ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಮೂರನೇ ಒಡಿಐಗೆ ಭಾರತದ ಪ್ಲೇಯಿಂಗ್‌ XI ಹೇಗಿರಬಹುದು? ರವೀಂದ್ರ ಜಡೇಜಾ ಔಟ್‌!

India's Predicted Playing XI: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೂರನೇ ಹಾಗೂ ಒಡಿಐ ಸರಣಿಯ ನಿರ್ಣಾಯಕ ಪಂದ್ಯ ಶನಿವಾರ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ xi ಬಗ್ಗೆ ಇಲ್ಲಿ ವಿವರಿಸಲಾಗಿದೆ. ಅಂದ ಹಾಗೆ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು 1-1 ಅಂತರವನ್ನು ಕಾಯ್ದುಕೊಂಡಿವೆ. ಕೊನೆಯ ಪಂದ್ಯವನ್ನು ಗೆದ್ದ ತಂಡ ಒಡಿಐ ಸರಣಿಯನ್ನು ಮುಡಿಗೇರಿಸಿಕೊಳ್ಳಲಾಗಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ವಿಶಾಖಪಟ್ಟಣಂ: ಭಾರತ ಹಾಗೂ ದಕ್ಷಿಣ ಆಫ್ರಿಕಾ (IND vs SA) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ತೀವ್ರ ಕುತೂಹಲ ಹಂತ ತಲುಪಿದೆ. ಎರಡು ಪಂದ್ಯಗಳ ಬಳಿಕ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ. ಇದೀಗ ಶನಿವಾರ ಇಲ್ಲಿ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮೂರನೇ ಹಾಗೂ ಏಕದಿನ ಸರಣಿಯ ನಿರ್ಣಾಯಕ ಪಂದ್ಯ (India vs South Africa 3rd ODI) ನಡೆಯಲಿದೆ. ಎರಡನೇ ಪಂದ್ಯವನ್ನು ಸೋತಿದ್ದ ಭಾರತ ತಂಡ ಇದೀಗ ಮೂರನೇ ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಹಾಗಾಗಿ ವಿಶಾಖಪಟ್ಟಣಂ ಪಿಚ್‌ ಕಂಡೀಷನ್ಸ್‌ಗೆ ಅನುಗುಣವಾಗಿ ಟೀಮ್‌ ಇಂಡಿಯಾ (India's Playing XI) ತನ್ನ ಪ್ಲೇಯಿಂಗ್‌ XI ಅನ್ನು ಕಟ್ಟಬಹುದು.

ಡಿಸೆಂಬರ್‌ 3 ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ರಾಯ್ಪುರದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಕಾದಾಟ ನಡೆದಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟ್‌ ಮಾಡಿ 358 ರನ್‌ಗಳನ್ನು ಕಲೆ ಹಾಕಿತ್ತು. ವಿರಾಟ್‌ ಕೊಹ್ಲಿ ಹಾಗೂ ಋತುರಾಜ್‌ ಗಾಯಕ್ವಾಡ್‌ ಶತಕಗಳನ್ನು ಬಾರಿಸಿದ್ದರು. ಆದರೆ, ಎರಡನೇ ಇನಿಂಗ್ಸ್‌ಗೆ ಇಬ್ಬನಿ ಬಂದ ಕಾರಣ ಬೌಲರ್‌ಗಳು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಏಡೆನ್‌ ಮಾರ್ಕ್ರಮ್‌ ಶತಕ, ಡೆವಾಲ್ಡ್‌ ಬ್ರೆವಿಸ್‌ ಹಾಗೂ ಮ್ಯಾಥ್ಯೂ ಬ್ರಿಟ್ಜ್ಕಿ ಅವರ ಅರ್ಧಶತಕಗಳ ಬಲದಿಂದ ಹರಿಣ ಪಡೆ ದಾಖಲೆಯ ಮೊತ್ತವನ್ನು ಯಶಸ್ವಿಯಾಗಿ ಚೇಸ್‌ ಮಾಡಿತ್ತು. ಇದಕ್ಕೂ ಮುನ್ನ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ 17 ರನ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿಯೂ ವಿರಾಟ್‌ ಕೊಹ್ಲಿ ಶತಕ ಬಾರಿಸಿದ್ದರು.

IND vs SA: ಕೊಹ್ಲಿ, ಗಾಯಕ್ವಾಡ್‌ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಭಾರತ ಈ ಎರಡೂ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತ್ತು. ಆದರೆ, ಬೌಲಿಂಗ್‌ನಲ್ಲಿ ಅಷ್ಟೊಂದು ಯಶಸ್ಸು ಸಿಕ್ಕಿರಲಿಲ್ಲ. ಒಡಿಐ ಸರಣಿಗೂ ಮುನ್ನ ಟೀಮ್‌ ಇಂಡಿಯಾ ಟೆಸ್ಟ್‌ ಸರಣಿಯನ್ನು 0-2 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತ್ತು. ಹಾಗಾಗಿ ಮೂರನೇ ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು ಮುಡಿಗೇರಿಸಿಕೊಳ್ಳಬೇಕಾದ ಪರಿಸ್ಥಿತಿ ಟೀಮ್‌ ಇಂಡಿಯಾಗೆ ಎದುರಾಗಿದೆ. ಮತ್ತೊಂದು ಆಘಾತಕಾರಿ ಸಂಗತಿ ಏನೆಂದರೆ, ಭಾರತ ತಂಡ ಸತತ 20 ಪಂದ್ಯಗಳ ಟಾಸ್‌ ಸೋತಿರುವುದು. ಒಂದು ವೇಳೆ ಮೂರನೇ ಏಕದಿನ ಪಂದ್ಯದಲ್ಲಿಯೂ ಟಾಸ್‌ ಸೋತರೆ, ಕೆಎಲ್‌ ರಾಹುಲ್‌ ಪಡೆ ಮತ್ತೊಮ್ಮೆ ಎರಡನೇ ಇನಿಂಗ್ಸ್‌ನಲ್ಲಿ ತೇವದ ಚೆಂಡಿನಲ್ಲಿ ಬೌಲ್‌ ಮಾಡಬೇಕಾಗುತ್ತದೆ.

IND vs SA: ಕೆಎಲ್‌ ರಾಹುಲ್‌ ಶತಕ ಸಿಡಿಸದೆ ಇರಲು ಬಲವಾದ ಕಾರಣ ತಿಳಿಸಿದ ಡೇಲ್‌ ಸ್ಟೇನ್‌!

ರವೀಂದ್ರ ಜಡೇಜಾ ಸ್ಥಾನಕ್ಕೆ ತಿಲಕ್‌ ವರ್ಮಾ?

ವಿಶಾಖಪಟ್ಟಣಂ ಪಿಚ್‌ಗೆ ತಕ್ಕಂತೆ ಭಾರತ ತಂಡ ತನ್ನ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಬಹುದು. ಪ್ಲೇಯಿಂಗ್‌ XIನಲ್ಲಿ ಆಲ್‌ರೌಂಡರ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ಕಾರಣ ವಿಶೇಷ ಬ್ಯಾಟ್ಸ್‌ಮನ್‌ಗಳ ಸಂಖ್ಯೆ ಸೀಮಿತವಾಗಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಕೆಳ ಮಧ್ಯಮ ಕ್ರಮಾಂಕದಿಂದ ರನ್‌ಗಳು ಬಂದಿರಲಿಲ್ಲ ಹಾಗೂ ಫಿನಿಷಿಂಗ್‌ ಪಾತ್ರವನ್ನು ಯಾರೂ ನಿರ್ವಹಿಸುತ್ತಿಲ್ಲ. ಹಾಗಾಗಿ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ರವೀಂದ್ರ ಜಡೇಜಾ ಅವರ ಬದಲು ಹೆಚ್ಚುವರಿ ಬ್ಯಾಟ್ಸ್‌ಮನ್‌ ರೂಪದಲ್ಲಿ ತಿಲಕ್‌ ವರ್ಮಾಗೆ ಅವಕಾಶ ನೀಡುವ ಸಾಧ್ಯತೆ ಇದೆ.

IND vs SA: 53ನೇ ಒಡಿಐ ಶತಕ ಸಿಡಿಸಿ ಜಿಂಕೆಯಂತೆ ಜಿಗಿದು ಸಂಭ್ರಮಿಸಿದ ವಿರಾಟ್‌ ಕೊಹ್ಲಿ!

ಮೂರನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI: ಯಶಸ್ವಿ ಜೈಸ್ವಾಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಋತುರಾಜ್‌ ಗಾಯಕ್ವಾಡ್‌, ಕೆಎಲ್‌ ರಾಹುಲ್‌ (ನಾಯಕ, ವಿಕೆಟ್‌ ಕೀಪರ್‌), ತಿಲಕ್‌ ವರ್ಮಾ, ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್‌ ಯಾದವ್‌, ಹರ್ಷಿತ್‌ ರಾಣಾ, ಅರ್ಷದೀಪ್‌ ಸಿಂಗ್‌, ಪ್ರಸಿಧ್‌ ಕೃಷ್ಣ