ಬಾಲಿ: ಇಂಡೋನೇಷ್ಯಾದ ಕ್ರಿಕೆಟಿಗ ಗೆಡೆ ಪ್ರಿಯಂದನ ಟಿ20ಐ ಕ್ರಿಕೆಟ್ ಇತಿಹಾಸವನ್ನು ಬದಲಾಯಿಸಿದ್ದಾರೆ. ಕೇವಲ ಒಂದು ಓವರ್‌ನಲ್ಲಿ ಪ್ರಿಯಂದನ (Gede Priandana) ಅವರ ಹೆಸರು ದಾಖಲೆ ಪುಸ್ತಕಗಳಲ್ಲಿ ದಾಖಲಾಗಿದೆ. ದಿಗ್ಗಜ ಬೌಲರ್‌ಗಳಿಂದಲೂ ಸಾಧ್ಯವಾಗದ ದಾಖಲೆಯನ್ನು ಇಂಡೋನೇಷ್ಯಾ (Indonesia) ಬೌಲರ್ ಬರೆದಿದ್ದಾರೆ. 28ನೇ ವಯಸ್ಸಿನ ಅರೆಕಾಲಿಕ ವೇಗದ ಬೌಲರ್ ಬಾಲಿಯಲ್ಲಿ ಕಾಂಬೋಡಿಯಾ (Cambodia) ವಿರುದ್ಧದ ಪಂದ್ಯದಏಕೈಕ ಓವರ್‌ನಲ್ಲಿ ಕೇವಲ ಒಂದು ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಪ್ರಿಯಂದನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಇವರಿಗಿಂತ ಮೊದಲು ಯಾವುದೇ ಬೌಲರ್ ಪುರುಷರ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಮಹಿಳಾ ಕ್ರಿಕೆಟ್‌ನಲ್ಲಿಯೂ ಏಕೈಕ ಓವರ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ ಸಾಧನೆಯನ್ನು ಮಾಡಿಲ್ಲ. ಈ ಹಿಂದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಬೌಲರ್‌ಗಳು ಒಂದೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸುವ ಸಾಧನೆಯನ್ನು ಮಾಡಿದ್ದಾರೆ. ಆದರೆ ಯಾರೂ ಒಂದೇ ಓವರ್‌ನಲ್ಲಿ ಈ ಸಾಧನೆಯನ್ನು ಮಾಡಿಲ್ಲ. ಗೆಡೆ ಪ್ರಿಯಂದನ ಅವರ ಬೌಲಿಂಗ್‌ನಿಂದಾಗಿ, ಇಂಡೋನೇಷ್ಯಾ ಪಂದ್ಯವನ್ನು 60 ರನ್‌ಗಳಿಂದ ಗೆದ್ದುಕೊಂಡಿತು.
ʻಬುಲೆಟ್‌ಪ್ರೂಪ್ ಕಾರಿನಲ್ಲಿ ಓಡಾಡುತ್ತಿದ್ದೇನೆʼ: ರಶೀದ್ ಖಾನ್ ಶಾಕಿಂಗ್ ಹೇಳಿಕೆ!
ಬಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ 5 ವಿಕೆಟ್‌ಗಳಿಗೆ 167 ರನ್‌ಗಳನ್ನು ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಧರ್ಮ ಕೇಸುಮಾ 110 ರನ್ ಗಳಿಸಿ ಅಜೇಯರಾಗಿ ಮರಳಿದರು. ಗುರಿಯನ್ನು ಬೆನ್ನಟ್ಟಿದ ಕಾಂಬೋಡಿಯಾ 15 ಓವರ್‌ಗಳಲ್ಲಿ 5 ವಿಕೆಟ್‌ಗೆ 106 ರನ್ ಗಳಿಸಿತ್ತು. ನಂತರ ನಾಯಕ ಗೆಡೆ ಪ್ರಿಯಂದನಗೆ ಚೆಂಡನ್ನು ಹಸ್ತಾಂತರಿಸಿದರು. ಇಂಡೋನೇಷ್ಯಾ ಪರ ಬ್ಯಾಟಿಂಗ್‌ನಲ್ಲಿ 6 ರನ್‌ಗೆ ವಿಕೆಟ್ ಒಪ್ಪಿಸಿದ್ದ ಪ್ರಿಯಂದನ, ಬೌಲಿಂಗ್‌ನಲ್ಲಿ ಮಿಂಚಿದರು. ಗೆಡೆ ಮೊದಲ ಮೂರು ಎಸೆತಗಳಲ್ಲಿ ಶಾ ಅಬ್ರಾರ್ ಹುಸೇನ್, ನಿರ್ಮಲ್ಜಿತ್ ಸಿಂಗ್ ಮತ್ತು ಚಾಂಥೋಯುನ್ ರತನಕ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪಡೆದರು. ನಂತರ ಅವರು ಮೊಂಗ್ದಾರ ಸೋಕ್ ಮತ್ತು ಪೆಲ್ ವೆನ್ನಕ್ ಅವರನ್ನು ಔಟ್ ಮಾಡಿದರು. ಕಾಂಬೋಡಿಯಾದ ಇಡೀ ತಂಡವು ಸ್ಕೋರ್‌ಗೆ ಕೇವಲ ಒಂದು ರನ್ ಸೇರಿಸುವ ಮೂಲಕ 107 ರನ್‌ಗೆ ಆಲೌಟ್ ಆಗಿತ್ತು. ಗೆಡೆ ಅವರ ಬೌಲಿಂಗ್‌ನಲ್ಲಿ ಒಂದೇ ಒಂದು ರನ್ ವೈಡ್ ಆಗಿತ್ತು.
ಟಿ20ಐಗಳಲ್ಲಿ ಒಂದೇ ಓವರ್‌ನಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
2025 ರಲ್ಲಿ ಕಾಂಬೋಡಿಯಾ ವಿರುದ್ಧ ಗೆಡೆ ಪ್ರಿಯಂದನ (ಇಂಡೋನೇಷ್ಯಾ) 5 ವಿಕೆಟ್‌ಗಳು
2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಲಸಿತ್ ಮಾಲಿಂಗ (ಶ್ರೀಲಂಕಾ) 4 ವಿಕೆಟ್‌ಗಳು
2019 ರಲ್ಲಿ ಐರ್ಲೆಂಡ್ ವಿರುದ್ಧ ರಶೀದ್ ಖಾನ್ (ಅಫ್ಘಾನಿಸ್ತಾನ) 4 ವಿಕೆಟ್‌ಗಳು
2022 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕರ್ಟಿಸ್ ಕ್ಯಾಂಪರ್ (ಐರ್ಲೆಂಡ್) 4 ವಿಕೆಟ್‌ಗಳು
2022 ರಲ್ಲಿ ಇಂಗ್ಲೆಂಡ್ ವಿರುದ್ಧ ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್) 4 ವಿಕೆಟ್‌ಗಳು
ಕ್ರಿಕೆಟ್ ವೃತ್ತಿ ಜೀವನಕ್ಕೆ ಎಂಎಸ್ ಧೋನಿ ವಿಲನ್?: ವದಂತಿಗಳ ಬಗ್ಗೆ ಅಮಿತ್ ಮಿಶ್ರಾ ಸ್ಪಷ್ಟನೆ!
ಗೆಡೆ ಪ್ರಿಯಂದನ್‌ಗೆ ತಪ್ಪಿದ ಪಂದ್ಯ ಶ್ರೇಷ್ಠ ಪ್ರಶಸ್ತಿ
ವಿಶ್ವ ದಾಖಲೆಯ ಬೌಲಿಂಗ್ ಹೊರತಾಗಿಯೂ ಗೆಡೆ ಪ್ರಿಯಂದನ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತಪ್ಪಿತು. ಈ ಪ್ರಶಸ್ತಿಯನ್ನು ಇಂಡೋನೇಷ್ಯಾದ ವಿಕೆಟ್ ಕೀಪರ್ ಧರ್ಮ ಕೆಸುಮ ಪಡೆದರು, ಅವರು 68 ಎಸೆತಗಳಲ್ಲಿ ಔಟಾಗದೆ 110 ರನ್ ಗಳಿಸಿದರು. ಕೆಸುಮ ಅವರ ಇನಿಂಗ್ಸ್ ಇಂಡೋನೇಷ್ಯಾಕ್ಕೆ ಆಧಾರವಾಗಿ ಪರಿಣಮಿಸಿತು ಏಕೆಂದರೆ ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು 20 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.