ಭಾರತ vs ಜಪಾನ್ ಐತಿಹಾಸಿಕ ಟಿ20 ಪಂದ್ಯಕ್ಕೆ ಚಂಡಮಾರುತ ಭೀತಿ; ಸೋಮವಾರದ ಅಭ್ಯಾಸ ಮೊಟಕು
India vs Japan T20I: ಕಳೆದ ಎರಡು ದಿನಗಳಿಂದ ಪೂರ್ವ ಜಪಾನ್‌ನ ಕೆಲವು ಭಾಗಗಳಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿರುವ 'ಡುಜುವಾನ್' (Dujuan) ಚಂಡಮಾರುತವು ಸೋಮವಾರ ಏಷ್ಯನ್ ಕ್ರೀಡಾಕೂಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕೆಲವು ಹೊರಾಂಗಣ ಸ್ಪರ್ಧೆಗಳನ್ನು ಮುಂದೂಡುವಂತೆ ಮಾಡಿದೆ.
India vs Japan T20I -
ಕಕಾಮಿಗಹಾರ, ಸೆ.21: ಜಪಾನ್ ವಿರುದ್ಧದ ತನ್ನ ಚೊಚ್ಚಲ ಟಿ20 ಅಂತರರಾಷ್ಟ್ರೀಯ (T20I) ಪಂದ್ಯಕ್ಕಾಗಿ ಭಾರತದ ಸಿದ್ಧತೆಗಳಿಗೆ ಸೋಮವಾರ ಹಿನ್ನಡೆಯುಂಟಾಯಿತು. ಮಳೆಯ ಕಾರಣದಿಂದಾಗಿ ಸಾನೊದಲ್ಲಿ ನಡೆಯಬೇಕಿದ್ದ ಪಂದ್ಯಪೂರ್ವ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಲಾಯಿತು.
ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಎರಡೂ ದೇಶಗಳು ಜಪಾನ್‌ನ ಸಾನೋ ಕ್ರೀಡಾಂಗಣದಲ್ಲಿ ಮಂಗಳವಾರ ಪಂದ್ಯ ಆಡಲಿದೆ. ಪಂದ್ಯಕ್ಕೆ ಕ್ಕೆ 'ಸುಜುಕಿ ಕಪ್' ಎಂದು ಹೆಸರಿಸಲಾಗಿದೆ. ಆದರೆ ಪಂದ್ಯಕ್ಕೆ ಭಾರೀ ಮಳೆಯ ಭೀತಿ ಎದುರಾಗಿದೆ
ಕಳೆದ ಎರಡು ದಿನಗಳಿಂದ ಪೂರ್ವ ಜಪಾನ್‌ನ ಕೆಲವು ಭಾಗಗಳಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿರುವ 'ಡುಜುವಾನ್' (Dujuan) ಚಂಡಮಾರುತವು ಸೋಮವಾರ ಏಷ್ಯನ್ ಕ್ರೀಡಾಕೂಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕೆಲವು ಸ್ಪರ್ಧೆಗಳನ್ನು ಮುಂದೂಡುವಂತೆ ಮಾಡಿದೆ.
'ಡುಜುವಾನ್' ಚಂಡಮಾರುತ ಟೋಕಿಯೋ ಮಹಾನಗರ ಪ್ರದೇಶದ ಸಮೀಪವೇ ಹಾದುಹೋಗುವ ಮುನ್ಸೂಚನೆ ಇರುವುದರಿಂದ, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಂಗಳವಾರ ಬೆಳಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಕಾಂಟೊ ಪ್ರದೇಶದಲ್ಲಿ 300 ಮಿ.ಮೀ.ವರೆಗೂ ಮಳೆಯಾಗುವ ಮುನ್ಸೂಚನೆ ಇದೆ. ಪಂದ್ಯ ವೇಳೆ ಮಳೆಯಾಗುವ ಶೇಕಡಾ 25 ರಿಂದ 35 ರಷ್ಟು ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಏಷ್ಯನ್ ಗೇಮ್ಸ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ
ಪಂದ್ಯವು ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 9:30ಕ್ಕೆ) ಆರಂಭವಾಗಲಿದೆ. ಇದೇ ಮೈದಾನದಲ್ಲಿ ನಡೆಯಬೇಕಿದ್ದ ಜಪಾನ್ ಮತ್ತು ಹಾಂಗ್ ಕಾಂಗ್ ನಡುವಿನ ಟಿ20ಐ (T20I) ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಗಿತ್ತು. ಯಾವುದೇ ಮೀಸಲು ದಿನವಿಲ್ಲದ ಕಾರಣ ಪಂದ್ಯ ರದ್ದಾದರೆ ತಕ್ಷಣವೇ, ಎರಡೂ ತಂಡಗಳು ಏಷ್ಯನ್ ಕ್ರೀಡಾಕೂಟಕ್ಕಾಗಿ ನಗೋಯಾಗೆ ಪ್ರಯಾಣಿಸಲಿವೆ.
ಉಭಯ ತಂಡಗಳು
ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್.
ಜಪಾನ್ ತಂಡ: ಕೆಂಡಲ್ ಕಡೋವಾಕಿ-ಫ್ಲೆಮಿಂಗ್ (ಕ್ಯಾಪ್ಟನ್), ಚಾರ್ಲಿ ಹರಾ-ಹಿಂಜೆ, ಬೆಂಜಮಿನ್ ಗೋ-ಇಟೊ ಡೇವಿಸ್, ಕೊಹೆ ಕುಬೋಟಾ, ವಟಾರು ಮಿಯಾಯುಚಿ, ರಿಯೊ ಸಕುರಾನೊ-ಥಾಮಸ್, ಡೆಕ್ಲಾನ್ ಸುಜುಕಿ-ಮ್ಯಾಕ್‌ಕಾಂಬ್, ಶೋಮಾ ಸುಗಯಾ-ಸ್ಲೇಟರ್, ಅಲೆಕ್ಸಾಂಡರ್ ಶಿರೈ-ಪ್ಯಾಟ್ಮೋರ್, ಲಾಚ್ಲಾನ್ ಯಮಮೊಟೊ-ಲೇಕ್, ಮಕೋಟೊ ತನಿಯಾಮ, ಇಬ್ರಾಹಿಂ ತಕಹಶಿ, ತ್ಸುಯೋಶಿ ತಕಡಾ, ಜೇಕ್ ಕುಸುದಾ-ನೈರ್ನ್, ಮತ್ತು ಅಲೆಸ್ಟೈರ್ ಕಡೋವಾಕಿ-ಫ್ಲೆಮಿಂಗ್.