ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ಶುಭಮನ್‌ ಗಿಲ್‌ 10ನೇ ಶತಕ, 518 ರನ್‌ಗಳಿಗೆ ಡಿಕ್ಲೆರ್‌ ಮಾಡಿಕೊಂಡ ಭಾರತ!

IND vs WI 2nd Test: ಯಶಸ್ವಿ ಜೈಸ್ವಾಲ್‌ ಹಾಗೂ ಶುಭಮನ್‌ ಗಿಲ್‌ ಅವರ ಶತಕಗಳ ಬಲದಿಂದ ಭಾರತ ತಂಡ, ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 134.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 518 ರನ್‌ಗಳನ್ನು ಕಲೆ ಹಾಕಿದೆ. ಎರಡನೇ ದಿನ ಧ್ರುವ್‌ ಜುರೆಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಭಾರತ ತಂಡ ಪ್ರಥಮ ಇನಿಂಗ್ಸ್‌ ಅನ್ನು ಡಿಕ್ಲೆರ್‌ ಮಾಡಿಕೊಂಡಿದೆ.

IND vs WI: ಪ್ರಥಮ ಇನಿಂಗ್ಸ್‌ನಲ್ಲಿ 518 ರನ್‌ಗಳಿಗೆ ಭಾರತ ಡಿಕ್ಲೆರ್‌!

ಪ್ರಥಮ ಇನಿಂಗ್ಸ್‌ ಅನ್ನು 518 ರನ್‌ಗಳಿಗೆ ಡಿಕ್ಲೆರ್‌ ಮಾಡಿಕೊಂಡ ಭಾರತ. -

Profile Ramesh Kote Oct 11, 2025 1:54 PM

ನವದೆಹಲಿ: ಯಶಸ್ವಿ ಜೈಸ್ವಾಲ್‌ ಹಾಗೂ ಶುಭಮನ್‌ ಗಿಲ್‌ (Shubman Gill) ಅವರ ಶತಕಗಳ ಬಲದಿಂದ ಭಾರತ ತಂಡ, ವೆಸ್ಟ್‌ ಇಂಡೀಸ್‌ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದ (IND vs WI) ಪ್ರಥಮ ಇನಿಂಗ್ಸ್‌ನಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಶುಭಮನ್‌ ಗಿಲ್‌ (129 ರನ್‌) ಅವರ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 134.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 518 ರನ್‌ಗಳನ್ನು ಗಳಿಸಿದೆ. ಆ ಮೂಲಕ ಪ್ರಥಮ ಇನಿಂಗ್ಸ್‌ ಅನ್ನು ಡಿಕ್ಲೆರ್‌ ಮಾಡಿಕೊಂಡಿದೆ ಹಾಗೂ ಎದುರಾಳಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಪ್ರಥಮ ಇನಿಂಗ್ಸ್‌ ಆಡಲು ಅವಕಾಶವನ್ನು ನೀಡಿದೆ.

ಶನಿವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 318 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಭಾರತ ತಂಡದ ಪರ ಕ್ರೀಸ್‌ಗೆ ಬಂದ ಶುಭಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 173 ರನ್‌ಗಳೊಂದಿಗೆ ಬ್ಯಾಟಿಂಗ್‌ ಮುಂದುವರಿಸಿದ ಜೈಸ್ವಾಲ್‌ಗೆ ದ್ವಿಶತಕ ಸಿಡಿಸಲು ಅದ್ಭುತ ಅವಕಾಶವಿತ್ತು. ಆದರೆ, ಕೇವಲ ಎರಡು ರನ್‌ ಗಳಿಸಿದ ಬಳಿಕ ಅವರು 92ನೇ ಓವರ್‌ನಲ್ಲಿ ಅನಗತ್ಯವಾಗಿ ಒಂದು ರನ್‌ ಪಡೆಯಲು ಹೋಗಿ ರನ್‌ಔಟ್‌ ಆದರು. ಆ ಮೂಲಕ ಕೇವಲ 25 ರನ್‌ಗಳ ಅಂತರದಲ್ಲಿ ಶತಕವನ್ನು ಕಳೆದುಕೊಂಡರು.

IND vs WI: ರನ್‌ಔಟ್‌ ಆದ ಬೆನ್ನಲ್ಲೆ ಶುಭಮನ್‌ ಗಿಲ್‌ ವಿರುದ್ದ ಯಶಸ್ವಿ ಜೈಸ್ವಾಲ್‌ ಕಿಡಿ! ವಿಡಿಯೊ

ನಂತರ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಶುಭಮನ್‌ ಗಿಲ್‌ ಹಾಗೂ ಧ್ರುವ್‌ ಜುರೆಲ್‌ ಜೋಡಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಈ ಜೋಡಿ 91 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸಿತು. ಅತ್ಯುತ್ತಮ ಬ್ಯಾಟ್‌ ಮಾಡಿದ ನಿತೀಶ್‌ ರೆಡ್ಡಿ, 54 ಎಸೆತಗಳಲ್ಲಿ 43 ರನ್‌ ಗಳಿಸಿದ ಬಳಿಕ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಕೊಟ್ಟರು. ನಂತರ ಕ್ರೀಸ್‌ಗೆ ಬಂದಿದ್ದ ಧ್ರುವ್‌ ಜುರೆಲ್‌ ಅತ್ಯುತ್ತಮವಾಗಿ ಬ್ಯಾಟ್‌ ಮಾಡಿದರು. ಧ್ರುವ್‌ ಜುರೆಲ್‌ ಅವರು 79 ಎಸೆತಗಳಲ್ಲಿ 44 ರನ್‌ಗಳನ್ನು ಕಲೆ ಹಾಕಿದ ಬಳಿಕ ಔಟ್‌ ಆದರು. ನಂತರ ನಾಯಕ ಶುಭಮನ್‌ ಗಿಲ್‌ ಪ್ರಥಮ ಇನಿಂಗ್ಸ್‌ ಅನ್ನು ಡಿಕ್ಲೆರ್‌ ಮಾಡಿಕೊಂಡರು.



10ನೇ ಟೆಸ್ಟ್‌ ಶತಕ ಬಾರಿಸಿದ ಶುಭಮನ್‌ ಗಿಲ್‌

ಎರಡನೇ ದಿನ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ನಾಯಕ ಶುಭಮನ್‌ ಗಿಲ್‌, ವಿಂಡೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 196 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 129 ರನ್‌ಗಳನ್ನು ಗಳಿಸಿದರು. ಆ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ 10ನೇ ಶತಕವನ್ನು ಬಾರಿಸಿದರು. ಆ ಮೂಲಕ ತಂಡದ ಮೊತ್ತವನ್ನು 500ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.



175 ರನ್‌ ಕಲೆ ಹಾಕಿದ್ದ ಯಶಸ್ವಿ ಜೈಸ್ವಾಲ್‌

ಇದಕ್ಕೂ ಮುನ್ನ ಪಂದ್ಯದ ಮೊದಲನೇ ದಿನ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಮಿಂಚಿದ್ದರು. ಅವರು ಆಡಿದ್ದ 258 ಎಸೆತಗಳಲ್ಲಿ 22 ಬೌಂಡರಿಗಳೊಂದಿಗೆ 175 ರನ್‌ಗಳನ್ನು ಗಳಿಸಿದರು. ಆ ಮೂಲಕ ಟೀಮ್‌ ಇಂಡಿಯಾಗೆ ಭರ್ಜರಿ ಆರಂಭವನ್ನು ತಂದುಕೊಡಲು ನೆರವು ನೀಡಿದ್ದರು. ಸಾಯಿ ಸುದರ್ಶನ್‌ ಕೂಡ 87 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದಾರೆ. ಕೆಎಲ್‌ ರಾಹುಲ್‌ 37 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.