ನವದೆಹಲಿ: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ (IND vs ZIM) ಭಾರತ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದ ಬಳಿಕ, ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರು, ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ (VVS Laxman) ಅವರ ಪಾತ್ರವನ್ನು ಶ್ಲಾಘಿಸಿದರು. ಲಕ್ಷ್ಮಣ್ ಅವರ ಮಾರ್ಗದರ್ಶನವು ತಮ್ಮಲ್ಲಿ ಹೊಸ ಪ್ರೇರಣೆಯನ್ನು ಮೂಡಿಸಿತು ಎಂದು ಹೇಳಿದರು. ಮತ್ತೊಂದೆಡೆ ಯುವ ನಾಯಕನಾಗಿ ಶ್ರೇಯಸ್ ಅಯ್ಯರ್ ಪ್ರದರ್ಶಿಸಿದ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವವನ್ನು ಕೋಚ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಯಮಿತ ಆಟಗಾರರಾದ ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರಂತಹ ಪ್ರಮುಖ ಕೀ ಆಟಗಾರರು ತಂಡದಲ್ಲಿರದಿದ್ದರೂ, ಹೊಸ ಮುಖಗಳೊಂದಿಗೆ ಕಣಕ್ಕಿಳಿದ ಭಾರತ, ಜಿಂಬಾಬ್ವೆ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿತು. ಸರಣಿಯ ಮೂರನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ 35 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ, 3-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು. ಬಿಸಿಸಿಐ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ವಿವಿಎಸ್ ಲಕ್ಷ್ಮಣ್ ಅವರು ಮೊದಲಿಗೆ ನಾಯಕ ಶ್ರೇಯಸ್ ಅಯ್ಯರ್ ಬಗ್ಗೆ ದೀರ್ಘಾವಧಿ ಮಾತನಾಡಿ ಗುಣಗಾನ ಮಾಡಿದರು.
IND vs ZIM: ವೈಭವ್ ಸೂರ್ಯವಂಶಿಯಿಂದ ಔಟ್ ಆಫ್ ಫಾರ್ಮ್ ಅಭಿಷೇಕ್ ಶರ್ಮಾ ಸ್ಥಾನಕ್ಕೆ ಕುತ್ತು?
"ಶ್ರೇಯಸ್‌ಗೆ ನಾನು ವಿಶೇಷವಾಗಿ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ನಾಯಕನಾಗಿ ಅವರ ಆರಂಭ ಕಠಿಣವಾಗಿತ್ತು. ಆದರೆ ಮೊದಲ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ನಮ್ಮೊಂದಿಗೆ ಸೇರಿಕೊಂಡ ದಿನದಿಂದಲೇ ಅವರು ತೋರಿಸಿದ ರೀತಿಯು ಗಮನಾರ್ಹವಾಗಿತ್ತು. ಅವರು ತುಂಬಾ ಸಕಾರಾತ್ಮಕ ಮನೋಭಾವ ಹೊಂದಿದ್ದರು," ಎಂದು ಲಕ್ಷ್ಮಣ್ ಹೇಳಿದರು.
ಆ ಮೂಲಕ ಲಕ್ಷ್ಮಣ್, ಈ ತಿಂಗಳ ಆರಂಭದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಟಿ20ಐ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ಮೊದಲ ಅನುಭವವಾಗಿದ್ದ 0-4 ಸೋಲನ್ನು ಉಲ್ಲೇಖಿಸಿದರು.
"ಇದು ಹೊಸ ಆಟಗಾರರ ತಂಡವಾಗಿತ್ತು. ಇಂಗ್ಲೆಂಡ್ ಪ್ರವಾಸದಲ್ಲಿದ್ದ ಆಟಗಾರರಲ್ಲಿ ಕೇವಲ ನಾಲ್ಕು ಅಥವಾ ಐದು ಮಂದಿ ಮಾತ್ರ ಈ ಪ್ರವಾಸದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದರು ಎಂಬುದು ನಮಗೆ ತಿಳಿದಿತ್ತು. ಆದರೂ ಶ್ರೇಯಸ್ ಅತ್ಯಂತ ಆತ್ಮವಿಶ್ವಾಸದಿಂದಿದ್ದರು. ಈ ಗೆಲುವಿನ ಹೆಚ್ಚಿನ ಶ್ರೇಯಸ್ಸು ನಾಯಕನಿಗೆ ಸಲ್ಲಬೇಕು. ಏಕೆಂದರೆ ಪ್ರತಿಯೊಬ್ಬ ಆಟಗಾರನನ್ನೂ ಅವರು ಉತ್ತೇಜಿಸಿದ ರೀತಿ ಅದ್ಭುತವಾಗಿತ್ತು," ಎಂದು ಲಕ್ಷ್ಮಣ್ ಹೇಳಿದರು.
ಶುಭಮನ್ ಗಿಲ್ ಬೇಡ, ರೋಹಿತ್ ಶರ್ಮಾ ಜೊತೆ ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸಬೇಕೆಂದ ಫಾರೂಖ್ ಇಂಜಿನಿಯರ್!
ವಿವಿಎಸ್ ಲಕ್ಷ್ಮಣ್‌ಗೆ ಶ್ರೇಯಸ್ ಅಯ್ಯರ್ ಮೆಚ್ಚಗೆ
"ನನ್ನ ಪ್ರಾಮಾಣಿಕ ಅಭಿಪ್ರಾಯದಲ್ಲಿ, ಕೈಚೆಲ್ಲಿದ ಕೆಲವು ಕ್ಯಾಚ್‌ಗಳನ್ನು ಹೊರತುಪಡಿಸಿದರೆ, ಇಡೀ ಸರಣಿಯಲ್ಲಿ ನಾವು ಪರಿಪೂರ್ಣ ಪ್ರದರ್ಶನ ನೀಡಿದ್ದೇವೆ. ತಂಡದ ಪ್ರತಿಯೊಬ್ಬ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಸೇರಿದಂತೆ ಎಲ್ಲರ ಪರಿಶ್ರಮ ಅದ್ಭುತವಾಗಿತ್ತು," ಎಂದು ಶ್ರೇಯಸ್ ಅಯ್ಯರ್ ಹೇಳಿದರು.
"ನಮ್ಮನ್ನು ಪ್ರೇರೇಪಿಸಿದ ಮತ್ತು ಉತ್ತೇಜಿಸಿದಕ್ಕಾಗಿ ಲಕ್ಷ್ಮಣ್ ಸರ್ ಅವರಿಗೆ ಧನ್ಯವಾದಗಳು. ಪ್ರತಿದಿನ ನಾವು ಮೈದಾನಕ್ಕೆ ಇಳಿದಾಗ, ನೀವು ನೀಡಿದ ಸಲಹೆಗಳು ಮತ್ತು ಮಾತುಗಳು ಅತ್ಯಂತ ಸೂಕ್ತವಾಗಿದ್ದವು ಎಂದು ನಮಗೆ ಅನಿಸಿತು. ಅವುಗಳೊಂದಿಗೆ ನಾವು ಸಂಪೂರ್ಣವಾಗಿ ಹೊಂದಿಕೊಳ್ಳಲು ಸಾಧ್ಯವಾಯಿತು. ಆದ್ದರಿಂದ ನಿಮಗೆ ತುಂಬಾ ಧನ್ಯವಾದಗಳು," ಎಂದು ಅಯ್ಯರ್ ಹೇಳಿದರು.
ವಿವಿಎಸ್ ಲಕ್ಷ್ಮಣ್ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮುಖ್ಯಸ್ಥರಾಗಿದ್ದಾರೆ. ಅಗತ್ಯವಿರುವ ಸಂದರ್ಭಗಳಲ್ಲಿ ಕಡಿಮೆ ಅವಧಿಯ ಪ್ರವಾಸಗಳಿಗೆ ಅವರು ಭಾರತದ ತಂಡದ ಹಂಗಾಮಿ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಾರೆ.