ಲಖನೌ: ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ (IND vs WI) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮೊದಲು ಬೌಲಿಂಗ್ ಆರಿಸಿಕೊಂಡಿದ್ದಾರೆ. ಹಾಗಾಗಿ ವಿಂಡೀಸ್ ಮೊದಲು ಬ್ಯಾಟ್ ಮಾಡುವಂತಾಗಿದೆ. ಈ ಪಂದ್ಯವನ್ನು ಗೆದ್ದು ಐದು ಹಣಾಹಣಿಗಳ ಟಿ20ಐ ಸರಣಿಯಲ್ಲಿ ಮೇಲುಗೈ ಸಾಧಿಸಲು ಉಭಯ ತಂಡಗಳು ಎದುರು ನೋಡುತ್ತಿವೆ.
ಏಷ್ಯಾ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಆಡಿದ್ದ ಹಲವು ಆಟಗಾರರನ್ನು ಈ ಸರಣಿಗೆ ಕೈ ಬಿಡಲಾಗಿದೆ. ಅಂದ ಹಾಗೆ ಟಾಸ್ ವೇಳೆ ಭಾರತ ತಂಡದ ನಾಯಕ ಭಾರತ ತಂಡದ ಪ್ಲೇಯಿಂಗ್ XI ಬಗ್ಗೆ ಮಾಹಿತಿ ನೀಡಿದರು. ವೈಭವ್ ಸೂರ್ಯವಂಶಿ, ನಿತೀಶ್ ಕುಮಾರ್ ರೆಡ್ಡಿ, ರವಿ ಬಿಷ್ಣೋಯ್ ಹಾಗೂ ಪ್ರಿನ್ಸ್ ಯಹಾದವ್ ಅವರನ್ನು ಕೈ ಬಿಡಲಾಗಿದೆ ಎಂದು ಅಯ್ಯರ್ ತಿಳಿಸಿದರು. ಕಳೆದ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ನಮನ್ ಧೀರ್‌ಗೆ ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಲಾಯಿತು.
ʻಯುವ ಆಟಗಾರರನ್ನು ಹಾಳು ಮಾಡುತ್ತಿದ್ದೀರಿʼ: ಗಂಭೀರ್, ಗಿಲ್ ವಿರುದ್ಧ ಮೊಹಮ್ಮದ್ ಕೈಫ್ ಆಕ್ರೋಶ!
ಒಡಿಐ ಸರಣಿಯನ್ನು ಕಳೆದುಕೊಂಡು ಇದೀಗ ಡಿ20ಐ ಸರಣಿಗೆ ಬಂದಿರುವ ಶೇಯ್ ಹೋಪ್, ತನ್ನ ಪ್ಲೇಯಿಂಗ್ XIನಲ್ಲಿ ಆರು ಮಂದಿ ಬೌಲಿಂಗ್ ಆಯ್ಕೆಯನ್ನು ಆಡಿಸಲಾಗುತ್ತಿದೆ, ಇದರಲ್ಲಿ ಆಲ್‌ರೌಂಡರ್‌ಗಳು ಸೇರಿದ್ದಾರೆಂದು ತಿಳಿಸಿದ್ದಾರೆ. ಅಂದ ಹಾಗೆ ಏಕದಿನ ಸರಣಿಯನ್ನು ಕಳೆದುಕೊಂಡಿರುವ ವಿಂಡೀಸ್ ಕನಿಷ್ಠ ಟಿ20ಐ ಸರಣಿಯನ್ನು ಗೆಲ್ಲಬೇಕೆಂದು ಉದ್ದೇಶದಿಂದ ಕಣಕ್ಕೆ ಇಳಿಯಲಿದೆ.
ವೆಸ್ಟ್ ಇಂಡೀಸ್ ಆಡುವ 11ರ ಬಳಗ
ವೆಸ್ಟ್ ಇಂಡೀಸ್: ಶೇಯ್ ಹೋಪ್ (ವಿಕೆಟ್‌ಕೀಪರ್/ನಾಯಕ), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮಾಯರ್, ರೊವ್ಮನ್ ಪೊವೆೆಲ್, ಶೆರ್ಫೇನ್ ಋದರ್‌ಫೋರ್ಡ್, ರೊಮ್ಯಾರಿಯೊ ಶೆಫರ್ಡ್, ಮ್ಯಾಥ್ಯೂ ಫೋರ್ಡ್, ರಾಸ್ಟನ್ ಚೇಸ್, ಅಕೀಲ್ ಹೊಸೇನ್, ಶಮರ್ ಸ್ಪ್ರಿಂಗರ್, ಶಮರ್ ಜೋಸೆಫ್
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್,ಮಯಾಂಕ್ ಯಾದವ್
ತಂಡಗಳು
ವೆಸ್ಟ್ ಇಂಡೀಸ್: ಶೇಯ್ ಹೋಪ್ (ವಿಕೆಟ್‌ಕೀಪರ್/ನಾಯಕ), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮಾಯರ್, ರೊವ್ಮನ್ ಪೊವೆಲ್, ಶೆರ್ಫೇನ್ ಋದರ್‌ಫೋರ್ಡ್, ರೊಮ್ಯಾರಿಯೊ ಶೆಫರ್ಡ್, ಮ್ಯಾಥ್ಯೂ ಫೋರ್ಡ್, ರಾಸ್ಟನ್ ಚೇಸ್, ಅಕೀಲ್ ಹೊಸೇನ್, ಶಮರ್ ಸ್ಪ್ರಿಂಗರ್, ಶಮರ್ ಜೋಸೆಫ್, ಆಮಿರ್ ಜೋಸೆಫ್, ಗುಡಕೇಶ್ ಮೋಟಿ, ಕೀಮೋ ಪಾಲ್, ಕ್ವಿಂಟನ್ ಸ್ಯಾಮ್ಸನ್
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್,ಮಯಾಂಕ್ ಯಾದವ್, ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ