T20 World Cup: ನಮೀಬಿಯಾ ವಿರುದ್ಧ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಸಾಹಿಬ್‌ಝಾದ ಫರ್ಹಾನ್!
ಕೊಲೊಂಬೊದ ಸಿಂಹಳೀಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಸಾಹಿಬ್‌ಝಾದ ಫರ್ಹಾನ್ ಚೊಚ್ಚಲ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಸಹಿಬ್‌ಝಾದ ಫರ್ಹಾನ್. -
ಕೊಲಂಬೊ: ನಮೀಬಿಯಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಪಂದ್ಯದಲ್ಲಿ (PAK vs NAM) ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಾಹಿಬ್‌ಝಾದ ಫರ್ಹಾನ್ (Sahibzada Farhan) ಚೊಚ್ಚಲ ಶತಕವನ್ನು ಬಾರಿಸಿದ್ದಾರೆ. ಇವರ ಶತಕದ ಬಲದಿಂದ ಪಾಕ್, ಈ ಪಂದ್ಯವನ್ನು ಗೆದ್ದು ಸೂಪರ್-8ಕ್ಕೆ ಲಗ್ಗೆ ಇಟ್ಟಿದೆ. 58 ಎಸೆತಗಳಲ್ಲಿ 11 ಬೌಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಅಜೇಯ 100 ರನ್ ಬಾರಿಸಿದ ಫರ್ಹಾನ್, ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಶತಕ ಬಾರಿಸಿದ ಎರಡನೇ ಪಾಕಿಸ್ತಾನದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ 2014ರ ಆವೃತ್ತಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಅಹ್ಮದ್ ಶಹಾಜಾದ್ ಅವರು ಪಾಕಿಸ್ತಾನದ ಪರವಾಗಿ ಟೂರ್ನಿಯಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದ್ದರು.
ಆರಂಭಿಕರಾಗಿ ಕಣಕ್ಕಿಳಿದ ಸಾಹಿಬ್‌ಝಾದ ಫರ್ಹಾನ್ ನಿಧಾನಗತಿಯಲ್ಲಿ ತಮ್ಮ ಆಟವನ್ನು ಶುರು ಮಾಡಿದರು. 27 ಎಸೆತಗಳಲ್ಲಿ ಕೇವಲ 30 ರನ್ ಕಲೆಹಾಕಿದರು ಹಾಗೂ ಮೊದಲ ವಿಕೆಟ್‌ಗೆ ಸೈಯಮ್ ಆಯುಬ್ ಅವರೊಂದಿಗೆ 41 ರನ್‌ಗಳ ಜೊತೆಯಾಟವಾಡಿದ್ದರು. ಆಯೂಬ್ ವಿಕೆಟ್ ಪತನದ ಬಳಿಕ ನಾಯಕ ಸಲ್ಮಾನ್ ಆಘಾ ಅವರೊಂದಿಗೆ ಫರ್ಹಾನ್ 67 ರನ್ ಜೊತೆಯಾಟ ಆಡಿದರು. ಬಳಿಕ ಶದಾಬ್ ಖಾನ್ ಅವರೊಂದಿಗೆ 40 ಎಸೆತಗಳಲ್ಲಿ 81 ರನ್ ಜೊತೆಯಾಟವಾಡಿದ ಪರಿಣಾಮ ಪಾಕ್, ತನ್ನ ಪಾಲಿನ 20 ಓವಗಳ ಇನಿಂಗ್ಸ್ 3 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು ಹಾಗೂ ನಮೀಬಿಯಾ ತಂಡಕ್ಕೆ ಸವಾಲಿನ ಗುರಿ ನೀಡಿತು.
PAK vs NAM: ಯುಎಸ್‌ಎ ಕನಸು ಭಗ್ನ, ನಮೀಬಿಯಾ ವಿರುದ್ಧ ಗೆದ್ದ ಪಾಕಿಸ್ತಾನಕ್ಕೆ ಸೂಪರ್-8ರ ಟಿಕೆಟ್!
ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಫರ್ಹಾನ್
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಹಿಬ್‌ಝಾದ ಫರ್ಹಾನ್ ಹನ್ನೊಂದು ಸಿಕ್ಸರ್ ಬಾರಿಸುವ ಮೂಲಕ ಇಶಾನ್ ಕಿಶನ್ ಮತ್ತು ಶಿಮ್ರಾನ್ ಹೆಟ್ಮಾಯರ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಹೆಟ್ಮಾಯರ್ ಮತ್ತು ಇಶಾನ್ ಕಿಶನ್ ಇದುವರೆಗೂ ಆಡಿರುವ 3 ಪಂದ್ಯಗಳಲ್ಲಿ ತಲಾ 10 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.
A defining century from Sahibzada Farhan when it mattered the most 👏
— ICC (@ICC) February 18, 2026
⬅️ Swipe to watch the moment unfold 💯
Catch his full innings here 🎥 https://t.co/2O2ZGfSyrx pic.twitter.com/yseie8iWrA
ಪಾಕಿಸ್ತಾನ ತಂಡಕ್ಕೆ 102 ರನ್ ಜಯ
ಇನ್ನು ಪಾಕಿಸ್ತಾನ ತಂಡ ನೀಡಿದ್ದ 200 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನಮೀಬಿಯಾ ತಂಡ, ಉಸ್ಮಾನ್ ತಾರಿಖ್ ಹಾಗೂ ಶದಾಬ್ ಖಾನ್ ಅವರ ಸ್ಪಿನ್ ಮೋಡಿಗೆ ನಲುಗಿತು. ಆ ಮೂಲಕ 17.3 ಓವರ್‌ಗಳಿಗೆ 97 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಸೋಲಿನ ಮೂಲಕ ನಮೀಬಿಯಾ ಟೂರ್ನಿಯ ಅಭಿಯಾನವನ್ನು ಮುಗಿಸಿತು. ನಮೀಬಿಯಾ ಪರ ಲಾರೆನ್ ಸ್ಟೀನ್‌ಕಾಂಪ್ 23 ರನ್ ಹಾಗೂ ಅಲೆಕ್ಸಾಂಡರ್ ವೋಲ್ಕೆನ್ 20 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ 20 ರನ್ ದಾಟಲಿಲ್ಲ.