WCL 2026: 39 ಎಸೆತಗಳಲ್ಲಿ 70 ರನ್ ಚಚ್ಚಿದ ಎಬಿ ಡಿ ವಿಲಿಯರ್ಸ್, ಮಿಸ್ಟರ್ 360 ಅಬ್ಬರಕ್ಕೆ ವಿಂಡೀಸ್ ಉಡೀಸ್!
ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಬ್ಯಾಟ್ಸ್‌ಮನ್ ಹಾಗೂ ದಿಗ್ಗಜ ಎಬಿ ಡಿ ವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಅವರು ಸ್ಪೋಟಕ ಬ್ಯಾಟಿಂಗ್ ನಡೆಸಿ ಕೇವಲ 39 ಎಸೆತಗಳಲ್ಲಿ 70 ರನ್‌ಗಳನ್ನು ಬಾರಿಸಿದರು. ತಮ್ಮ ಇನಿಂಗ್ಸ್‌ನಲ್ಲಿ ಅವರು 5 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿದರು.
39 ಎಸೆತಗಳಲ್ಲಿ 70 ರನ್ ಸಿಡಿಸಿದ ಎಬಿ ಡಿ ವಿಲಿಯರ್ಸ್. -
ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ (WCL) 2026ರ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡದ ನಾಯಕ ಎಬಿ ಡಿವಿಲಿಯರ್ಸ್ (AB De Villiers) ಮತ್ತೊಮ್ಮೆ ತಮ್ಮ ‘ಮಿಸ್ಟರ್ 360’ ಅವತಾರವನ್ನು ತಾಳಿದ್ದಾರೆ. ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡಿವಿಲಿಯರ್ಸ್ ಕೇವಲ 39 ಎಸೆತಗಳಲ್ಲಿ 70 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ಎಬಿಡಿ ಸ್ಪೋಟಕ ಬ್ಯಾಟಿಂಗ್‌ನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 242 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ವಿಂಡೀಸ್‌ಗೆ ದೊಡ್ಡ ಗುರಿಯನ್ನು ನೀಡಿತು.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಕ್ರೀಸ್‌ಗೆ ಆಗಮಿಸುತ್ತಿದ್ದಂತೆ ವಿಶೇಷ ಪ್ರದರ್ಶನದ ನಿರೀಕ್ಷೆ ಎಲ್ಲರಲ್ಲಿಯೂ ಮೂಡಿತ್ತು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಡಿದ ಮಾಜಿ ದಕ್ಷಿಣ ಆಫ್ರಿಕಾ ಆಟಗಾರ, ವೆಸ್ಟ್ ಇಂಡೀಸ್ ಬೌಲರ್‌ಗಳ ಮೇಲೆ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಡಿವಿಲಿಯರ್ಸ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳು ಸೇರಿದವು. ಮೈದಾನದ ಎಲ್ಲ ದಿಕ್ಕುಗಳಲ್ಲೂ ಚೆಂಡನ್ನು ಬಾರಿಸಿದ ಅವರು, ತಮ್ಮ ವಿಶಿಷ್ಟ 360 ಡಿಗ್ರಿ ಬ್ಯಾಟಿಂಗ್ ಶೈಲಿಯನ್ನು ಮತ್ತೊಮ್ಮೆ ಪ್ರದರ್ಶಿಸಿದರು.
IND vs WI: ಮೂರನೇ ಪಂದ್ಯದಲ್ಲಿ 5 ವಿಕೆಟ್ ಸೋಲಿನ ಬಳಿಕ ಭಾರತ ತಂಡಕ್ಕೆ ಭಾರಿ ದಂಡ ವಿಧಿಸಿದ ಐಸಿಸಿ!
ಸಾಂಪ್ರದಾಯಿಕ ಶಾಟ್‌ಗಳಿಗೆ ಮಾತ್ರ ಸೀಮಿತವಾಗದೆ, ಡಿವಿಲಿಯರ್ಸ್ ಫೀಲ್ಡರ್‌ಗಳ ನಡುವೆ ಖಾಲಿ ಜಾಗಗಳನ್ನು ಹುಡುಕುತ್ತಾ ವಿಭಿನ್ನ ರೀತಿಯ ಶಾಟ್‌ಗಳನ್ನು ಹೊಡೆದರು. ಅವರ ನವೀನ ಬ್ಯಾಟಿಂಗ್ ಶೈಲಿ ವೆಸ್ಟ್ ಇಂಡೀಸ್ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿಸಿ, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡದ ರನ್‌ಗಳಿಗೆ ಭರ್ಜರಿ ವೇಗವನ್ನು ನೀಡಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕವೂ ಡಿವಿಲಿಯರ್ಸ್ ಅವರ ಬ್ಯಾಟಿಂಗ್‌ನ ಆಕರ್ಷಣೆ ಕಡಿಮೆಯಾಗಿಲ್ಲ ಎಂಬುದನ್ನು ಈ ಇನಿಂಗ್ಸ್ ಮತ್ತೊಮ್ಮೆ ತೋರಿಸಿಕೊಟ್ಟಿದೆ. ‘ಮಿಸ್ಟರ್ 360’ ಎಂದೇ ಖ್ಯಾತರಾಗಿರುವ ಡಿವಿಲಿಯರ್ಸ್ ಅವರ ಸ್ಫೋಟಕ ಆಟ ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ಮರಳಿ ತಂದಿತು.
WCL 2026 — AB DE VILLIERS! AB de Villiers smashed a brilliant 70 runs off just 39 balls! 💥 PURE CLASS FROM THE LEGEND! https://t.co/UNeWRDy1rh
— Rehan 56 (@imrehan056) October 4, 2026
ರಿಚರ್ಡ್ ಲೆವಿ ಸ್ಪೋಟಕ ಬ್ಯಾಟಿಂಗ್
ಎಬಿ ಡಿವಿಲಿಯರ್ಸ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ಇನಿಂಗ್ಸ್ ಆರಂಭಿಸಿದ ರಿವರ್ಡ್ ಲೆವಿ ಅವರು ಕೂಡ ವಿಂಡೀಸ್ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಎಬಿಡಿ ಎದುರಿಸಿದ ಅಷ್ಟೇ ಎಸೆತಗಳನ್ನು ಎದುರಿಸಿದ ಅವರು, 8 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 87 ರನ್‌ಗಳನ್ನು ಚಚ್ಚಿದರು. ಅವರು 223.08 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಎಲ್ಲರ ಗಮನವನ್ನು ಸೆಳೆಯಿತು. ಫಾಫ್ ಡು ಪ್ಲೆಸಿಸ್ ಕೇವಲ 14 ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಎಬಿಡಿ ಜೊತೆಗೆ ರಿಚರ್ಡ್ ಲೆವಿ ಕೇವಲ 42 ಎಸೆತಗಳಲ್ಲಿ 104 ರನ್‌ಗಳನ್ನು ಕಲೆ ಹಾಕಿದ್ದರು.
ವಿರಾಟ್ ಕೊಹ್ಲಿಯ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ವಾಸೀಮ್ ಜಾಫರ್!
145ಕ್ಕೆ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಆಲ್‌ಔಟ್
ಬಳಿಕ ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಪರ ಕ್ರಿಸ್ ಗೇಲ್ ಸ್ಪೋಟಕ ಬ್ಯಾಟ್ ಮಾಡಿದರು. ಅವರು ಆಡಿದ ಕೇವಲ 31 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 60 ರನ್ ಸಿಡಿಸಿದರು. ಆದರೆ, ಇನ್ನುಳಿದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ಎರಡಂಕಿ ಮೊತ್ತವನ್ನು ದಾಖಲಿಸದೇ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ಕಾರ್ಲೋಸ್ ಬ್ರಾಥ್‌ವೇಟ್ 29ರನ್ ಸಿಡಿಸಿದರು. ಇಮ್ರಾನ್ ತಾಹೀರ್ (24 ಕ್ಕೆ 3) ಸ್ಪಿನ್ ಮೋಡಿಗೆ ನಲುಗಿದ ವಿಂಡೀಸ್, 18.2 ಓವರ್‌ಗಳಿಗೆ 145 ರನ್‌ಗಳಿಗೆ ಆಲ್‌ಔಟ್ ಆಯಿತು. ಅಂತಿಮವಾಗಿ ಹರಿಣ ಪಡೆ 97 ರನ್‌ಗಳಿಂದ ಗೆದ್ದು ಬೀಗಿತು.