ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ವೈಭವ್‌ ಇನ್‌, ಅಭಿಷೇಕ್‌ ಔಟ್‌; ಮೂರನೇ ಟಿ20ಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

India vs Afghanistan 3rd T20I: ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ, ಸೆಪ್ಟಂಬರ್‌ 17 ರಂದು ಗುರುವಾರ ಅಫ್ಘಾನಿಸ್ತಾನ ವಿರುದ್ಧ ಮೂರನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈಗಾಗಲೇ ಟಿ20ಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ, ಮೂರನೇ ಹಣಾಹಣಿಯಲ್ಲಿ ಬೆಂಚ್‌ ಆಟಗಾರರಿಗೆ ಅವಕಾ ನೀಡುವ ಸಾಧ್ಯತೆ ಇದೆ.

ಮೂರನೇ ಟಿ20ಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ಮೂರನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI. -

Profile
Ramesh Kote Sep 16, 2026 8:54 PM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ (IND vs AFG) ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ, ಇದೀಗ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವ ಗುರಿಯೊಂದಿಗೆ ಸೆಪ್ಟಂಬರ್‌ 17 ರಂದು ಗುರುವಾರ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಭಾರತ ತಂಡವನ್ನು ನಾಯಕ ಶ್ರೇಯಸ್ ಅಯ್ಯರ್ ಉತ್ತಮವಾಗಿ ಮುನ್ನಡೆಸಿದ್ದಾರೆ. ಬೌಲರ್‌ಗಳೂ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂದ್ಯ ನಡೆಯುತ್ತಿರುವ ಪಿಚ್‌ಗಳು ಬ್ಯಾಟಿಂಗ್‌ಗೆ ಉತ್ತಮವಾಗಿದ್ದು, ಬೌಂಡರಿಗಳ ಗಾತ್ರ ಕಿರಿದಾಗಿವೆ. ಆದರೂ ಭಾರತದ ಬೌಲಿಂಗ್ ದಾಳಿಯ ಎದುರು ಅಫ್ಘಾನಿಸ್ತಾನ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 156/8 ಮತ್ತು 159/8 ರನ್‌ಗಳಿಗೆ ಸೀಮಿತವಾಯಿತು.

ಹೀಗಾಗಿ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ತೋರಬೇಕಿದೆ. ಇಬ್ರಾಹಿಂ ಝದ್ರಾನ್ ನೇತೃತ್ವದ ಅಫ್ಘಾನ್ ತಂಡದ ಬ್ಯಾಟರ್‌ಗಳು ಭಾರತದ ಬೌಲರ್‌ಗಳ ವಿರುದ್ಧ ಹೆಚ್ಚಿನ ಜವಾಬ್ದಾರಿಯೊಂದಿಗೆ ಆಡಬೇಕಾಗಿದೆ.

ಕಾಗದದ ಮೇಲೆ ಅಫ್ಘಾನಿಸ್ತಾನದ ಬೌಲಿಂಗ್ ದಾಳಿ ಬಲಿಷ್ಠವಾಗಿಯೇ ಕಾಣುತ್ತದೆ. ಆದರೆ ಅತ್ಯಂತ ಆಕ್ರಮಣಕಾರಿ ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಅವರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಇಬ್ರಾಹಿಂ ಝದ್ರಾನ್ ಮತ್ತು ಬಳಗದಿಂದ ಮೂರನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ಅಫ್ಘಾನಿಸ್ತಾನದ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

IND vs AFG: ಸಂಜು ಸ್ಯಾಮ್ಸನ್‌ ಬಗ್ಗೆ ಆಶಾದಾಯಕ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲೂ ಅಫ್ಘಾನಿಸ್ತಾನ ಕ್ಲೀನ್ ಸ್ವೀಪ್‌ ಆಘಾತ ಅನುಭವಿಸಿತ್ತು. ಇದೀಗ ಟಿ20ಐ ಸರಣಿಯಲ್ಲೂ ಟೀಮ್‌ ಇಂಡಿಯಾ ಮತ್ತೊಂದು ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಇದರೊಂದಿಗೆ ಆತಿಥೇಯ ಆಫ್ಘನ್‌ಗೆ ಭಾರಿ ಹಿನ್ನಡೆಯಾಗಲಿದೆ.

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ 2 ಬದಲಾವನೆ ನಿರೀಕ್ಷೆ

ಆರಂಭಿಕ ಎರಡು ಪಂದ್ಯಗಳಲ್ಲಿ ಬೆಂಚ್‌ ಕಾಯುತ್ತಿದ್ದ ಆಟಗಾರರಿಗೆ ಮೂರನೇ ಟಿ20ಐ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ವೈಭವ್‌ ಸೂರ್ಯವಂಶಿ ಅವರು ಅಭಿಷೇಕ್‌ ಶರ್ಮಾ ಅವರ ಸ್ಥಾನದಲ್ಲಿ ಆಡಬಹುದು. ಯಶ್‌ ಠಾಕೂರ್‌ ಅವರು ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಸ್ಥಾನದಲ್ಲಿ ಆಡಬಹುದು. ಈ ಎರಡು ಬದಲಾವಣೆಗಳನ್ನು ನಾವು ಮೂರನೇ ಪಂದ್ಯದಲ್ಲಿ ನಿರೀಕ್ಷಿಸಬಹುದು.

2026ರ ಏಷ್ಯಾ ಕ್ರೀಡಾಕೂಟದಿಂದಲೂ ವರುಣ್‌ ಚಕ್ರವರ್ತಿ ಔಟ್‌? ವಿಪ್ರಜ್‌ ನಿಗಮ್‌ಗೆ ಸ್ಥಾನ!

ಪಿಚ್‌ ರಿಪೋರ್ಟ್‌

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಮತ್ತೊಮ್ಮೆ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ. ಇಲ್ಲಿ ಬ್ಯಾಟಿಂಗ್‌ಗೆ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆಯಿದ್ದು, ಮೂರನೇ ಟಿ20ಐ ಪಂದ್ಯದಲ್ಲೂ ದೊಡ್ಡ ಮೊತ್ತದ ನಿರೀಕ್ಷೆ ಇದೆ. ಮೊದಲ ಎರಡು ಪಂದ್ಯಗಳಲ್ಲೂ ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟ್‌ ಮಾಡಿತ್ತು. ಆದರೆ ನಿರೀಕ್ಷಿತ ಮಟ್ಟದ ಮೊತ್ತ ಕಲೆಹಾಕಲು ತಂಡಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಗುರುವಾರದ ಪಂದ್ಯದಲ್ಲಿ ಟಾಸ್ ಗೆದ್ದರೆ ಈ ಬಾರಿ ಮೊದಲು ಬೌಲ್‌ ಮಾಡುವ ಮೂಲಕ ತಂತ್ರ ಬದಲಾಯಿಸಲು ಅಫ್ಘಾನಿಸ್ತಾನ ಬಯಸಬಹುದು.

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 11

ಭಾರತದ ಗೆಲುವು: 10

ಅಫ್ಘಾನಿಸ್ತಾನ ಗೆಲುವು: 00

ಫಲಿತಾಂಶವಿಲ್ಲ: 01

ʻವೈಫೈ ಸ್ವಿಚ್‌ ಆಫ್‌ ಮಾಡಿದ್ದೆʼ-ಹೊರಗಡೆ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬಾರದೆಂದ ಸಂಜು ಸ್ಯಾಮ್ಸನ್‌!

ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ),ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ,ಅಕ್ಷರ್ ಪಟೇಲ್, ಅರ್ಷದೀಪ್‌ ಸಿಂಗ್‌,ರವಿ ಬಿಷ್ಣೋಯಿ,ಯಶ್ ಠಾಕೂರ್

ಅಫ್ಘಾನಿಸ್ತಾನದ ಸಂಭಾವ್ಯ ಪ್ಲೇಯಿಂಗ್‌ XI

ಇಬ್ರಾಹಿಂ ಜದ್ರಾನ್ (ನಾಯಕ),ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸೆದಿಕುಲ್ಲಾ ಅಟಲ್,ಗುಲ್ಬದಿನ್ ನೈಬ್, ದರ್ವಿಶ್ ರಸೂಲಿ, ಅಜ್ಮತ್‌ವುಲ್ಲಾ ಒಮರ್ಜೈ, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ