ನವದೆಹಲಿ: ಏಷ್ಯಾ ಕ್ರೀಡಾಕೂಟಕ್ಕೂ (Asian Games) ಮುನ್ನ ಭಾರತ ಮತ್ತು ಜಪಾನ್ (IND vs JAP) ತಂಡಗಳು ಐತಿಹಾಸಿಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಇದುವರೆಗೆ ಟಿ20ಐ ಪಂದ್ಯದಲ್ಲಿ ಪರಸ್ಪರ ಎದುರಾಗಿಲ್ಲ. ಹೀಗಾಗಿ ಈ ಪಂದ್ಯ ಜಪಾನ್ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಲಿದೆ. ಈ ಮಹತ್ವದ ಪಂದ್ಯ ಸೆಪ್ಟಂಬರ್ 22 ರಂದು ಸಾನೋ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಏಷ್ಯನ್ ಗೇಮ್ಸ್‌ನಲ್ಲೂ ಆಡಲಿರುವ ಅದೇ ಆಟಗಾರರ ತಂಡವನ್ನು ಭಾರತ ಮತ್ತು ಜಪಾನ್ ಕಣಕ್ಕಿಳಿಸಲಿವೆ. ಅಫ್ಘಾನಿಸ್ತಾನ ವಿರುದ್ಧದ ತವರಿನ ಟಿ20Y ಸರಣಿಯನ್ನು ಭಾರತ 3-0 ಅಂತರದಲ್ಲಿ ಗೆದ್ದಿದ್ದು, ಉತ್ತಮ ಆತ್ಮವಿಶ್ವಾಸದೊಂದಿಗೆ ಈ ಪಂದ್ಯಕ್ಕೆ ಪ್ರವೇಶಿಸುತ್ತಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿದ್ದು, ಮತ್ತೊಂದು ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಭಾರತ vs ಜಪಾನ್ ಐತಿಹಾಸಿಕ ಟಿ20 ಪಂದ್ಯಕ್ಕೆ ಚಂಡಮಾರುತ ಭೀತಿ; ಸೋಮವಾರದ ಅಭ್ಯಾಸ ಮೊಟಕು
ಭಾರತ vs ಜಪಾನ್ ಟಿ20ಐ ಪಂದ್ಯ ಬಗ್ಗೆ ನಿಮಗೆ ತಿಳಿದಿರಬೇಕಾದ ಮಾಹಿತಿ
ಭಾರತ-ಜಪಾನ್ ಟಿ20ಐ ಪಂದ್ಯ ಯಾವಾಗ?
ಭಾರತ ಮತ್ತು ಜಪಾನ್ ನಡುವಿನ ಏಕೈಕ ಟಿ20ಐ ಪಂದ್ಯ 2026ರಂದು ಸೆಪ್ಟೆಂಬರ್ 22 ರಂದು ನಡೆಯಲಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ.
ಭಾರತ-ಜಪಾನ್ ಟಿ20ಐ ಪಂದ್ಯ ಎಲ್ಲಿ ನಡೆಯಲಿದೆ?
ಈ ಪಂದ್ಯ ಮಂಗಳವಾರ ಜಪಾನ್‌ನ ಸಾನೋ ಇಂಟರ್‌ನ್ಯಾಷನಲ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಪಂದ್ಯ ಯಾವ ಸಮಯಕ್ಕೆ ಆರಂಭವಾಗಲಿದೆ?
ಭಾರತೀಯ ಕಾಲಮಾನ ಬೆಳಗ್ಗೆ 9:30ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಬೆಳಗ್ಗೆ 9:00 ಗಂಟೆಗೆ ನಡೆಯಲಿದೆ.
ಭಾರತ-ಜಪಾನ್ ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ವೀಕ್ಷಿಸಬಹುದು?
ಈ ಏಕೈಕ ಟಿ20ಐ ಪಂದ್ಯದ ಪ್ರಸಾರದ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ಹೊಂದಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ 1 ಚಾನೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ 1 ಹಿಂದಿಯಲ್ಲೂ ನೇರ ಪ್ರಸಾರ ಇರಲಿದೆ.
ಭಾರತ-ಜಪಾನ್ ಪಂದ್ಯ ಲೈವ್ ಸ್ಟ್ರೀಮಿಂಗ್ ಎಲ್ಲಿ?
ಪಂದ್ಯದ ಲೈವ್ ಸ್ಟ್ರೀಮಿಂಗ್ ಫ್ಯಾನ್‌ಕೋಡ್ ಆ್ಯಪ್‌ನಲ್ಲಿ ಲಭ್ಯವಿರಲಿದೆ.
ವೈಭವ್ ಸೂರ್ಯವಂಶಿಯ ಸಿಕ್ಸ್ ಹೊಡೆಯುವ ಕೌಶಲ ನನಗೆ ತುಂಬಾ ಇಷ್ಟ: ಸೂರ್ಯಕುಮಾರ್ ಯಾದವ್!
ತಂಡಗಳು
ಭಾರತ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೇ, ತಿಲಕ್ ವರ್ಮಾ (ಉಪ ನಾಯಕ), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಯಶ್ ಠಾಕೂರ್, ವಿಪ್ರಝ್ ನಿಗಮ್
ಜಪಾನ್: ಕೆಂಡೆಲ್ ಕಾಡೊವಾಕಿ ಫ್ಲೆಮಿಂಗ್ (ನಾಯಕ). ಚಾರ್ಲಿ ಹರ-ಹಿಂಝೆ. ಬೆಂಜಮಿನ್ ಇಲ್ಟೊ ಡೇವಿಸ್, ಅಲೆಸ್ಟರ್ ಕಾಡೊವಾಕಿ-ಫ್ಲೆಮಿಂಗ್, ಕೋಹೀ ಕುಬೋಟಾ, ಜೇಕ್ ಕುಸುಡು ನೈನ್, ವಟಾರು ಮಿಯಾಚಿ (ವಿಕೆಟ್ ಕೀಪರ್), ರಿಯೊ ಸಕುರಾನೊ ಥಾಮಸ್, ಅಲೆಕ್ಸ್ ಶಿರೈ (ವಿಕೆಟ್ ಕೀಪರ್), ಶೋಮಾ ಸುಗಾಯಾ ಸ್ಲಾಟರ್, ಡೆಕ್ಲನ್ ಸುಝುಕಿ ಮೆಕಾಂಬ್, ಟಿಸುಯುಶಿ ಟಕಡ, ಇಬ್ರಾಹಿಂ ಟಕಹಶಿ, ಮಕೋಟಾ ತನಿಯಮಾ, ಲಾಚ್ಲಾನ್ ಯಮಮೋಟೋ ಲೇಕ್