Asia Cup 2025: ʻನಿಮ್ಮ ಮಾತು ತಪ್ಪುʼ-ಮೊಹಮ್ಮದ್ ಕೈಫ್‌ಗೆ ಜಸ್‌ಪ್ರೀತ್ ತಿರುಗೇಟು!
ಭಾರತೀಯ ಕ್ರಿಕೆಟ್ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಇತ್ತೀಚೆಗೆ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ವೃತ್ತಿಜೀವನದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಶ್ನೆಗಳನ್ನು ಮಾಡಿದ್ದರು. ಇದೀಗ ಭಾರತದ ವೇಗಿ ಅದಕ್ಕೆ ಪ್ರತಿಕ್ರಿಯೆ ನೀಡಿ ಮಾಜಿ ಆಟಗಾರನಿಗೆ ತಿರುಗೇಟು ನೀಡಿದ್ದಾರೆ.

ಮೊಹಮ್ಮದ್ ಕೈಫ್‌ಗೆ ತಿರುಗೇಟು ಕೊಟ್ಟ ಜಸ್‌ಪ್ರೀತ್ ಬುಮ್ರಾ. -

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರ ಫಾರ್ಮ್ ಅಷ್ಟೊಂದು ಪ್ರಭಾವಶಾಲಿಯಾಗಿಲಿಲ್ಲ. ಬ್ಯಾಟ್ಸ್‌ಮನ್‌ಗಳು ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಬುಮ್ರಾ ಎದುರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಹಾಗೂ ಅವರು ಹೆಚ್ಚು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಅವರ ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif), ಜಸ್‌ಪ್ರೀತ್ ಬುಮ್ರಾ ಅವರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಬಗ್ಗೆ ಪ್ರಶ್ನಿಸಿದ್ದಾರೆ. ಭಾರತದ ವೈಟ್-ಬಾಲ್ ತಂಡದಲ್ಲಿ ಬುಮ್ರಾ ಅವರ ಪಾತ್ರದ ಬಗ್ಗೆಯೂ ಅವರು ಚರ್ಚಿಸಿದ್ದಾರೆ. ಕೈಫ್ ಅವರ ಟ್ವೀಟ್‌ಗೆ ಬುಮ್ರಾ ಬಲವಾದ ಪ್ರತಿಕ್ರಿಯೆಯನ್ನು ನೀಡಿ ಟೀಕಿಸಿದ್ದಾರೆ.
ಏಷ್ಯಾ ಕಪ್ ಸಮಯದಲ್ಲಿ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ, ಬುಮ್ರಾ ಆರಂಭಿಕ ಓವರ್‌ನಲ್ಲಿ ಮೂರು ಓವರ್‌ಗಳ ಸ್ಪೆಲ್ ಅನ್ನು ಬೌಲ್ ಮಾಡುತ್ತಿದ್ದರು ಎಂದು ಮೊಹಮ್ಮದ್ ಕೈಫ್ ಗಮನಿಸಿದರು. ಅವರು ಸಾಮಾನ್ಯವಾಗಿ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುತ್ತಾರೆ. ಬುಮ್ರಾ ಈಗ ಅಭ್ಯಾಸದ ನಂತರ ಬೌಲಿಂಗ್ ಮಾಡಲು ಬಯಸುತ್ತಾರೆ ಎಂದು ಕೈಫ್ ಹೇಳಿದರು. ಆದಾಗ್ಯೂ, ಅವರು ಸ್ಲಾಗ್ ಓವರ್‌ಗಳಲ್ಲಿ ಕಡಿಮೆ ಬೌಲಿಂಗ್ ಮಾಡಿದರೆ, ಅದು ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ಪ್ರಯೋಜನವಾಗಬಹುದು. ಆಯ್ಕೆದಾರರು ಬುಮ್ರಾ ಅವರ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 15 ಸದಸ್ಯರ ತಂಡದಲ್ಲಿ ಬುಮ್ರಾ ಅವರನ್ನು ಸೇರಿಸಿಕೊಳ್ಳಲಾಗಿದೆ.
IND vs SL: ಶ್ರೀಲಂಕಾ ವಿರುದ್ದ ಸೂಪರ್-4ರ ಪಂದ್ಯಕ್ಕೆ ಭಾರತ ಸಜ್ಜು, ಪಿಚ್ ರಿಪೋರ್ಟ್, ಮುಖಮುಖಿ ದಾಖಲೆ!
ಮೊಹಮ್ಮದ್ ಕೈಫ್ ಹಾಗೂ ಜಸ್‌ಪ್ರೀತ್ ಬುಮ್ರಾ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಈ ಚರ್ಚೆ ಬುಮ್ರಾ ಅವರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಹೊರೆಯ ಮೇಲೆ ಕೇಂದ್ರೀಕೃತವಾಗಿದೆ ಮತ್ತು ತಂಡದಲ್ಲಿ ಅವರ ಪಾತ್ರದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಉಲ್ಲೇಖಿಸಿ ಕೈಫ್, ಕೆಲವು ಆರೋಪಗಳನ್ನು ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದಾಗ, ಬುಮ್ರಾ ಇನಿಂಗ್ಸ್‌ನ ಆರಂಭದಲ್ಲಿ ಮೂರು ಓವರ್‌ಗಳನ್ನು ಬೌಲ್ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಇದು ಎದುರಾಳಿ ತಂಡಗಳಿಗೆ ಲಾಭವಾಗುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Bumrah under Rohit would generally bowl overs 1, 13, 17, 19. Under Surya, in Asia cup, he bowled a three-overs spell at the start. To avoid injury, Bumrah these days, prefers to bowl while his body is warmed up. 1 over of Bumrah in the remaining 14 overs is a huge relief for…
— Mohammad Kaif (@MohammadKaif) September 25, 2025
ಬುಮ್ರಾ ಬಗ್ಗೆ ಮೊಹಮ್ಮದ್ ಕೈಫ್ ಹೇಳಿದ್ದೇನು?
"ರೋಹಿತ್ ಶರ್ಮಾ ನಾಯಕತ್ವದಲ್ಲಿ ಜಸ್‌ಪ್ರೀತ್ ಬುಮ್ರಾ ಸಾಮಾನ್ಯವಾಗಿ 1, 13, 17 ಮತ್ತು 19ನೇ ಓವರ್‌ಗಳನ್ನು ಬೌಲ್ ಮಾಡುತ್ತಿದ್ದರು. ಆದರೆ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಅವರು ಏಷ್ಯಾ ಕಪ್‌ನ ಆರಂಭದಲ್ಲಿ ಮೂರು ಓವರ್‌ಗಳನ್ನು ನಿಯಮಿತವಾಗಿ ಬೌಲ್ ಮಾಡುತ್ತಿದ್ದರು. ಗಾಯವನ್ನು ತಪ್ಪಿಸಲು, ಬುಮ್ರಾ ಇತ್ತೀಚಿನ ದಿನಗಳಲ್ಲಿ ಅಭ್ಯಾಸದ ನಂತರ ಬೌಲ್ ಮಾಡಲು ಬಯಸುತ್ತಿದ್ದಾರೆ. ಉಳಿದ 14 ಓವರ್‌ಗಳಲ್ಲಿ ಬುಮ್ರಾ ಕೇವಲ ಒಂದು ಓವರ್ ಬೌಲ್ ಮಾಡಿದರೆ, ಅದು ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ನಿರಾಳವನ್ನು ನೀಡುತ್ತದೆ. ಇದು ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ವಿರುದ್ಧ ಭಾರತಕ್ಕೆ ಹಾನಿ ಮಾಡಬಹುದು," ಎಂದು ಮೊಹಮ್ಮದ್ ಕೈಫ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
Inaccurate before inaccurate again 👍🏾 https://t.co/knkjXOGOKb
— Jasprit Bumrah (@Jaspritbumrah93) September 25, 2025
ಜಸ್‌ಪ್ರೀತ್ ಬುಮ್ರಾ ಪ್ರತಿಕ್ರಿಯೆ
ಮೊಹಮ್ಮದ್ ಕೈಫ್ ಹೇಳಿಕೆಗೆ ಜಸ್‌ಪ್ರೀತ್ ಬುಮ್ರಾ ಸೂಕ್ತ ಉತ್ತರ ನೀಡಿದ್ದಾರೆ. ಕೈಫ್ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂದು ವೇಗಿ ನಂಬಿದ್ದಾರೆ. "ಮೊದಲು ತಪ್ಪು, ನಂತರ ತಪ್ಪಾಗಿದೆ," ಎಂದು ಜಸ್‌ಪ್ರೀತ್ ಬುಮ್ರಾ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಕೈಫ್ ಟ್ವೀಟ್ ಬಗ್ಗೆ ಬುಮ್ರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.