ʻಯುವ ಆಟಗಾರರನ್ನು ಹಾಳು ಮಾಡುತ್ತಿದ್ದೀರಿʼ: ಗಂಭೀರ್, ಗಿಲ್ ವಿರುದ್ಧ ಮೊಹಮ್ಮದ್ ಕೈಫ್ ಆಕ್ರೋಶ!
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಭಾರತ ತಂಡದ ಆಯ್ಕೆಯ ವಿಚಾರದಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭಮನ್ ಗಿಲ್ ಅವರನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟೀಕಿಸಿದ್ದಾರೆ. ಆಕಿಬ್ ನಬಿ ಮತ್ತು ಅನ್ಷುಲ್ ಕಾಂಬೋಜ್ ಅವರನ್ನು ನಡೆಸಿಕೊಂಡ ಬಗ್ಗೆ ಕೈಫ್ ವಿಶೇಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಯುವ ಆಟಗಾರರನ್ನು ಗಂಭೀರ್, ಗಿಲ್ ಹಾಳುತ್ತಿದ್ದಾರೆಂದ ಕೈಫ್. -
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ (IND vs WI) ಭಾರತ ತಂಡದ ಆಯ್ಕೆಯ ವಿಷಯವಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಅವರು ಟೀಮ್ ಇಂಡಿಯಾ ಹೆಡ್ ಕೋಚ್ ಹಾಗೂ ನಾಯಕ ಶುಭಮನ್ ಗಿಲ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕಿಬ್ ನಬಿ ಮತ್ತು ಅನ್ಶುಲ್ ಕಾಂಬೋಜ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಕೈಫ್ ವಿಶೇಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಭಾರತ ತಂಡ, ಈ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
ವಿಂಡೀಸ್ ವಿರುದ್ಧ ಎರಡನೇ ಪಂದ್ಯದಲ್ಲಿ ಆಕಿಬ್ ನಬಿ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಅವರು ಈ ಪಂದ್ಯದಲ್ಲಿ 8.5 ಓವರ್‌ಗಳಿಗೆ 84 ರನ್‌ಗಳನ್ನು ನೀಡಿದ್ದರು. ನಂತರ ಮೂರನೇ ಪಂದ್ಯಕ್ಕೆ ಅವರನ್ನು ಕೈ ಬಿಡಲಾಗಿತ್ತು. ಈ ಪಂದ್ಯದಲ್ಲಿ ಅನ್ಶುಲ್ ಕಾಂಬೋಜ್ ಅವರು, ಆಕಿಬ್ ನಬಿ ಅವರ ಸ್ಥಾನವನ್ನು ತುಂಬಿದ್ದರು. ಕಾಂಬೋಜ್ 10 ಓವರ್‌ಗಳಿಗೆ 82 ರನ್‌ಗಳನ್ನು ನೀಡಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು.
IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ!
ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಕೈಫ್ ಕಿಡಿ
"ಭಾರತ ತಂಡಕ್ಕೆ ನೀವು ಹೊಸ ಹುಡುಗರನ್ನು ತರುತ್ತಿದ್ದೀರಿ, ಆದರೆ ಅವರನ್ನು ನೀವು ಬೆಂಬಲಿಸುತ್ತಿಲ್ಲ. ಒಬ್ಬರು ಭಾರತ ತಂಡದ ಪರ ಆಡಿದರೆ, ಅವರಿಗೆ ನೀವು ಹೆಚ್ಚಿನ ಅವಕಾಶಗಳನ್ನು ನೀಡಬೇಕಾಗುತ್ತದೆ. ನಬಿ ಅವರನ್ನು ಏಕೆ ಕೈ ಬಿಟ್ಟಿದ್ದೀರಿ? ಕಾಂಬೋಜ್ ಕೂಡ ಹೊಡೆಸಿಕೊಂಡಿದ್ದಾರೆ. ನೀವು ಯುವ ಆಟಗಾರರನ್ನು ಹಾಳು ಮಾಡುತ್ತಿದ್ದೀರಿ. ನಬಿ ಮುಂದೆ ಯಾವಾಗ ಭಾರತ ವೈಟ್‌ಬಾಲ್ ತಂಡದಲ್ಲಿ ಆಡಲಿದ್ದಾರೆಂದು ನಮಗೆ ತಿಳಿದಿಲ್ಲ. ಬಹುಶಃ ಅವರು ಆಡುವುದಿಲ್ಲ. ಇದು ತಪ್ಪು. ನಿಮ್ಮ ಬಳಿ ಬ್ಯಾಕ್‌ಅಪ್ ಇಲ್ಲ. ಇದೇ ರೀತಿಯ ಯೋಜನೆಗಳು ಮುಂದುವರಿದರೆ, ಇದು ತುಂಬಾ ನೋವು ಕೊಡುತ್ತದೆ," ಎಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.
"ಅವರಿಗೆ ಇನ್ನೂ ಅನುಭವ ಕಡಿಮೆ ಹಾಗೂ ಅವರಿನ್ನೂ ಕೆಲಸ ಮಾಡುತ್ತಿದ್ದಾರೆ. ನಾಯಕನಾಗಿ ಅವರು ಇನ್ನೂ ಕಲಿಯುತ್ತಿದ್ದಾರೆ ಹಾಗೂ ಆ ಪಾತ್ರಕ್ಕೆ ಇನ್ನೂ ಹೊಂದಿಕೊಳ್ಳುತ್ತಿದ್ದಾರೆ. ಇದರಲ್ಲಿ ತುಂಬಾ ಬೇಸರ ಮೂಡಿಸುವ ಸಂಗತಿ ಏನೆಂದರೆ, ಅವರು ಇನ್ನೂ ಯುವ ನಾಯಕ ಹಾಗೂ ಯುವ ಆಟಗಾರರನ್ನು ಒಳಗೊಂಡ ಬೌಲಿಂಗ್ ವಿಭಾಗ. ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ ಜಾಸ್ತಿ ಸಮಯವಿಲ್ಲ ಹಾಗೂ ಅವರು ಮೈದಾನದಲ್ಲಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಬಿ ಅವರನ್ನು ನೀವು ಒಂದು ಪಂದ್ಯದಲ್ಲಿ ಆಡಿಸಿದ ಬಳಿಕ ಮತ್ತೊಂದು ಪಂದ್ಯದಲ್ಲಿ ಕೂರಿಸಿದ್ದೀರಿ. ನೀವು ರೆಡ್ಡಿಗೆ ಒಂದು ಪಂದ್ಯದಲ್ಲಿ ಹೊಸ ಚೆಂಡನ್ನು ನೀಡಿದ್ದೀರಿ ಹಾಗೂ ಮುಂದಿನ ಪಂದ್ಯದಲ್ಲಿ ಅದನ್ನು ಬದಲಿಸಿದ್ದೀರಿ. ನಂತರ ಆ ಸ್ಥಾನದಲ್ಲಿ ಕಾಂಬೋಜ್ ಅವರನ್ನು ಆಡಿಸಿದ್ದೀರಿ. ನಿಧಾನಗತಿ ಓವರ್‌ನಿಂದ ಪೆನಾಲ್ಟ್ ಹಾಕಿಸಿಕೊಂಡು ಫೀಲ್ಡರ್‌ಗಳನ್ನು ಒಳಗಡೆ ಹಾಕಿಸಿಕೊಂಡಿದ್ದಕ್ಕೆ ಭಾರತ ತಂಡ ಸೋಲಬೇಕಾಯಿತು. ಈ ವೇಳೆ ಸಾಕಷ್ಟು ರನ್‌ಗಳನ್ನು ಅರಿವಿಲ್ಲದೆ ಬಿಟ್ಟು ಕೊಡಬೇಕಾಯಿತು," ಎಂದು ಕೈಫ್ ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕತ್ವಕ್ಕೆ ಹರ್ಮನ್‌ಪ್ರೀತ್ ಕೌರ್ ದಿಢೀರ್ ರಾಜೀನಾಮೆ; ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
“ಈ ಸರಣಿಯ ಪ್ರಮುಖ ಅಂಶಗಳು ಕೊಹ್ಲಿ, ರೋಹಿತ್, ಗಿಲ್ ಮತ್ತು ಕೆ.ಎಲ್. ರಾಹುಲ್ ಶತಕ ಬಾರಿಸಿದ್ದು ಅಲ್ಲ. ಅವರು ಈಗಾಗಲೇ ಇದನ್ನು ಮಾಡುತ್ತಲೇ ಬಂದಿದ್ದಾರೆ. ಸರಣಿಯ ಮೂಲಕ ನಾವು ಹೊಸದೇನನ್ನೂ ಕಲಿಯಲು ಆಗುತ್ತಿಲ್ಲ. ಸರಣಿಯ ವೇಳೆ ಆಟಗಾರರು ತಮ್ಮ ದುರ್ಬಲತೆಗಳನ್ನು ಸುಧಾರಿಸಿಕೊಳ್ಳಬೇಕು ಮತ್ತು ಹೊಸ ಅಂಶಗಳನ್ನು ತಂಡಕ್ಕೆ ಸೇರಿಸಬೇಕು. ಆದರೆ ಅದು ಇಲ್ಲಿ ನಡೆದಿಲ್ಲ. ಕುಲ್ದೀಪ್ ಯಾದವ್ ವಿಕೆಟ್‌ಗಳನ್ನು ಪಡೆದರೂ, ಅವರು ಅದಕ್ಕೂ ಮುನ್ನ ಸಾಕಷ್ಟು ಪಂದ್ಯಗಳನ್ನು ಆಡಿರಲಿಲ್ಲ. ಈ ಸರಣಿಯಿಂದ ಏನೂ ಹೊಸದು ಸೇರಲಿಲ್ಲ. ಬದಲಾಗಿ, ಇದು ತಂಡಕ್ಕೆ ಹಾನಿಯಾಗಿದೆ. ಆತ್ಮವಿಶ್ವಾಸ ಕುಸಿದಿದೆ. ನಾಯಕನಾಗಿ ಶುಭಮನ್ ಗಿಲ್ ಕೂಡ ತನ್ನ ಸಾಮರ್ಥ್ಯದ ಬಗ್ಗೆ ಅನುಮಾನ ಪಡುತ್ತಿರಬಹುದು. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎಂಬಂತಾಗಿದೆ. ಯಾವುದೇ ಸಕಾರಾತ್ಮಕ ಅಂಶ ಸೇರ್ಪಡೆಯಾಗಿಲ್ಲ,” ಎಂದು ಮೊಹಮ್ಮದ್ ಕೈಫ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.