ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 world Cup: ನೆದರ್ಲೆಂಡ್ಸ್‌ ವಿರುದ್ಧವೂ ವೈಫಲ್ಯ, ಹ್ಯಾಟ್ರಿಕ್‌ ಡಕ್‌ಔಟ್‌ ಆದ ಅಭಿಷೇಕ್‌ ಶರ್ಮಾ!

ನ್ಯೂಜಿಲೆಂಡ್‌ ವಿರುದ್ಧ ಬ್ಯಾಟಿಂಗ್‌ನಲ್ಲಿ ಸುಪ್ರಿಂ ಫಾರ್ಮ್‌ನಲ್ಲಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ, ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಡಕ್‌ಔಟ್‌ ಆಗಿದ್ದಾರೆ. ಬುಧವಾರ ನಮೀಬಿಯಾ ವಿರುದ್ಧದ ಪಂದ್ಯದಲ್ಲಿಯೂ ಅವರು ವಿಫಲರಾಗಿದ್ದಾರೆ. ಆ ಮೂಲಕ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ನಿರಾಶೆ ಮೂಡಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಹ್ಯಾಟ್ರಿಕ್‌ ಸೋಲು.

ಅಹಮದಾಬಾದ್‌: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ(Abhishek Sharma) ಅವರ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿನ ಬ್ಯಾಟಿಂಗ್‌ ವೈಫಲ್ಯ ಮುಂದುವರಿದಿದೆ. ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎ ಗ್ರೂಪ್‌ನ ಕೊನೆಯ ಪಂದ್ಯದಲ್ಲಿ (IND vs NED) ನೆದರ್ಲೆಂಡ್ಸ್‌ ವಿರುದ್ಧವೂ ಎಡಗೈ ಬ್ಯಾಟ್ಸ್‌ಮನ್‌ ಡಕ್‌ಔಟ್‌ ಆದರು. ಆ ಮೂಲಕ ಆಡಿದ ಮೂರೂ ಪಂದ್ಯಗಳಲ್ಲಿ ಡಕ್‌ಔಟ್‌ ಆಗಿದ್ದಾರೆ. ಇದರೊಂದಿಗೆ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಇನ್ನೂ ಖಾತೆ ತೆರೆಯದೆ, ಎಲ್ಲರಿಗೂ ಆಘಾತ ನೀಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿ ಅಭಿಷೇಕ್‌ ಶರ್ಮಾ, ಮೊಟ್ಟ ಮೊದಲ ಓವರ್‌ನಲ್ಲಿಯೇ ಸ್ಪಿನ್ನರ್‌ ಆರ್ಯನ್‌ ದತ್ತಾ ಅವರ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಆ ಮೂಲಕ ಈ ವರ್ಷ ಅವರು ಐದನೇ ಡಕ್‌ಔಟ್‌ ಆದಂತಾಯಿತು. ಆ ಮೂಲಕ ಟಿ20ಐ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹಚ್ಚು ಬಾರಿ ಡಕ್‌ಔಟ್‌ ಆದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳುವ ಮೂಲಕ ಸಂಜು ಸ್ಯಾಮ್ಸನ್‌ ಅವರ ಅನಗತ್ಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಈ ಟೂರ್ನಿಯಲ್ಲಿ ಅಭಿಷೇಕ್‌ ಆಡಿದ ಮೂರೂ ಪಂದ್ಯಗಳಿಂದ ಕೇವಲ 8 ಎಸೆತಗಳನ್ನು ಮಾತ್ರ ಎದುರಿಸಿದ್ದು,ಇನ್ನೂ ಖಾತೆ ತೆರೆದಿಲ್ಲ.

T20 World Cup: ನಮೀಬಿಯಾ ವಿರುದ್ಧ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಸಾಹಿಬ್‌ಝಾದ ಫರ್ಹಾನ್!

ಅಭಿಷೇಕ್‌ಗೆ ಉತ್ತಮ ರಣತಂತ್ರ ರೂಪಿಸಿದ್ದ ಆರ್ಯನ್‌

ನೆದರ್ಲೆಂಡ್ಸ್‌ ಸ್ಪಿನ್ನರ್‌ ಆರ್ಯನ್‌ ದತ್ತಾ ಅವರು ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಲು ಅದ್ಭುತ ರಣತಂತ್ರವನ್ನು ರೂಪಸಿದ್ದರು. ಅವರು 95.9ರ ಕಿ.ಮೀ ವೇಗದಲ್ಲಿ ಫ್ಲ್ಯಾಟ್‌ ಎಸೆತದ ಮೂಲಕ ಓವರ್‌ ಅನ್ನು ಆರಂಭಿಸಿದ್ದರು. ಆ ಮೂಲಕ ಎಡಗೈ ಬ್ಯಾಟ್ಸ್‌ಮನ್‌ ಅನ್ನು ಎಡಬದಿಯಲ್ಲಿಯೇ ಇರಿಸಿದ್ದರು ಹಾಗೂ ಕವರ್ಸ್‌ನಲ್ಲಿಯೇ ನಿಯಮಿತವಾಗಿ ಆಡುವಂತೆ ಮಾಡಿದ್ದರು. ಇದರ ಮುಂದಿನ ಎಸೆತವನ್ನು ಕ್ವಿಕ್‌ ಆಗಿ ಹಾಕಿದ್ದರು ಹಾಗೂ ಅಭಿಷೇಕ್‌ ಶರ್ಮಾ ಅದನ್ನು ಲಾಂಗ್‌ ಆನ್‌ ಮೇಲೆ ಆಡಲು ಪ್ರಯತ್ನಿಸಿದರು. ಈ ವೇಳೆ ಅವರು ಸ್ವಲ್ಪ ಬೌನ್ಸ್‌ ಅನ್ನು ನಿರೀಕ್ಷೆ ಮಾಡಿದ್ದರು. ಆದರೆ, ಅವರು ಚೆಂಡನ್ನು ನಿರ್ಧರಿಸುವಲ್ಲಿ ವಿಫಲರಾಗಿ ಕ್ಲೀನ್‌ ಬೌಲ್ಡ್‌ ಆದರು.



ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಪಯಣ

ಯುಎಸ್‌ಎ ವಿರುದ್ಧದ ಭಾರತ ತಂಡದ ಮೊದಲನೇ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ವೇಗದ ಬೌಲರ್‌ ಆಲಿ ಖಾನ್‌ ಅವರಿಗೆ ಔಟ್‌ ಆಗಿದ್ದರು. ಫೆಬ್ರವರಿ 7 ರಂದು ನಡೆದಿದ್ದ ಪಂದ್ಯದಲ್ಲಿ ಅವರು ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ನಂತರ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪಂದ್ಯದಲ್ಲಿ ಅಭಿ ಬದಲು ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸಿದ್ದರು.

ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅಭಿಷೇಕ್‌ ಮರಳಿದ್ದರು. ಈ ವೇಳೆ ಪಾಕ್‌ ನಾಯಕ ಸಲ್ಮಾನ್‌ ಆಘಾ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್‌ ಆಗಿದ್ದರು. ಇದಾದ ಬಳಿಕ ಇದೀಗ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿಯೂ ಅವರು ಫಾರ್ಮ್‌ ಕಂಡುಕೊಳ್ಳುವಲ್ಲಿ ವಿಫಲರಾದರು. ಪ್ರಸಕ್ತ ಕಾಲೆಂಡರ್‌ ವರ್ಷದಲ್ಲಿ ಅಭಿಷೇಕ್‌ ಐದು ಬಾರಿ ಡಕ್‌ಔಟ್‌ ಆಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ರಾಯ್ಪುರ ಮತ್ತು ವಿಶಾಖಪಟ್ಟಣಂನಲ್ಲಿ ಅಭಿಷೇಕ್‌ ಡಕ್‌ಔಟ್‌ ಆಗಿದ್ದರು.

SA vs UAE: ಯುಎಇ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ!

ಪ್ರಸಕ್ತ ವರ್ಷ ಅಭಿಷೇಕ್‌ ಶರ್ಮಾ ಆಡಿದ ಎಂಟು ಪಂದ್ಯಗಳಿಂದ 26ರ ಸರಾಸರಿಯಲ್ಲಿ 182 ರನ್‌ಗಳನ್ನು ಗಳಿಸಿದ್ದಾರೆ. ಕಿವೀಸ್‌ ಎದುರು ನಾಗ್ಪುರದ ಪಂದ್ಯದಲ್ಲಿ ಗಳಿಸಿದ್ದ 84 ರನ್‌ಗಳು ಅವರ ಈ ವರ್ಷದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಫೆಬ್ರವರಿ 22 ರಂದು ದಕ್ಷಿಣ ಆಫ್ರಿಕಾ ವಿರುದ್ದದ ಭಾರತ ತಂಡದ ಮೊದಲ ಸೂಪರ್‌-8ರ ಪಂದ್ಯದಲ್ಲಿ ಫಾರ್ಮ್‌ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ.