಗಿರುವ ದೊಡ್ಡ ಬದಲಾವಣೆಯೆಂದರೆ ಜನರ ಟೀಕೆ ಹಾಗೂ ಹೊರಗಿನ ಒತ್ತಡ ತಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುವುದನ್ನು ಅವರು ಕಲಿತಿರುವುದು ಎಂದು ಮೊರ್ಕೆಲ್‌ ಹೇಳಿದ್ದಾರೆ. “ನನ್ನ ಪ್ರಕಾರ ಪ್ರಸಿಧ್‌ ಅವರಲ್ಲಾದ ದೊಡ್ಡ ಬದಲಾವಣೆ ಎಂದರೆ, ತಮ್ಮ ಬಗ್ಗೆ ಜನರು ಹೇಳುವ ಮಾತುಗಳು ಮತ್ತು ಟೀಕೆಗಳನ್ನು ಕಡೆಗಣಿಸುವುದನ್ನು ಅವರು ಕಲಿತಿದ್ದಾರೆ. ಈಗ ಅವರು ತಮ್ಮ ಕ್ರಿಕೆಟ್‌ ಅನ್ನು ಆನಂದಿಸುತ್ತಿದ್ದಾರೆ," ಎಂದರು.

"ಅವರು ತುಂಬಾ ಪರಿಶ್ರಮಿ. ಪಂದ್ಯಕ್ಕೂ ಮುನ್ನ ಯೋಜನೆ ರೂಪಿಸುವುದರ ಜೊತೆಗೆ ಎದುರಾಳಿ ತಂಡದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡುತ್ತಾರೆ. ಅವರು ಆಟದ ಬಗ್ಗೆ ಆಳವಾಗಿ ಕಲಿಯುವ ಆಟಗಾರ. ಅವರು ಬೆಳೆಯುತ್ತಾ ವಿಶ್ವದರ್ಜೆಯ ಬೌಲರ್‌ ಆಗುತ್ತಿರುವುದನ್ನು ನೋಡುವುದು ಅದ್ಭುತವಾಗಿದೆ,” ಎಂದು ಮಾರ್ಕೆಲ್‌ ಹೇಳಿದ್ದಾರೆ.

IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್‌ ಜುರೆಲ್‌!

ಮೂರೂ ಸ್ವರೂಪದಲ್ಲಿ ಆಡುವ ಸಾಮರ್ಥ್ಯ

ಪ್ರಸಿಧ್‌ ಕೃಷ್ಣ ಭಾರತ ಪರ ಮೂರೂ ಮಾದರಿಗಳಲ್ಲಿ ದೀರ್ಘಕಾಲ ಆಡುವ ಸಾಮರ್ಥ್ಯ ಮತ್ತು ಪ್ರತಿಭೆ ಹೊಂದಿದ್ದಾರೆ ಎಂದು ಮೊರ್ಕೆಲ್‌ ಅಭಿಪ್ರಾಯಪಟ್ಟಿದ್ದಾರೆ. ಪ್ರಸಿಧ್‌ ಅವರ ಪ್ರಮುಖ ಬಲವೆಂದರೆ ಅವರ ಹೆಚ್ಚುವರಿ ವೇಗ ಮತ್ತು ಬೌನ್ಸ್‌ ಎಂದು ಮೊರ್ಕೆಲ್‌ ಹೇಳಿದ್ದಾರೆ. ಅವರ ಎಸೆತಗಳಲ್ಲಿ ಹೆಚ್ಚು ರನ್‌ ಬಿಟ್ಟುಕೊಡುವ ಅಪಾಯವಿದ್ದರೂ, ಅದೇ ಸಮಯದಲ್ಲಿ ವಿಕೆಟ್‌ ಪಡೆಯುವ ದೊಡ್ಡ ಅವಕಾಶವೂ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.