ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA 4th T20I: ಏಕನಾ ಕ್ರೀಡಾಂಗಣದಲ್ಲಿ ದಟ್ಟ ಮಂಜು, ನಾಲ್ಕನೇ ಪಂದ್ಯ ರದ್ದು!

IND vs SA 4th T20I: ಲಖನೌದ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ನಾಲ್ಕನೇ ಟಿ20ಐ ಪಂದ್ಯ ದಟ್ಟ ಮಂಜು ಇದ್ದ ಕಾರಣ ಟಾಸ್‌ ಕಾಣದೇ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಆಟಗಾರರು ಸೇರಿದಂತೆ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಡಿಸೆಂಬರ್‌ 19 ರಂದು ಕೊನೆಯ ಪಂದ್ಯ ಅಹಮಾದಾಬಾದ್‌ನಲ್ಲಿ ನಡೆಯಲಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 4ನೇ ಟಿ20ಐ ಪಂದ್ಯ ರದ್ದಾಗಿದೆ.

ಲಖನೌ: ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ (IND vs SA) ನಡುವಣ ನಾಲ್ಕನೇ ಟಿ20ಐ ಪಂದ್ಯ ದಟ್ಟ ಮಂಜು ಇದ್ದ ಕಾರಣ ಟಾಸ್‌ ಕಾಣದೆ ರದ್ದಾಗಿದೆ. ದಟ್ಟ ಮಂಜಿನ ಕಾರಣ ಈ ಪಂದ್ಯದಲ್ಲಿ ಟಾಸ್‌ ಕೂಡ ಹಾಕಲು ಸಾಧ್ಯವಾಗಿಲ್ಲ. ಅಂದ ಹಾಗೆ ಪಂದ್ಯದ ಟಾಸ್‌ ಸಂಜೆ 6:30ಕ್ಕೆ ನಡೆಸಬೇಕಾಗಿತ್ತು. ಆದರೆ, ಅತಿ ಹೆಚ್ಚು ಮಂಜು ಇದ್ದ ಕಾರಣ ಟಾಸ್‌ ಸಮಯವನ್ನು ಮುಂದೂಡುತ್ತಾ ಬರಲಾಯಿತು. ಅಂತಿಮವಾಗಿ ಇಬ್ಬನಿ ಕಡಿಮೆಯಾಗದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು. ಇದರಿಂದಾಗಿ ಎರಡೂ ತಂಡಗಳ ಆಟಗಾರರು ಹಾಗೂ ಅಭಿಮಾನಿಗಳಿಗೆ ಭಾರಿ ನಿರಾಶೆಯಾಯಿತು.

ಐದು ಪಂದ್ಯಗಳ ಈ ಸರಣಿಯ ಮೂರು ಪಂದ್ಯಗಳ ಮುಗಿಯುವ ಹೊತ್ತಿಗೆ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ 2-1 ಅಂತರದಲ್ಲಿ ಪ್ರಾಬಲ್ಯ ಸಾಧಿಸಿದೆ. ಇನ್ನುಳಿದ ಐದನೇ ಹಾಗೂ ಸರಣಿಯ ಕೊನೆಯ ಪಂದ್ಯ ಡಿಸೆಂಬರ್‌ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ಟೀಮ್‌ ಇಂಡಿಯಾ, ಸರಣಿಯನ್ನು 3-1 ಅಂತರದಲ್ಲಿ ತನ್ನದಾಗಿಸಿಕೊಳ್ಳಲಿದೆ. ಒಂದು ವೇಳೆ ಸೋತರೆ ಎದುರಾಳಿ ಹರಿಣ ಪಡೆ ಟಿ20ಐ ಸರಣಿಯನ್ನು 2-2 ಅಂತರದಲ್ಲಿ ಸಮಬಲ ಮಾಡಿಕೊಳ್ಳಲಿದೆ.

IND vs SA: ವಿರಾಟ್‌ ಕೊಹ್ಲಿಯ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿರುವ ಅಭಿಷೇಕ್‌ ಶರ್ಮಾ!

ಮೊದಲನೇ ಟಿ20ಐ ಪಂದ್ಯದಲಿ ಭಾರತ ತಂಡ 101 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಆದರೆ, ನಂತರ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತ 51 ರನ್‌ಗಳಿಂದ ಸೋಲು ಅನುಭವಿಸಿತ್ತು. ನಂತರ ಮೂರನೇ ಟಿ20ಐ ಪಂದ್ಯದಲ್ಲಿಯೂ ಪ್ರಾಬಲ್ಯ ನಡೆಸಿದ್ದ ಟೀಮ್‌ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.



ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್/ಸಂಜು ಸ್ಯಾಮ್ಸನ್‌, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ, ಹರ್ಷಿತ್ ರಾಣಾ/ ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್‌ ಬುಮ್ರಾ, ವರುಣ್ ಚಕ್ರವರ್ತಿ

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಏಡೆನ್ ಮಾರ್ಕ್ರಮ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೀರಾ, ಜಾರ್ಜ್ ಲಿಂಡೆ, ಮಾರ್ಕೊ ಯೆನ್ಸನ್, ಕಾರ್ಬಿನ್ ಬಾಷ್, ಎನ್ರಿಕ್‌ ನೊರ್ಕಿಯಾ, ಒಟ್ನೀಲ್ ಬಾರ್ಟ್‌ಮ್ಯಾನ್