IND vs WI: ಶುಭಮನ್ ಗಿಲ್ ದಾಖಲೆಯ ಶತಕ, ಎರಡನೇ ದಿನವೂ ಪ್ರಾಬಲ್ಯ ಸಾಧಿಸಿದ ಭಾರತ!
IND vs WI 2nd Test Day 2 Highlights: ಶುಭಮನ್ ಗಿಲ್ ಶತಕ ಹಾಗೂ ರವೀಂದ್ರ ಜಡೇಜಾ ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಪ್ರಾಬಲ್ಯ ಸಾಧಿಸಿದೆ. ಭಾರತ 518 ರನ್‌ಗಳಿಗೆ ಡಿಕ್ಲೆರ್ ಮಾಡಿಕೊಂಡ ಬಳಿಕ ವಿಂಡೀಸ್ ಎರಡನೇ ದಿನದಾಟದ ಅಂತ್ಯಕ್ಕೆ 43 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ ಹಾಗೂ 378 ರನ್ ಹಿನ್ನಡೆ ಅನುಭವಿಸಿದೆ.

ವಿಂಡೀಸ್ ಎದುರು ಎರಡನೇ ಟೆಸ್ಟ್‌ನಲ್ಲಿಯೂ ಭಾರತ ಪ್ರಾಬಲ್ಯ. -

ನವದೆಹಲಿ: ಶುಭಮನ್ ಗಿಲ್ (Shubman Gill) ಶತಕ ಹಾಗೂ ರವೀಂದ್ರ ಜಡೇಜಾ (Ravindra Jadeja) ಸ್ಪಿನ್ ಮೋಡಿಯ ಸಹಾಯದಿಂದ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ (IND vs WI) ಎರಡನೇ ದಿನವೂ ಪ್ರಾಬಲ್ಯ ಸಾಧಿಸಿದೆ. ಎರಡನೇ ದಿನ ಬ್ಯಾಟಿಂಗ್‌ನಲ್ಲಿ ಮಿಂಚಿದ ನಾಯಕ ಶುಭಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿ ಜೀವನದ 10ನೇ ಶತಕವನ್ನು ಬಾರಿಸಿದರೆ, ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಉತ್ತಮ ಆರಂಭ ಪಡೆದಿದ್ದ ವೆಸ್ಟ್ ಇಂಡೀಸ್ ತಂಡವನ್ನು ಎರಡನೇ ದಿನದಾಂತ್ಯಕ್ಕೆ ಕಟ್ಟಿ ಹಾಕಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ಎರಡು ವಿಕೆಟ್ ನಷ್ಟಕ್ಕೆ 318 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಭಾರತ ತಂಡದ ಪರ ಕ್ರೀಸ್‌ಗೆ ಬಂದ ಯಶಸ್ವಿ ಜೈಸ್ವಾಲ್ ದ್ವಿಶತಕವನ್ನು ಪೂರ್ಣಗೊಳಿಸುವ ಹಾದಿಯಲ್ಲಿದ್ದರು. ಆದರೆ, ಎರಡನೇ ದಿನ ಕೇವಲ ಎರಡು ರನ್ ಗಳಿಸಿದ ಬಳಿಕ ಒಂದು ರನ್ ಕದಿಯಲು ಮುಂದಾಗಿ, ರನ್‌ಔಟ್ ಆದರು. ಆ ಮೂಲಕ ಅವರು 175 ರನ್‌ಗಳ ಇನಿಂಗ್ಸ್ ಅಂತ್ಯವಾಯಿತು ಹಾಗೂ ದ್ವಿಶತಕ ಸಿಡಿಸುವ ಅವಕಾಶವನ್ನು ಕಳೆದುಕೊಂಡರು.
IND vs WI: ʻಲವ್ ಯೂ ಶುಭಮನ್ ಗಿಲ್ʼ-ಮೈದಾನದಲ್ಲಿಯೇ ನಾಯಕನಿಗೆ ಪ್ರಪೋಸ್ ಮಾಡಿದ ಯುವತಿ!
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಬ್ಯಾಟ್ ಮಾಡಿದ ಶುಭಮನ್ ಗಿಲ್, ವಿಂಡೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 196 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 16 ಓವರ್‌ಗಳಿಗೆ ಅಜೇಯ 129 ರನ್‌ಗಳನ್ನು ಗಳಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 10ನೇ ಟೆಸ್ಟ್ ಶತಕವನ್ನು ಸಿಡಿಸಿದರು. ಇವರಿಗೆ ನಾಲ್ಕನೇ ವಿಕೆಟ್ 91 ರನ್‌ಗಳ ಜೊತೆಯಾಟವನ್ನು ಆಡಿದ್ದ ನಿತೀಶ್ ರೆಡ್ಡಿ 43 ರನ್‌ಗಳನ್ನು ಕಲೆ ಹಾಕಿದ್ದರೆ, ಧ್ರುವ್ ಜುರೆಲ್ 44 ರನ್‌ಗಳಿಸಿದರು. ಜುರೆಲ್ ಔಟ್ ಆದ ಬಳಿಕ ಭಾರತ ತಂಡ, 134.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 518 ರನ್‌ಗಳಿಗೆ ಪ್ರಥಮ ಇನಿಂಗ್ಸ್ ಅನ್ನು ಡಿಕ್ಲೆರ್ ಮಾಡಿಕೊಂಡಿತು.
Stumps on Day 2️⃣
— BCCI (@BCCI) October 11, 2025
3️⃣ wickets for Ravindra Jadeja 👏
1️⃣ wicket for Kuldeep Yadav 👌
We will be back on Day 3 with #TeamIndia still 378 runs ahead in the 1st innings!
Scorecard ▶ https://t.co/GYLslRzj4G#INDvWI | @IDFCFIRSTBank pic.twitter.com/RPJrajanHV
ಉತ್ತಮ ಆರಂಭ ಪಡೆದಿದ್ದ ವಿಂಡೀಸ್
ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ನಲ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಂಡಿತು. ಇನಿಂಗ್ಸ್ ಆರಂಭಿಸಿದ ಜಾನ್ ಕ್ಯಾಂಪ್‌ಬೆಲ್ 10 ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದರೂ ತ್ಯಾಗಿನಾರಾಯಣ್ ಚಂದ್ರಪಾಲ್ ಹಾಗೂ ಎಲಿಕ್ ಅಥನಾಝೆ ಅವರು 66 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು.
IND vs WI: ಶುಭಮನ್ ಗಿಲ್ 10ನೇ ಶತಕ, 518 ರನ್‌ಗಳಿಗೆ ಡಿಕ್ಲೆರ್ ಮಾಡಿಕೊಂಡ ಭಾರತ!
ವಿಂಡೀಸ್‌ಗೆ ಶಾಕ್ ನೀಡಿದ ಜಡೇಜಾ
ತ್ಯಾಗಿ ನಾರಾಯಣ್ ಚಂದ್ರಪಾಲ್ ಆಡಿದ 67 ಎಸೆತಗಳಲ್ಲಿ 34 ರನ್ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್ ಆಡುವ ಭರವಸೆಯನ್ನು ನೀಡಿದ್ದರು. ಆದರೆ, ರವೀಂದ್ರ ಜಡೇಜಾ ಅವರು ತಮ್ಮ ಸ್ಪಿನ್ ಮೋಡಿಯ ಮೂಲಕ ಚಂದ್ರಪಾಲ್ ಅವರನ್ನು ಔಟ್ ಮಾಡಿದರು. ನಂತರ, 84 ಎಸೆತಗಳಲ್ಲಿ 41 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಎಲಿಕ್ ಅಥನಾಝೆ ಅವರು, ಕುಲ್ದೀಪ್ ಯಾದವ್‌ಗೆ ಶರಣಾದರು. ನಂತರ ಕ್ರೀಸ್‌ಗೆ ಬಂದ ವಿಂಡೀಸ್ ನಾಯಕ ರಾಸ್ಟನ್ ಚೇಸ್ ಅವರನ್ನು ರವೀಂದ್ರ ಜಡೇಜಾ ಶೂನ್ಯಕ್ಕೆ ಔಟ್ ಮಾಡಿದರು. ಆ ಮೂಲಕ ಪ್ರವಾಸಿ ವಿಂಡೀಸ್‌ಗೆ ಶಾಕ್ ನೀಡಿದರು. ಎರಡನೇ ದಿನ ದಿನದಾಟದ ಅಂತ್ಯಕ್ಕೆ ವಿಂಡೀಸ್ 43 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 140 ರನ್ ಗಳಿಸಿದೆ ಹಾಗೂ 378 ರನ್‌ಗಳ ಹಿನ್ನಡೆಯಲ್ಲಿದೆ.