ಚೆನ್ನೈ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB), ಮಾರ್ಚ್ 28 ರಂದು ಶುಕ್ರವಾರ ನಡೆಯುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತರುವ ಸಾಧ್ಯತೆ ಇದೆ. ಕೆಕೆಆರ್ ಎದುರು ಆರ್‌ಸಿಬಿ ಪ್ಲೇಯಿಂಗ್ XIಗೆ ಅಲಭ್ಯರಾಗಿದ್ದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಸಿಎಸ್‌ಕೆ ಪಂದ್ಯದಲ್ಲಿಆಡುವ ಸಾಧ್ಯತೆ ಇದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮಾರ್ಚ್ 22 ರಂದು ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎದುರು ಆರ್‌ಸಿಬಿ, ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿ 7 ವಿಕೆಟ್ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಸೋತಿದ್ದ ಕೆಕೆಆರ್, ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 174 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಆರ್‌ಸಿಬಿಗೆ 175 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆರ್‌ಸಿಬಿ, ವಿರಾಟ್ ಕೊಹ್ಲಿ (59*) ಹಾಗೂ ಫಿಲ್ ಸಾಲ್ಟ್ (56) ಅವರ ಅರ್ಧಶತಗಳ ನೆರವಿನಿಂದ 16.2 ಓವರ್‌ಗಳಿಗೆ 177 ರನ್‌ಗಳನ್ನು ಗಳಿಸಿ 7 ವಿಕೆಟ್ ಗೆಲುವು ಪಡೆದಿತ್ತು.
IPL 2025 Points Table: ಐಪಿಎಲ್ ಅಂಕಪಟ್ಟಿಯಲ್ಲಿ ಆರ್‌ಸಿಬಿಗೆ ಎಷ್ಟನೇ ಸ್ಥಾನ?
ಇನ್ನು ಮಾರ್ಚ್ 23 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್‌ಗಳ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 155 ರನ್‌ಗಳನ್ನು ಕಲೆ ಹಾಕಿತ್ತು. ಸಿಎಸ್‌ಕೆ ಪರ ಖಲೀಲ್ ಅಹ್ಮದ್ 3 ವಿಕೆಟ್ ಕಿತ್ತಿದ್ದರೆ, ನೂರ್ ಅಹ್ಮದ್ ಅವರು4 ವಿಕೆಟ್ ಪಡೆದಿದ್ದರು. ಬಳಿಕ ಗುರಿ ಹಿಂಬಾಲಿಸಿದ್ದ ಸಿಎಸ್‌ಕೆ ರಚಿನ್ ರವೀಂದ್ರ ಹಾಗೂ ಋತುರಾಜ್ ಗಾಯಕ್ವಾಡ್ ಅರ್ಧಶತಕಗಳ ಬಲದಿಂದ 19.1 ಓವರ್‌ಗಳಿಗೆ 6 ವಿಕೆಟ್ ಕಳೆದುಕೊಂಡು 158 ರನ್‌ಗಳನ್ನು ಕಲೆ ಹಾಕಿ ಗೆಲುವು ಪಡೆದಿತ್ತು.
IPL 2025: ʻಈ ಬಾರಿಯೂ ಕಪ್ ಗೆಲ್ಲಲ್ಲ, ಆರ್‌ಸಿಬಿಗೆ ಕೊನೆಯ ಸ್ಥಾನʼ-ಆಡಂ ಗಿಲ್‌ಕ್ರಿಸ್ಟ್ ಭವಿಷ್ಯ!
ಆಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಲಿದೆ. ಕೆಕೆಆರ್ ವಿರುದ್ಧ ಸಣ್ಣ ಗಾಯದಿಂದ ವಿಶ್ರಾಂತಿ ಪಡೆದಿದ್ದ ಭುವನೇಶ್ವರ್ ಕುಮಾರ್ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯಬಹುದು. ಆ ಮೂಲಕ ಭುವನೇಶ್ವರ್ ಕುಮಾರ್‌ಗೆ ಯುವ ವೇಗಿ ರಾಸಿಖ್ ದಾರ್ ಸಲಾಮ್ ತಮ್ಮ ಸ್ಥಾನವನ್ನು ಬಿಟ್ಟು ಕೊಡಬಹುದು. ಇನ್ನುಳಿದಂತೆ ಎಲ್ಲಾ ಆಟಗಾರರು ಈ ಪಂದ್ಯದಲ್ಲಿಯೂ ಮುಂದುವರಿಯಲಿದ್ದಾರೆ.
ಸಿಎಸ್‌ಕೆ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI ವಿವರ
- ಫಿಲ್ ಸಾಲ್ಟ್ (ಆರಂಭಿಕ ಬ್ಯಾಟ್ಸ್‌ಮನ್)
- ವಿರಾಟ್ ಕೊಹ್ಲಿ (ಆರಂಭಿಕ ಬ್ಯಾಟ್ಸ್‌ಮನ್)
- ರಜತ್ ಪಾಟಿದಾರ್ (ನಾಯಕ/ ಬ್ಯಾಟ್ಸ್‌ಮನ್)
- ಲಿಯಾಮ್ ಲಿವಿಂಗ್‌ಸ್ಟೋನ್ (ಆಲ್‌ರೌಂಡರ್)
- ಜಿತೇಶ್ ಶರ್ಮಾ (ವಿಕೆಟ್ ಕೀಪರ್)
- ಟಿಮ್ ಡೇವಿಡ್ (ಆಲ್‌ರೌಂಡರ್)
- ಕೃಣಾಲ್ ಪಾಂಡ್ಯ (ಆಲ್‌ರೌಂಡರ್)
- ಭುವನೇಶ್ವರ್ ಕುಮಾರ್ (ವೇಗದ ಬೌಲರ್)
- ಸುಯೇಶ್ ಶರ್ಮಾ (ಸ್ಪಿನ್ನರ್)
- ಜಾಶ್ ಹೇಝಲ್‌ವುಡ್ (ವೇಗದ ಬೌಲರ್)
- ಯಶ್ ದಯಾಳ್ (ವೇಗದ ಬೌಲರ್)
- ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್
ಪಂದ್ಯದ ವಿವರ
ಟೂರ್ನಿ: 2025ರ ಇಂಡಿಯನ್ ಪ್ರೀಮಿಯರ್ ಲೀಗ್
ಪಂದ್ಯ: ಎಂಟನೇ ಪಂದ್ಯ
ದಿನಾಂಕ: ಮಾರ್ಚ್ 28, 2025
ಸಮಯ: ಸಂಜೆ 07: 30ಕ್ಕೆ ಆರಂಭ
ಸ್ಥಳ: ಎಂ ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್‌ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್, ಜಿಯೊ ಸಿನಿಮಾ