ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDA vs AUSA: ಕೆಎಲ್‌ ರಾಹುಲ್‌ ಭರ್ಜರಿ ಶತಕ, ಆಸ್ಟ್ರೇಲಿಯಾ ಎದುರು ಭಾರತ ಎ ತಂಡಕ್ಕೆ 5 ವಿಕೆಟ್‌ ಜಯ!

ಕೆಎಲ್‌ ರಾಹುಲ್‌ ಹಾಗೂ ಸಾಯಿ ಸುದರ್ಶನ್‌ ಅವರ ಶತಕಗಳ ಬಲದಿಂದ ಭಾರತ ಎ ತಂಡ, ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯಾ ಎ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆಯಿತು. ಆಸ್ಟ್ರೇಲಿಯಾ ಎ ನೀಡಿದ್ದ 413 ರನ್‌ಗಳ ಗುರಿಯನ್ನು ಭಾರತ ಎ 5 ವಿಕೆಟ್‌ ಕಳೆದುಕೊಂಡು ಚೇಸ್‌ ಮಾಡಿತು.

ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡಕ್ಕೆ 5 ವಿಕೆಟ್‌ ಜಯ!

ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡಕ್ಕೆ 5 ವಿಕೆಟ್‌ ಜಯ. -

Profile Ramesh Kote Sep 26, 2025 5:04 PM

ನವದಹಲಿ: ಕೆಎಲ್‌ ರಾಹುಲ್‌ (KL Rahul) ಹಾಗೂ ಸಾಯಿ ಸುದರ್ಶನ್‌ (Sai Sudarshan) ಅವರ ಶತಕಗಳ ಬಲದಿಂದ ಭಾರತ ಎ ತಂಡ, ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಭಾರತ ಎ (India A) ತಂಡ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಲಖನೌದ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ನೀಡಿದ್ದ 413 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಎ ತಂಡ, 91.3 ಓವರ್‌ಳಿಗೆ 5 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು. ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 11 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದ ಕೆಎಲ್‌ ರಾಹುಲ್‌, ದ್ವಿತೀಯ ಇನಿಂಗ್ಸ್‌ನಲ್ಲಿ ಅಜೇಯ 176 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.

ಕೆಎಲ್‌ ರಾಹುಲ್‌ ಜೊತೆಗೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಸಾಥ್‌ ನೀಡಿದ್ದ ಸಾಯಿ ಸುದರ್ಶನ್‌ ಅವರು ಎರಡನೇ ಇನಿಂಗ್ಸ್‌ನಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಅವರು ಆಡಿದ್ದ 172 ಎಸೆತಗಳಲ್ಲಿ 100 ರನ್‌ಗಳನ್ನು ಬಾರಿಸಿದ್ದರು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ 75 ರನ್‌ಗಳನ್ನು ಗಳಿಸಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವೆಸ್ಟ್‌ ಇಂಡೀಸ್‌ ವಿರುದ್ದದ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಕ್ಟೋಬರ್‌ 2 ರಂದು ಟೆಸ್ಟ್‌ ಸರಣಿ ಆರಂಭವಾಗಲಿದೆ.

Asia Cup 2025: ʻನಿಮ್ಮ ಮಾತು ತಪ್ಪುʼ-ಮೊಹಮ್ಮದ್‌ ಕೈಫ್‌ಗೆ ಜಸ್‌ಪ್ರೀತ್‌ ತಿರುಗೇಟು!

ಮೂರನೇ ದಿನ 74 ರನ್‌ ಳಿಸಿದ ಬಳಿಕ ರಿಟೈರ್‌ ಹರ್ಟ್‌ ಆಗಿದ್ದ ಕೆಎಲ್‌ ರಾಹುಲ್‌, ನಾಲ್ಕನೇ ಹಾಗೂ ಅಂತಿಮ ದಿನ ಕ್ರೀಸ್‌ಗೆ ಬಂದರು ಹಾಗೂ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು 143 ಎಸೆತಗಳಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನದ 22ನೇ ಶತಕವನ್ನು ಪೂರ್ಣಗೊಳಿಸಿದರು. ಒಟ್ಟಾರೆಯಾಗಿ ಅವರು ಆಡಿದ 210 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 176 ರನ್‌ಗಳನ್ನು ಬಾರಿಸಿದರು. ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಈ ಇನಿಂಗ್ಸ್‌ ಕೆಎಲ್‌ ರಾಹುಲ್‌ಗೆ ಹೆಚ್ಚಿನ ವಿಶ್ವಾಸವನ್ನು ಮೂಡಿಸಿದೆ.

ಆಸ್ಟ್ರೇಲಿಯಾ ಎ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 420 ರನ್‌ಗಳನ್ನು ಕಲೆ ಹಾಕಿದ ಬಳಿಕ ಪ್ರಥಮ ಇನಿಂಗ್ಸ್‌ ಮಾಡಿದ್ದ ಭಾರತ ಎ ತಂಡ ಕೇವಲ 194 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆದರೆ, ಭಾರತ ಎ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಕೇವಲ 185 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಆ ಮೂಲಕ ಆತಿಥೇಯ ತಂಡಕ್ಕೆ 413 ರನ್‌ಗಳ ಗುರಿಯನ್ನು ಆಸೀಸ್‌ ನೀಡಿತ್ತು.

IND vs SL: ಶ್ರೀಲಂಕಾ ವಿರುದ್ದ ಸೂಪರ್‌-4ರ ಪಂದ್ಯಕ್ಕೆ ಭಾರತ ಸಜ್ಜು, ಪಿಚ್‌ ರಿಪೋರ್ಟ್‌, ಮುಖಮುಖಿ ದಾಖಲೆ!

ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿರುವ ಧ್ರುವ್‌ ಜುರೆಲ್‌ ಅವರು ಕೂಡ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆಯನ್ನು ನೀಡಿದ್ದಾರೆ. ಅವರು ಆಡಿದ 66 ಎಸೆತಗಳಲ್ಲಿ 56 ರನ್‌ಗಳನ್ನು ಗಳಿಸಿದರು. ಆದರೆ, ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನವನ್ನು ಪಡೆದಿರುವ ಧ್ರುವ್‌ ಜುರೆಲ್‌ ಅವರು ಪ್ರಥಮ ಇನಿಂಗ್ಸ್‌ನಲ್ಲಿ 1 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 5 ರನ್‌ ಗಳಿಸಿ ನಿರಾಶೆ ಮೂಡಿಸಿದ್ದರು.

ಅನಧಿಕೃತ ಟೆಸ್ಟ್‌ ಸರಣಿಯನ್ನು ಮುಗಿಸಿರುವ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಇದೀಗ ಅನಧಿಕೃತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಸೆಪ್ಟಂಬರ್‌ 30 ರಂದು ಮೊದಲನೇ ಒಡಿಐ ಪಂದ್ಯ, ಅಕ್ಟೋಬರ್‌ 3 ರಂದು ಎರಡನೇ ಏಕದಿನ ಪಂದ್ಯ ಹಾಗೂ ಮೂರನೇ ಏಕದಿನ ಪಂದ್ಯ ಅಕ್ಟೋಬರ್‌ 5 ರಂದು ನಡೆಯಲಿದೆ. ಈ ಮೂರೂ ಪಂದ್ಯಗಳು ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ನಡೆಯಲಿವೆ.