ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಆಟಗಾರನಾಗಿ ಆಡಬಾರದು ಎಂದ ಆಕಾಶ್‌ ಚೋಪ್ರಾ!

IPL 2026: ಮುಂಬೈ ಇಂಡಿಯನ್ಸ್‌ ತಂಡದಲ್ಲಿ ರೋಹಿತ್‌ ಶರ್ಮಾ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಬಾರಡು ಎಂದು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಸಲಹೆ ನೀಡಿದ್ದಾರೆ. ಕಳೆದ ಸೀಸನ್‌ನಲ್ಲಿ ರೋಹಿತ್‌ ಶರ್ಮಾ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿದ್ದರು.

ರೋಹಿತ್‌ ಶರ್ಮಾ ಪರ ಆಕಾಶ್‌ ಚೋಪ್ರಾ ಬ್ಯಾಟಿಂಗ್‌.

ನವದಹೆಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಅವರು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಬಾರದು, ಬದಲಿಗೆ ಅವರು 40 ಓವರ್‌ಗಳ ಕಾಲ ಅಂಗಣದಲ್ಲಿ ಕಾಣಿಸಿಕೊಳ್ಳಬೇಕೆಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ (Aakash chopra) ಸಲಹೆಯನ್ನು ನೀಡಿದ್ದಾರೆ. ರೋಹಿತ್‌ ಶರ್ಮಾ ಇದೀಗ ಸಂಪೂರ್ಣ ಫಿಟ್‌ ಆಗಿದ್ದಾರೆ, ಹಾಗಾಗಿ ಅವರು ಡಗೌಟ್‌ನಲ್ಲಿ ಕುಳಿತು 20 ಓವರ್‌ಗಳನ್ನು ವೀಕ್ಷಿಸುವಂತಾಗಬಾರದು ಎಂದು ಅವರು ಹೇಳಿದ್ದಾರೆ. ಅಂದ್‌ ಹಾಗೆ ಹತ್ತೊಂಬತ್ತನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್‌ 28 ರಂದು ಆರಂಭವಾಗಲಿದೆ.

“ವಾಸ್ತವವೇನೆಂದರೆ ನೀವು ಫಿಟ್ ಆಗಿದ್ದರೆ ಸಂಪೂರ್ಣ ಪಂದ್ಯವನ್ನೇ ಆಡಬೇಕು; ಸಬ್‌ಸ್ಟಿಟ್ಯೂಟ್ ಆಗಿ ಬರಬಾರದು. ವಿಶೇಷವಾಗಿ ನೀವು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಇದ್ದರೆ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬರುವುದು ಸರಿಯಲ್ಲ. ಓಪನರ್‌ಗೆ ಡಗೌಟ್‌ನಲ್ಲಿ ಕೂತು 20 ಓವರ್‌ಗಳನ್ನು ನೋಡುವುದು ಚೆನ್ನಾಗಿರುವುದಿಲ್ಲ,” ಎಂದು ಆಕಾಶ್‌ ಚೋಪ್ರಾ ಜಿಯೋಹಾಟ್‌ಸ್ಟಾರ್‌ಗೆ ಹೇಳಿದ್ದಾರೆ.

IPL 2026: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ಆಘಾತ! ಹರ್ಷಿತ್‌ ರಾಣಾ ಔಟ್‌?

ಓಪನಿಂಗ್ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ಪಂದ್ಯದಲ್ಲಿ ಆಟದ ಭಾಗವಾಗಿರುವುದಕ್ಕೆ ಒಲವು ಹೊಂದಿರುತ್ತಾರೆ ಎಂದು ಹೇಳಿದರು. ರೋಹಿತ್ ಶರ್ಮಾ ಈ ಕ್ಷಣದಲ್ಲಿ ಅತ್ಯಂತ ಫಿಟ್, ಬಲಿಷ್ಠ ಮತ್ತು ಶಕ್ತಿಶಾಲಿ ಆಟಗಾರರಲ್ಲಿ ಒಬ್ಬರು ಎಂದು ಹೇಳಿದ ಅವರು, ಮುಂಬೈ ಇಂಡಿಯನ್ಸ್ ತಂಡ, ಅವರನ್ನು ಸಂಪೂರ್ಣ 40 ಓವರ್‌ಗಳ ಕಾಲ ಮೈದಾನದಲ್ಲಿ ಇರಿಸಿದರೆ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

“ಓಪನರ್‌ಗಳು ಸಾಮಾನ್ಯವಾಗಿ ಮೈದಾನದಲ್ಲೇ ಉಳಿದುಕೊಂಡು ಪಂದ್ಯಕ್ಕೆ ಸಿದ್ಧರಾಗುತ್ತಾರೆ ಮತ್ತು ಆರಂಭದಿಂದಲೇ ಆಟಕ್ಕೆ ಇಳಿಯುತ್ತಾರೆ. ರೋಹಿತ್ ಶರ್ಮಾ ಈಗ ಅತ್ಯಂತ ಫಿಟ್ ಹಾಗೂ ಬಲಿಷ್ಠ ಆಟಗಾರರಲ್ಲಿ ಒಬ್ಬರು, ಆದ್ದರಿಂದ ಅವರು ಸಂಪೂರ್ಣ 40 ಓವರ್‌ಗಳ ಕಾಲ ಮೈದಾನದಲ್ಲಿರಬೇಕು. ಆಗ ಮಾತ್ರ ಮುಂಬೈ ಇಂಡಿಯನ್ಸ್ ತಂಡ, ರೋಹಿತ್ ಶರ್ಮಾ ಅವರಿಂದ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ,” ಎಂದು ಆಕಾಶ್‌ ಚೋಪ್ರಾ ಹೇಳಿದ್ದಾರೆ.

IPL 2026: ಮುಸ್ತಾಫಿಝುರ್‌ ರೆಹಮಾನ್‌ ಸ್ಥಾನಕ್ಕೆ ಬ್ಲೆಸಿಂಗ್‌ ಮುಝರಬಾನಿಗೆ ಚಾನ್ಸ್‌ ಕೊಟ್ಟ ಕೆಕೆಆರ್!

ಮುಂಬೈ ಇಂಡಿಯನ್ಸ್‌ ತಂಡ: ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್, ರಾಬಿನ್ ಮಿಂಜ್, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಜನ್ಫರ್, ಅಶ್ವನಿ ಕುಮಾರ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ರಘು ಶರ್ಮಾ, ರಾಜಾ ಅಂಗಡ್‌ ಬಾವಾ

ಟ್ರೇಡ್‌ ಇನ್‌: ಶೆರ್ಫೆನ್‌ ಋದರ್‌ಫೋರ್ಡ್‌ (ಗುಜರಾತ್‌ ಟೈಟನ್ಸ್‌ನಿಂದ), ಮಯಾಂಕ್‌ ಮಾರ್ಕಂಡೆ (ಕೋಲ್ಕತಾ ನೈಟ್‌ ರೈಡರ್ಸ್‌ನಿಂದ), ಶಾರ್ದುಲ್‌ ಠಾಕೂರ್‌ (ಲಖನೌ ಸೂಪರ್‌ ಜಯಂಟ್ಸ್‌ನಿಂದ)