IPL 2025: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರಭ್‌ಸಿಮ್ರನ್ ಸಿಂಗ್ ತಂದೆ!
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪ್ರಭ್‌ಸಿಮ್ರನ್ ಸಿಂಗ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಅವರು ಪಂಜಾಬ್ ಪರ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದರ ನಡುವೆ ಪ್ರಭ್‌ಸಿಮ್ರನ್ ತಂದೆ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆಂಬ ವಿಷಯ ಬಹಿರಂಗವಾಗಿದೆ.

ಪ್ರಭ್‌ಸಿಮ್ರನ್ ಸಿಂಗ್ ತಂದೆಗೆ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ.

ನವದೆಹಲಿ: ಧರ್ಮಶಾಲಾದಲ್ಲಿ ಭಾನುವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2025) 54ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings), ಲಖನೌ ಸೂಪರ್ ಜಯಂಟ್ಸ್ ತಂಡವನ್ನು 37 ರನ್‌ಗಳಿಂದ ಸೋಲಿಸಿತು. ಪಿಬಿಕೆಎಸ್ ತಂಡದ ಆರಂಭಿಕ ಪ್ರಭ್‌ಸಿಮ್ರನ್ ಸಿಂಗ್ (Prabhsimran Singh) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 48 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 91 ರನ್ ಗಳಿಸುವ ಮೂಲಕ ಅದ್ಭುತ ಇನಿಂಗ್ಸ್ ಆಡಿದರು. ಈ ಋತುವಿನಲ್ಲಿ ಅವರು ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ. ಪಂಜಾಬ್ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದೀಗ ಪ್ರಭ್‌ಸಿಮ್ರನ್ ಸಿಂಗ್ ಅವರ ದೊಡ್ಡಪ್ಪ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುವಾಗ ಒಂದು ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪಂಜಾಬ್ ಆರಂಭಿಕ ಬ್ಯಾಟ್ಸ್‌ಮನ್‌ನ ತಂದೆ ಸುರ್ಜೀತ್ ಸಿಂಗ್ ಅವರು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಾರೆಂಬ ಆಘಾತಕಾರಿ ಅಂಶವನ್ನು ರಿವೀಲ್ ಮಾಡಿದ್ದಾರೆ.
ಪ್ರಭ್‌ಸಿಮ್ರನ್ ಅವರ ತಂದೆ ಸರ್ದಾರ್ ಸುರ್ಜೀತ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ ಮತ್ತು ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕಾಗಿದೆ. ಇಂತಹ ಕಷ್ಟದ ಸಮಯದಲ್ಲಿ, ಪಿಬಿಕೆಎಸ್ ಪರ ಪ್ರಬ್‌ಸಿಮ್ರನ್ ಅವರ ಬ್ಯಾಟಿಂಗ್ ಪ್ರದರ್ಶನವು ಸುರ್ಜೀತ್ ಸಿಂಗ್ ಅವರ ಮುಖದಲ್ಲಿ ನಗುವನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದೆ.
IPL 2025: ಪಂಜಾಬ್ ಕಿಂಗ್ಸ್‌ನಲ್ಲಿರುವ ಜೂನಿಯರ್ ಧೋನಿಯನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್!
ಮಗ ಉತ್ತಮ ಪ್ರದರ್ಶನ ತೋರಿದರೆ ಸುರ್ಜೀತ್ ನಗುತ್ತಾರೆ
"ಇತ್ತೀಚಿನ ದಿನಗಳಲ್ಲಿ ಐಪಿಎಲ್ ಟೂರ್ನಿಯಲ್ಲಿ ಪ್ರಭ್‌ಸಿಮ್ರನ್ ಬ್ಯಾಟಿಂಗ್ ನೋಡಿದಾಗ ಮಾತ್ರ ಅವರು (ಪ್ರಬ್‌ಸಿಮ್ರನ್ ಸಿಂಗ್ ತಂದೆ) ನಗುತ್ತಾರೆ," ಎಂದು ಸುರ್ಜೀತ್ ಸಿಂಗ್ ಅವರ ಸಹೋದರ ಸತ್ವಿಂದರ್ ಪಾಲ್ ಸಿಂಗ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
"ಅವರು ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಾರೆ. ಅಣ್ಣನಾಗಿ, ಅವರು ಅನುಭವಿಸುತ್ತಿರುವ ನೋವು ನನಗೆ ಕಾಣುತ್ತಿಲ್ಲ. ವೈದ್ಯರು ಡಯಾಲಿಸಿಸ್‌ಗಾಗಿ ಮನೆಗೆ ಬಂದಾಗ, ನಾನು ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ. ನನ್ನ ತಮ್ಮನಿಗೆ ಹೀಗಾಗಬಾರದೆಂದು ನಾನು ಪ್ರಾರ್ಥಿಸದ ದಿನವೇ ಇಲ್ಲ," ಎಂದು ಪಂಜಾಬ್ ಓಪನರ್ ದೊಡ್ಡಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
IPL 2025: ಆರ್‌ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ 8 ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
ಪ್ರಭ್‌ಸಿಮ್ರನ್ ತನ್ನ ಬ್ಯಾಟಿಂಗ್ ಮೂಲಕ ದೇಶಾದ್ಯಂತ ಸದ್ದು ಮಾಡುತ್ತಿದ್ದರೆ, ಅವರ ತಂದೆ ಸುರ್ಜೀತ್ ಸಿಂಗ್ ಪಾಟಿಯಾಲದಲ್ಲಿ ದೂರದರ್ಶನದ ಮುಂದೆ ತನ್ನ ಮಗನ ಆಟವನ್ನು ಆನಂದಿಸುತ್ತಿದ್ದಾರೆ. ಸುರ್ಜೀತ್ ತನ್ನ ಮಗ ಪ್ರಭ್‌ಸಿಮ್ರನ್ ಕೆಟ್ಟ ಶಾಟ್ ಆಡುವುದನ್ನು ನೋಡಿದಾಗ, ಅವರು ಟಿವಿ ಮುಂದೆ ಕೂಗುತ್ತಾರೆ. ಆ ಮೂಲಕ ತನ್ನ ಮಗ ಬಹಳ ಎಚ್ಚರಿಕೆಯಿಂದ ಆಡಬೇಕು ಎಂಬುದನ್ನು ತಮ್ಮ ಭಾವನೆಗಳಿಂದ ಅವರು ವ್ಯಕ್ತಪಡಿಸುತ್ತಾರೆ.
Prabhsimran Singh’s father is going through a tough time 🥺 pic.twitter.com/WyXqqe54ZK
— Filtercricket (@filter_cricket) May 5, 2025
ಮಗನ ಪಂದ್ಯಗಳನ್ನು ವೀಕ್ಷಿಸುವ ಸುರ್ಜೀತ್ ಸಿಂಗ್
ಮಾತು ಮುಂದುವರಿಸಿದ ಸತ್ವಿಂದರ್ ಪಾಲ್ ಸಿಂಗ್, "ಪಂಜಾಬ್ ಕಿಂಗ್ಸ್‌ನ ಪ್ರತಿಯೊಂದು ಪಂದ್ಯಕ್ಕೂ ಮೊದಲು, ನಾನು ಅವರನ್ನು ಲಿವಿಂಗ್ ರೂಮಿಗೆ ಕರೆದೊಯ್ಯುತ್ತೇನೆ. ನಾವು ಒಟ್ಟಿಗೆ ಪಂದ್ಯಗಳನ್ನು ವೀಕ್ಷಿಸುತ್ತೇವೆ ಮತ್ತು ಪ್ರತಿ ಬಾರಿ ಕ್ಯಾಮೆರಾ ಮುಂದೆ ತಮ್ಮ ಮಗ ಕಾಣಿಸಿಕೊಂಡಾಗಲೆಲ್ಲಾ ಅವರು ನಗುತ್ತಾರೆ. ಸಿಮ್ಮು (ಪ್ರಭ್‌ಸಿಮ್ರನ್) ರನ್ ಗಳಿಸಿದರೆ ಇವರು ನಗುತ್ತಲೇ ಇರುತ್ತಾರೆ. ಆ ಕ್ಷಣಗಳಲ್ಲಿ ಅವರು ತನ್ನ ನೋವನ್ನು ಮರೆತುಬಿಡುತ್ತಾರೆ. ಸಿಮ್ಮು ಕೆಟ್ಟ ಹೊಡೆತ ಆಡಿದರೆ, ʻಮೂರ್ಖ, ಸುಲಭವಾಗಿ ಆಡು'ʼಎಂದು ಕೂಗುತ್ತಾರೆ," ಎಂದು ಹೇಳಿದ್ದಾರೆ.