ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ವೈಭವ್‌ ಸೂರ್ಯವಂಶಿಯ ಬೆಳವಣಿಗೆ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಮೊರ್ನೆ ಮಾರ್ಕೆಲ್‌!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಗೂ ಮುನ್ನ ಭಾರತದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ಕಡಿಮೆ ಪಂದ್ಯಾವಕಾಶ ಸಿಕ್ಕರೂ ಅವರ ಕ್ರಿಕೆಟ್ ಅಭಿವೃದ್ಧಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಹಿರಿಯ ಆಟಗಾರರೊಂದಿಗೆ ಸಮಯ ಕಳೆಯುವುದು, ಅವರ ಆಟವನ್ನು ಗಮನಿಸುವುದು ಮತ್ತು ಅವರಿಂದ ಕಲಿಯುವುದು ಯುವ ಆಟಗಾರನ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡುತ್ತದೆ ಎಂದು ಮೊರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.

ವೈಭವ್‌ ಪರ ಬ್ಯಾಟ್‌ ಬೀಸಿದ ಮೊರ್ನೆ ಮಾರ್ಕೆಲ್‌.

ಲಖನೌ: ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯ (IND vs WI) ಮೊದಲ ಪಂದ್ಯಕ್ಕೂ ಮುನ್ನ ಭಾರತದ ಕೋಚ್ ಗೌತಮ್ ಗಂಭೀರ್, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಮುಂದಿನ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ (Morne Morkel) ಕೂಡ ಗಂಭೀರ್ ಅವರ ಮಾತನ್ನು ಬೆಂಬಲಿಸಿದ್ದು, ಅವಕಾಶಕ್ಕಾಗಿ ಕಾಯುವುದು ವೈಭವ್ ಅವರ ಅಭಿವೃದ್ಧಿಗೆ ಅಡ್ಡಿಯಾಗುವುದಿಲ್ಲ ಎಂದು ತಿಳಸಿದ್ದಾರೆ.

15ರ ವಯಸ್ಸಿನ ವೈಭವ್‌ಗೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿರುವುದೇ ದೊಡ್ಡ ಅನುಭವ ಎಂದು ಮೊರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಹಾಗೂ ಅನುಭವಿ ಆಟಗಾರರೊಂದಿಗೆ ಅಭ್ಯಾಸ ನಡೆಸುವುದು, ಅವರು ಬ್ಯಾಟಿಂಗ್‌ಗೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಗಮನಿಸುವುದು ಯುವ ಆಟಗಾರನ ಬೆಳವಣಿಗೆಗೆ ಬಹಳಷ್ಟು ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.

IND vs WI 1st T20I: ಸಂಜು ಔಟ್‌, ಅರ್ಷದೀಪ್‌ ಇನ್‌; ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

“ವೈಭವ್‌ನ ಪ್ರತಿಭೆ ನಮಗೆಲ್ಲರಿಗೂ ಗೊತ್ತಿದೆ. ಗುಣಮಟ್ಟದ ಆಟಗಾರರಿರುವ ಈ ವಾತಾವರಣದಲ್ಲಿ ಆತ ಹೆಚ್ಚು ಸಮಯ ಕಳೆಯುವುದು ಮತ್ತು ಇದೇ ಮಟ್ಟದಲ್ಲಿ ತರಬೇತಿ ಪಡೆಯುವುದು ಆತನ ಕ್ರಿಕೆಟ್‌ಗೆ ಬಹಳ ಪ್ರಯೋಜನಕಾರಿಯಾಗಲಿದೆ,” ಎಂದು ಮೊರ್ಕೆಲ್ ಸೋಮವಾರ ತಿಳಿಸಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲೂ ವೈಭವ್ ಉತ್ತಮ ಪ್ರದರ್ಶನ ನೀಡಿದ್ದರು. ನಾಗೋಯಾದಲ್ಲಿ ಶ್ರೀಲಂಕಾ ವಿರುದ್ಧದ ಸೆಮಿಫೈನಲ್‌ನಲ್ಲಿ 21 ಎಸೆತಗಳಲ್ಲಿ 38 ರನ್ ಗಳಿಸಿದ್ದ ಅವರು, ಪಾಕಿಸ್ತಾನ ವಿರುದ್ಧದ ಚಿನ್ನದ ಪದಕದ ಪಂದ್ಯದಲ್ಲಿ 9 ಎಸೆತಗಳಲ್ಲಿ 15 ರನ್ ಗಳಿಸಿದ್ದರು. ಆದರೆ ಈ ಪ್ರದರ್ಶನಗಳ ಹೊರತಾಗಿಯೂ, ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಆರಂಭಿಕ ಜೋಡಿಯನ್ನು ತಕ್ಷಣ ಬದಲಿಸುವ ಅಗತ್ಯವಿಲ್ಲ ಎಂಬುದು ಗಂಭೀರ್ ಅವರ ನಿಲುವಾಗಿದೆ.

ಈ ಆರಂಭಿಕ ಜೋಡಿ ದೀರ್ಘಕಾಲದಿಂದ ಸ್ಥಿರ ಪ್ರದರ್ಶನ ನೀಡುತ್ತಿರುವುದರಿಂದ ವೈಭವ್ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಗಂಭೀರ್ ಈ ಹಿಂದೆ ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆ ಅಥವಾ ಒತ್ತಡದ ಆಧಾರದ ಮೇಲೆ ತಂಡದ ಆಯ್ಕೆ ನಡೆಯುವುದಿಲ್ಲ. ಪಂದ್ಯ ಗೆಲ್ಲಲು ನಾಯಕ ಮತ್ತು ಕೋಚ್ ನಂಬಿಕೆ ಇಡುವ ಸಂಯೋಜನೆಯೇ ಪ್ರಮುಖ ಎಂದು ಅವರು ಸ್ಪಷ್ಟಪಡಿಸಿದ್ದರು.

WCL 2026: 39 ಎಸೆತಗಳಲ್ಲಿ 70 ರನ್‌ ಚಚ್ಚಿದ ಎಬಿ ಡಿ ವಿಲಿಯರ್ಸ್‌, ಮಿಸ್ಟರ್‌ 360 ಅಬ್ಬರಕ್ಕೆ ವಿಂಡೀಸ್‌ ಉಡೀಸ್‌!

ವೈಭವ್‌ ಸೂರ್ಯವಂಶಿ ಕಲಿಕೆಗೆ ಉತ್ತಮ ವಾತಾವರಣವಿದೆ

ಏಷ್ಯನ್ ಗೇಮ್ಸ್‌ಗೂ ಮುನ್ನ ನವದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲೂ ವೈಭವ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಮೊರ್ಕೆಲ್ ಪ್ರಕಾರ ಪಂದ್ಯದಲ್ಲಿ ಆಡದಿದ್ದರೂ ವೈಭವ್ ಕಲಿಯಲು ಸಾಕಷ್ಟು ಅವಕಾಶಗಳಿವೆ.

“ಅವರಿಗೆ ಆಟದ ಸಮಯ ಸಿಗದಿದ್ದರೂ, ಆತ ತಂಡದ ಬಸ್‌ನಲ್ಲಿ, ಡಗೌಟ್‌ನಲ್ಲಿ ಮತ್ತು ಹೋಟೆಲ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರರೊಂದಿಗೆ ಇರುತ್ತಾರೆ. ಅವರು ಹೇಗೆ ತಮ್ಮ ಪ್ರಕ್ರಿಯೆಗಳನ್ನು ಅನುಸರಿಸುತ್ತಾರೆ ಮತ್ತು ಇನಿಂಗ್ಸ್‌ಗೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಗಮನಿಸುವುದು ಅವರಿಗೆ ಬಹಳ ಮುಖ್ಯ,” ಎಂದು ಮೊರ್ಕೆಲ್ ಹೇಳಿದ್ದಾರೆ.

ವಿರಾಟ್‌ ಕೊಹ್ಲಿಯ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ವಾಸೀಮ್‌ ಜಾಫರ್‌!

ಹಿರಿಯ ಆಟಗಾರರನ್ನು ಗಮನಿಸುವಂತೆ ವೈಭವ್‌ಗೆ ತಾನು ವೈಯಕ್ತಿಕವಾಗಿಯೂ ಸವಾಲು ಹಾಕುತ್ತಿರುವುದಾಗಿ ಮೊರ್ಕೆಲ್ ತಿಳಿಸಿದ್ದಾರೆ. “ನಾನು ಬಸ್‌ನಲ್ಲಿ ಅವರನ್ನು ಯಾವಾಗಲೂ ಕೇಳುತ್ತೇನೆ—‘ಇಂದು ನೀನು ಕಲಿತ ಒಂದು ವಿಷಯ ಏನು? ಆ ಆಟಗಾರನ ಬ್ಯಾಟಿಂಗ್ ಬಗ್ಗೆ ನಿನಗೆ ಏನು ಅನಿಸಿತು?’ ಎಂದು. ಇಂತಹ ಪ್ರಶ್ನೆಗಳು ಆತನನ್ನು ಯೋಚಿಸುವಂತೆ ಮಾಡುತ್ತವೆ,” ಎಂದು ಮಾರ್ನೆ ಮೊರ್ಕೆಲ್ ತಿಳಿಸಿದ್ದಾರೆ.