ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಗಳಿಗೆ (IND vs WI) ಭಾರತ ತಂಡವನ್ನು (India's Squad) ಪ್ರಕಟಿಸಲಾಗಿದೆ. ಈ ಪ್ರವಾಸವು ಸೆಪ್ಟೆಂಬರ್ 27, 2026ರಿಂದ ಆರಂಭವಾಗಲಿದ್ದು, ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಬಳಿಕ ಅಕ್ಟೋಬರ್ 6ರಿಂದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ ನಡೆಯಲಿದೆ. ಏಕದಿನ ತಂಡದಲ್ಲಿ ಅನುಭವ ಮತ್ತು ಯುವ ಆಟಗಾರರ ಸಮತೋಲನಕ್ಕೆ ಆಯ್ಕೆದಾರರು ಒತ್ತು ನೀಡಿದ್ದರೆ, ಟಿ20 ತಂಡದಲ್ಲಿ ಆಕ್ರಮಣಕಾರಿ ಹಾಗೂ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಏಕದಿನ ಸರಣಿಯ ಅವಧಿಯಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಹಾಗಾಗಿ, ಕೆಎಲ್ ರಾಹುಲ್ ಉಪನಾಯಕನ ಜತೆಗೆ ಪ್ರಮುಖ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. ಈ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಅನುಭವಿ ಆಟಗಾರರು ಸ್ಥಾನ ಪಡೆದಿದ್ದು, ಅಗ್ರ ಕ್ರಮಾಂಕಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ.
ಇದರ ಜತೆಗೆ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಧ್ರುವ್ ಜುರೆಲ್ ಅವರಂತಹ ಯುವ ಆಟಗಾರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನುಭವ ಮತ್ತು ಯುವಶಕ್ತಿಯ ಉತ್ತಮ ಸಮತೋಲನವಿದೆ.
IND vs AFG: ಸಂಜು ಸ್ಯಾಮ್ಸನ್ ಬಗ್ಗೆ ಆಶಾದಾಯಕ ಹೇಳಿಕೆ ನೀಡಿದ ಸುನೀಲ್ ಗವಾಸ್ಕರ್!
ಏಕದಿನ ತಂಡದ ಆಲ್‌ರೌಂಡರ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅನುಭವಿ ಆಟಗಾರರು ಮತ್ತು ಹೊಸ ಮುಖಗಳ ಉತ್ತಮ ಸಂಯೋಜನೆ ಕಂಡುಬರುತ್ತಿದೆ. ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ನಮನ್ ಧೀರ್ ಅವರು ಆಲ್‌ರೌಂಡರ್ ಆಯ್ಕೆಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ಕುಲ್ದೀಪ್ ಯಾದವ್ ನಿರ್ವಹಿಸಲಿದ್ದು, ವೇಗದ ಬೌಲಿಂಗ್ ದಾಳಿಯನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸಲಿದ್ದಾರೆ. ಅವರೊಂದಿಗೆ ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್ ಮತ್ತು ಆಕಿಬ್ ನಬಿ ಅವರಂತಹ ವೇಗದ ಬೌಲರ್‌ಗಳಿಗೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಅವಕಾಶ ಸಿಕ್ಕಿದೆ.
ಟಿ20 ತಂಡವನ್ನೂ ಪ್ರಕಟಿಸಿದ ಬಿಸಿಸಿಐ
ಇನ್ನು ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ಮತ್ತು ತಿಲಕ್ ವರ್ಮಾ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಟಿ20 ತಂಡದಲ್ಲಿ ವೈಭವ್ ಸೂರ್ಯವಂಶಿ ಜೊತೆಗೆ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಕ್ರಮಣಕಾರಿ ಬ್ಯಾಟರ್‌ಗಳಿಗೆ ಸ್ಥಾನ ನೀಡಲಾಗಿದೆ. ಮಧ್ಯಮ ಕ್ರಮಾಂಕ ಮತ್ತು ಫಿನಿಷರ್ ಪಾತ್ರದಲ್ಲಿ ಶಿವಂ ದುಬೆ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರಂತಹ ಸ್ಫೋಟಕ ಆಲ್‌ರೌಂಡರ್‌ಗಳು ತಂಡಕ್ಕೆ ಬಲ ತುಂಬಲಿದ್ದಾರೆ.
ಟಿ20 ಮಾದರಿಯಲ್ಲಿ ಭಾರತದ ಬೌಲಿಂಗ್ ದಾಳಿಯಲ್ಲೂ ಸಾಕಷ್ಟು ವೈವಿಧ್ಯತೆ ಇದೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯ್ ಅವರು ಎದುರಾಳಿ ಬ್ಯಾಟರ್‌ಗಳನ್ನು ತಮ್ಮ ಸ್ಪಿನ್ ಜಾಲದಲ್ಲಿ ಸಿಲುಕಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ, ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ಅರ್ಷದೀಪ್ ಸಿಂಗ್ ಅವರ ಕೈಯಲ್ಲಿರಲಿದೆ. ಅವರಿಗೆ ವೇಗದ ಬೌಲರ್‌ಗಳಾದ ಮಯಾಂಕ್ ಯಾದವ್ ಮತ್ತು ಪ್ರಿನ್ಸ್ ಯಾದವ್ ಸಾಥ್ ನೀಡಲಿದ್ದಾರೆ.
IND vs AFG: ವೈಭವ್ ಇನ್, ಅಭಿಷೇಕ್ ಔಟ್; ಮೂರನೇ ಟಿ20ಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!
ಭಾರತ ಏಕದಿನ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ (ಉಪನಾಯಕ/ವಿಕೆಟ್‌ಕೀಪರ್), ಧ್ರುವ್ ಜುರೆಲ್ (ವಿಕೆಟ್‌ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಆಕಿಬ್ ನಬಿ, ಯಶಸ್ವಿ ಜೈಸ್ವಾಲ್, ನಮನ್ ಧೀರ್.
ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್
2026ರ ಏಷ್ಯಾ ಕ್ರೀಡಾಕೂಟದಿಂದಲೂ ವರುಣ್ ಚಕ್ರವರ್ತಿ ಔಟ್? ವಿಪ್ರಜ್ ನಿಗಮ್‌ಗೆ ಸ್ಥಾನ!
ಭಾರತ–ವೆಸ್ಟ್ ಇಂಡೀಸ್ ವೈಟ್‌ಬಾಲ್ ಸರಣಿಗಳ ವೇಳಾಪಟ್ಟಿ
ಏಕದಿನ ಸರಣಿ
1ನೇ ಏಕದಿನ ಪಂದ್ಯ
ಭಾನುವಾರ, 27 ಸೆಪ್ಟೆಂಬರ್ 2026
ಮಧ್ಯಾಹ್ನ 2:00 ಗಂಟೆ
ತಿರುವನಂತಪುರಂ
2ನೇ ಏಕದಿನ ಪಂದ್ಯ
ಬುಧವಾರ, 30 ಸೆಪ್ಟೆಂಬರ್ 2026
ಮಧ್ಯಾಹ್ನ 2:00 ಗಂಟೆ
ಗುವಾಹಟಿ
3ನೇ ಏಕದಿನ ಪಂದ್ಯ
ಶನಿವಾರ, 3 ಅಕ್ಟೋಬರ್ 2026
ಮಧ್ಯಾಹ್ನ 2:00 ಗಂಟೆ
ನ್ಯೂ ಚಂಡೀಗಢ
ಟಿ20 ಅಂತಾರಾಷ್ಟ್ರೀಯ ಸರಣಿ
1ನೇ ಟಿ20 ಪಂದ್ಯ
ಮಂಗಳವಾರ, 6 ಅಕ್ಟೋಬರ್ 2026
ಸಂಜೆ 7:00 ಗಂಟೆ
ಲಖನೌ
2ನೇ ಟಿ20 ಪಂದ್ಯ
ಶುಕ್ರವಾರ, 9 ಅಕ್ಟೋಬರ್ 2026
ಸಂಜೆ 7:00 ಗಂಟೆ
ರಾಂಚಿ
3ನೇ ಟಿ20 ಪಂದ್ಯ
ಭಾನುವಾರ, 11 ಅಕ್ಟೋಬರ್ 2026
ಸಂಜೆ 7:00 ಗಂಟೆ
ಇಂದೋರ್
4ನೇ ಟಿ20 ಪಂದ್ಯ
ಬುಧವಾರ, 14 ಅಕ್ಟೋಬರ್ 2026
ಸಂಜೆ 7:00 ಗಂಟೆ
ಹೈದರಾಬಾದ್
5ನೇ ಟಿ20 ಪಂದ್ಯ
ಶನಿವಾರ, 17 ಅಕ್ಟೋಬರ್ 2026
ಸಂಜೆ 7:00 ಗಂಟೆ
ಬೆಂಗಳೂರು