ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಆರ್‌ಸಿಬಿ vs ಕೆಕೆಆರ್‌ ನಡುವಣ ಪಂದ್ಯಕ್ಕೆ ಮಳೆ ಭೀತಿ! ಹವಾಮಾನ ವರದಿ ಹೇಗಿದೆ?

RCB vs KKR Weather Report: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಮಾರ್ಚ್‌ 22 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲನೇ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕೋಲ್ಕತಾದ ಹವಾಮಾನ ವರದಿಯನ್ನು ಇಲ್ಲಿ ವಿವರಿಸಲಾಗಿದೆ.

IPL 2025: ಕೆಕೆಆರ್‌ ವಿರುದ್ಧ ಆರ್‌ಸಿಬಿ ಪಂದ್ಯಕ್ಕೆ ಮಳೆ ಭೀತಿ!

ಆರ್‌ಸಿಬಿ-ಕೆಕೆಆರ್‌ ಪಂದ್ಯಕ್ಕೆ ಮಳೆ ಭೀತಿ?

Profile Ramesh Kote Mar 20, 2025 8:33 PM

ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮಾರ್ಚ್‌ 22 ರಂದು ನಡೆಯುವ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ (RCB vs KKR) ತಂಡಗಳು ಕಾದಾಟ ನಡೆಸಲಿದೆ. ಆದರೆ, ಟೂರ್ನಿಯ ಮೊದಲನೇ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳದ ರಾಜ್ಯದಾದ್ಯಂತ ಮಳೆಯಾಗಲಿದೆ ಎಂದು ಅಲ್ಲಿನ ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ. ಅದರಂತೆ ಕೋಲ್ಕತಾ (Kolkata) ನಗರದಲ್ಲಿಯೂ ಮಳೆ ಬೀಳಬಹುದು. ಈ ಹಿನ್ನೆಲೆಯಲ್ಲಿ ಮೊದಲನೇ ಪಂದ್ಯದ ಮೇಲೆ ಮಳೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಣ 2025ರ ಐಪಿಎಲ್‌ ಆರಂಭಿಕ ಪಂದ್ಯಕ್ಕೂ ಮುನ್ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಅಭಿಮಾನಿಗಳನ್ನು ರಂಜಿಸಲು ಬಾಲಿವುಡ್‌ ನಟ-ನಟಿಯರು ಹಾಗೂ ಬಾಲಿವುಡ್‌ ಗಾಯಕರು ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಆದರೆ, ಪಂದ್ಯದ ದಿನ ಕೋಲ್ಕತಾದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಣ ಪಂದ್ಯಕ್ಕೆ ಮಳೆ ಭೀತಿ ಉಂಟಾಗಲಿದೆ.

IPL 2025: ಸಿಎಸ್‌ಕೆಯನ್ನು ಹೊರಗಿಟ್ಟು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಎಬಿಡಿ!

ಹವಾಮಾನ ಇಲಾಖೆ ಹೇಳಿದ್ದೇನು?

"ಬಂಗಾಳ ಕೊಲ್ಲಿಯಿಂದ ಕೆಳ ಉಷ್ಣವಲಯದ ಮಟ್ಟದಲ್ಲಿ ಅನುಕೂಲಕರ ಗಾಳಿಯ ಮಾದರಿ ಮತ್ತು ಬಲವಾದ ತೇವಾಂಶದ ಒಳನುಗ್ಗುವಿಕೆ ಇರುವುದರಿಂದ, 2025ರ ಮಾರ್ಚ್ 20 ರಿಂದ 22ರ ಅವಧಿಯಲ್ಲಿ ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ," ಎಂದು ಐಎಂಡಿ ಬುಲೆಟಿನ್‌ ತಿಳಿಸಿದೆ.

ಬಿರ್ಭುಮ್, ಮುರ್ಷಿದಮನ್, ನಾಡಿಯಾ, ಪೂರ್ವ ಬಂಧಮನ್ ಜಿಲ್ಲೆಗಳು ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣಗಳು ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಗುಡುಗು ಸಹಿತ ಮಳೆ, ಮಿಂಚು, ಆಲಿಕಲ್ಲು ಮಳೆ ಮತ್ತು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

IPL 2025: ಅಭಿಷೇಕ್‌ ಶರ್ಮಾ or ಇಶಾನ್‌ ಕಿಶನ್? ಸನ್‌ರೈಸರರ್ಸ್‌ ಹೈದರಾಬಾದ್‌ ಸಂಭಾವ್ಯ ಪ್ಲೇಯಿಂಗ್‌ XI ವಿವರ

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ದಿಶಾ ಪಟಾನಿ ಹಾಗೂ ಬಾಲಿವುಡ್‌ ಗಾಯಕಿ ಶ್ರೇಯಾ ಘೋಷಲ್‌ ಅವರು ಭಾಗವಹಿಸಲಿದ್ದಾರೆಂದು ಇತ್ತೀಚಿನ ವರದಿಗಳು ರಿವೀಲ್‌ ಮಾಡಿವೆ. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಆಗಮಿಸಲಿದ್ದಾರೆ.

2025ರ ಐಪಿಎಲ್‌ ಮೊದಲನೇ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌), ಟಿಮ್‌ ಡೇವಿಡ್‌, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜಾಶ್‌ ಹೇಝಲ್‌ವುಡ್‌, ಯಶ್‌ ದಯಾಳ್‌, ಸುಯೇಶ್‌ ಶರ್ಮಾ

ಕೋಲ್ಕತಾ ನೈಟ್‌ ರೈಡರ್ಸ್‌: ಕ್ವಿಂಟನ್‌ ಡಿ ಕಾಕ್‌ ( ವಿ.ಕೀ), ಸುನೀಲ್‌ ನರೇನ್‌, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್‌ ಅಯ್ಯರ್‌, ರಿಂಕು ಸಿಂಗ್‌, ಆಂಡ್ರೆ ರಸೆಲ್‌, ರಮಣ್‌ದೀಪ್‌ ಸಿಂಗ್‌, ಹರ್ಷಿತ್‌ ರಾಣಾ, ಎನ್ರಿಕ್‌ ನೊರ್ಕಿಯಾ, ವೈಭವ್‌ ಅರೋರಾ, ವರುಣ್‌ ಚಕ್ರವರ್ತಿ