ಲಂಡನ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಹರ್ಮನ್‌ಪ್ರೀತ್ ಕೌರ್ (Harmanpreet kaur) ನಾಯಕತ್ವದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ (INDW vs ENGW) 270 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ 212 ವರ್ಷಗಳ ಇತಿಹಾಸವನ್ನು ಹೊಂದಿರುವ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಣದಲ್ಲಿ ಮೊಟ್ಟ ಮೊದಲ ಮಹಿಳಾ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಭಾರತ ಭಾಜನವಾಯಿತು.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದ ಭಾರತ ಮಹಿಳಾ ತಂಡ, ಲಾರ್ಡ್ಸ್‌ನಲ್ಲಿ ಮೊದಲ ಮೊದಲ ಬಾರಿ ಮಹಿಳಾ ಟೆಸ್ಟ್ ಪಂದ್ಯವನ್ಮು ಗೆದ್ದು ಇತಿಹಾಸವನ್ನು ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವಿನಲ್ಲಿ ಬ್ಯಾಟರ್ ಯಾಸ್ತಿಕಾ ಭಾಟಿಯಾ ಹಾಗೂ ವೇಗಿ ಕ್ರಾಂತಿ ಗೌಡ್ ಇದುವರೆಗೆ ಯಾವುದೇ ಮಹಿಳಾ ಕ್ರಿಕೆಟಿಗರು ಮಾಡದ ಸಾಧನೆಯನ್ನು ಮಾಡಿದ್ದಾರೆ. ಲಾರ್ಡ್ಸ್‌ನ ಪ್ರತಿಷ್ಠಿತ ಆನರ್ಸ್ ಬೋರ್ಡ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ ವಿಶ್ವದ ಮೊದಲ ಮಹಿಳಾ ಕ್ರಿಕೆಟಿಗರು ಎಂಬ ಹೆಗ್ಗಳಿಕೆಗೆ ಇಬ್ಬರೂ ಪಾತ್ರರಾಗಿದ್ದಾರೆ.
IND vs ENG: ಸೂರ್ಯಕುಮಾರ್ ಯಾದವ್ ಬಗ್ಗೆ ದೊಡ್ಡ ಹೇಳಿದ ಆರ್ ಅಶ್ವಿನ್!
ಭಾರತದ ವೇಗಿ ಕ್ರಾಂತಿ ಗೌಡ್ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಐದು ವಿಕೆಟ್ ಕಬಳಿಸಿದರು. ಇದರೊಂದಿಗೆ ಲಾರ್ಡ್ಸ್ ಆನರ್ಸ್ ಬೋರ್ಡ್‌ನಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಇತಿಹಾಸದ ಮೊದಲ ಮಹಿಳಾ ಕ್ರಿಕೆಟಿಗ ಎಂಬ ದಾಖಲೆ ಬರೆದರು.
ಇನ್ನೊಂದೆಡೆ, ವಿಕೆಟ್‌ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಭಾರತದ ಎರಡನೇ ಇನಿಂಗ್ಸ್‌ನಲ್ಲಿ ಒತ್ತಡದ ಪರಿಸ್ಥಿತಿಯಲ್ಲಿಯೇ 113 ರನ್‌ಗಳ ಅಮೋಘ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಲಾರ್ಡ್ಸ್ ಆನರ್ಸ್ ಬೋರ್ಡ್‌ನಲ್ಲಿ ಹೆಸರು ದಾಖಲಿಸಿದ ಮೊದಲ ಮಹಿಳಾ ಬ್ಯಾಟರ್ ಎಂಬ ಐತಿಹಾಸಿಕ ಗೌರವಕ್ಕೂ ಅವರು ಭಾಜನರಾದರು.
ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಆರಂಭದಿಂದ ಅಂತ್ಯದವರೆಗೆ ಭಾರತ ಮಹಿಳಾ ತಂಡವೇ ಸಂಪೂರ್ಣ ಮೇಲುಗೈ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತ, ಪ್ರಥಮ ಇನಿಂಗ್ಸ್‌ನಲ್ಲಿ 285 ರನ್‌ಗಳ ಮೊತ್ತ ಕಲೆಹಾಕಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ 83 ರನ್‌ಗಳ ಅಮೂಲ್ಯ ಇನಿಂಗ್ಸ್ ಆಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.
ಬಳಿಕ ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಇಂಗ್ಲೆಂಡ್ ಬ್ಯಾಟರ್‌ಗಳು ತತ್ತರಿಸಿದರು. ಕ್ರಾಂತಿ ಗೌಡ್ ಅವರ ಮಾರಕ ಬೌಲಿಂಗ್ ದಾಳಿಯ ಎದುರು ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 170 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ಪ್ರಥಮ ಇನಿಂಗ್ಸ್‌ನ ಆಧಾರದ ಮೇಲೆ 115 ರನ್‌ಗಳ ಮಹತ್ವದ ಮುನ್ನಡೆ ಸಾಧಿಸಿತು.
IND vs ENG: ಕೊಹ್ಲಿ ಕಮ್‌ಬ್ಯಾಕ್; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಎರಡನೇ ಇನಿಂಗ್ಸ್‌ನಲ್ಲಿ ಯಾಸ್ತಿಕಾ ಭಾಟಿಯಾ ಅವರ ಅಮೋಘ ಶತಕ ಹಾಗೂ ಸ್ಮೃತಿ ಮಂಧಾನಾ ಅವರ 70 ರನ್‌ಗಳ ಅಮೂಲ್ಯ ಕೊಡುಗೆಯ ನೆರವಿನಿಂದ ಭಾರತ ತಂಡ, 341 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಇಂಗ್ಲೆಂಡ್‌ಗೆ ಗೆಲುವಿಗಾಗಿ ಕಠಿಣ ಮೊತ್ತದ ಗುರಿಯನ್ನು ನೀಡಿತು.
ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭಾರತೀಯ ವೇಗಿಗಳು ಮತ್ತು ಸ್ಪಿನ್ನರ್‌ಗಳ ಬಿಗಿ ದಾಳಿಗೆ ತತ್ತರಿಸಿತು. ಭಾರತದ ಸಂಘಟಿತ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ ಮಹಿಳಾ ತಂಡ ಕೇವಲ 186 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 270 ರನ್‌ಗಳ ಭರ್ಜರಿ ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿ ಲಾರ್ಡ್ಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿತು.