ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಪಿಎಸ್‌ಎಲ್‌ ತೊರೆದು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರ್ಪಡೆಯಾದ ಸ್ಪೆನ್ಸರ್‌ ಜಾನ್ಸನ್‌!

ಪಾಕಿಸ್ತಾನ ಸೂಪರ್‌ ಲೀಗ್‌ ತೊರೆದ ಆಸ್ಟ್ರೇಲಿಯಾ ವೇಗದ ಬೌಲರ್‌ ಸ್ಪೆನ್ಸರ್‌ ಜಾನ್ಸನ್‌ ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಆಗಮಿಸಿದ್ದಾರೆ. ಗಾಯದಿಂದ ಹೊರಬಿದ್ದ ನೇಥನ್‌ ಎಲ್ಲಿಸ್‌ ಅವರಿಗೆ ಬದಲಿ ಆಟಗಾರನಾಗಿ ಜಾನ್ಸನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸಿಎಸ್‌ಕೆಗೆ ಸೇರ್ಪಡೆಯಾದ ಸ್ಪೆನ್ಸರ್‌ ಜಾನ್ಸನ್‌.

ನವದೆಹಲಿ: ವೈಯಕ್ತಿಕ ಕಾರಣದಿಂದಾಗಿ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಿಂದ ಹೊರಬಿದ್ದ ಆಸ್ಟ್ರೇಲಿಯಾ ವೇಗದ ಬೌಲರ್‌ ನೇಥನ್‌ ಎಲ್ಲಿಸ್‌ (Natha Ellis) ಅವರ ಬದಲಿಗೆ ಚೆನೈ ಸೂಪರ್‌ ಕಿಂಗ್ಸ್‌ ತಂಡ, ಮತ್ತೊಬ್ಬ ಆಸೀಸ್‌ ವೇಗಿ ಸ್ಪೆನ್ಸರ್‌ ಜಾನ್ಸನ್‌ (Spencer Johnson) ಅವರನ್ನು ಸೇರಿಸಿಕೊಂಡಿದೆ. ಮಾರ್ಚ್‌ 24 ರಂದು ಆಸೀಸ್‌ ವೇಗಿಯನ್ನು 1.5 ಕೋಟಿ ರು. ಗಳಿಗೆ ಸೇರಿಸಿಕೊಳ್ಳುವಲ್ಲಿ ಚೆನ್ನೈ ಫ್ರಾಂಚೈಸಿ ಯಶಸ್ವಿಯಾಯಿತು. ಅಂದ ಹಾಗೆ ಸ್ಪೆನ್ಸರ್‌ ಜಾನ್ಸನ್‌ ಅವರು 2026ರ ಪಾಕಿಸ್ತಾನ ಸೂಪರ್‌ ಲೀಗ್‌ ಆಡಲು ತಯಾರಿ ನಡೆಸುತ್ತಿದ್ದರು. ಆದರೆ, ಸಿಎಸ್‌ಕೆ ತಂಡದ ನೇಥನ್‌ ಎಲ್ಲಿಸ್‌ ಐಪಿಎಲ್‌ನಿಂದ ದೂರ ಉಳಿಯಲು ನಿರ್ಧರಿಸಿದ ಬಳಿಕ ಚೆನ್ನೈ ಫ್ರಾಂಚೈಸಿ, ಸ್ಪೆನ್ಸರ್‌ ಜಾನ್ಸನ್‌ ಅವರನ್ನು ಸಂಪರ್ಕಿಸಿ ಕರೆಸಿಕೊಂಡಿದೆ. ಇದೀಗ ಸ್ಪೆನ್ಸರ್‌ ಜಾನ್ಸನ್‌ ಪಿಎಸ್‌ಎಲ್‌ ತೊರೆದು ಐಪಿಎಲ್‌ಗೆ ಆಗಮಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಆಸೀಸ್‌ ವೇಗಿ ಇದೀಗ ಖಲೀಲ್‌ ಅಹ್ಮದ್‌, ಮ್ಯಾಟ್‌ ಹೆನ್ರಿ ಮತ್ತು ಜೇಮಿ ಒವರ್ಟನ್‌ ಒಳಗೊಂಡ ವೇಗದ ಬೌಲಿಂಗ್ ವಿಭಾಗಕ್ಕೆ ಸೇರ್ಪಡೆಯಾಗಲಿದ್ದಾರೆ. ಇವರ ಸೇರ್ಪಡೆಯಿಂದ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಸ್ಪೆನ್ಸರ್‌ ಜಾನ್ಸನ್‌ ಆಸ್ಟ್ರೇಲಿಯಾ ಪರ 13 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (ಐದು ಏಕದಿನ ಹಾಗೂ ಎಂಟು ಟಿ20ಐ) ಆಡಿದ್ದು, ಒಟ್ಟು 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ ಅವರು 2024ರಲ್ಲಿ ಗುಜರಾತ್‌ ಟೈಟನ್ಸ್‌ ಹಾಗೂ 2025ರಲ್ಲಿ ಕೆಕೆಆರ್‌ ಪರ ಆಡಿದ್ದಾರೆ. ಒಟ್ಟು ಒಂಬತ್ತು ಐಪಿಎಲ್ ಪಂದ್ಯಗಳಲ್ಲಿ ಅವರು ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2026: 16,706 ಕೋಟಿ ರು. ಗಳಿಗೆ ಮಾರಾಟವಾದ ಆರ್‌ಸಿಬಿ, ಅತ್ಯಂತ ದುಬಾರಿ ಫ್ರಾಂಚೈಸಿ!

ಜಿಂಬಾಬ್ವೆ ವೇಗದ ಬೌಲರ್ ಬ್ಲೆಸಿಂಗ್‌ ಮುಝರಬಾನಿ ಪಾಕಿಸ್ತಾನ ಟಿ20 ಲೀಗ್‌ಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವರು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಲ್ಲಿ ನಿರ್ಗಮಿತ ಮಸ್ತಾಫಿಝುರ್‌ ರೆಹಮಾನ್‌ ಅವರ ಸ್ಥಾನವನ್ನು ತುಂಬಿದ್ದಾರೆ. ಶ್ರೀಲಂಕಾ ಆಲ್‌ರೌಂಡರ್ ದಸೂನ್‌ ಶಾನಕ ಕೂಡ ಪಿಎಸ್‌ಎಲ್‌ ಟೂರ್ನಿಯಲ್ಲಿ ಒಪ್ಪಂದ ಹೊಂದಿದ್ದರು ಮತ್ತು ಸ್ಯಾಮ್‌ ಕರನ್‌ ಅವರ ಸ್ಥಾನವನ್ನು ತುಂಬಲು ರಾಜಸ್ಥಾನ್‌ ರಾಯಲ್ಸ್‌ಗೆ ಸೇರಿಕೊಂಡಿದ್ದಾರೆ.



ಮೊಹ್ಸಿನ್‌ ನಖ್ವಿ ಎಚ್ಚರಿಕೆ

ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಪಿಎಸ್‌ಎಲ್‌ ಹರಾಜಿನಲ್ಲಿ ಆಯ್ಕೆಯಾಗಿದ್ದ ಆಟಗಾರರು ಐಪಿಎಲ್‌ಗೆ ತೆರಳುತ್ತಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಿರಂತರ ಎರಡನೇ ವರ್ಷಕ್ಕೂ ಪಿಎಸ್‌ಎಲ್‌ ವೇಳಾಪಟ್ಟಿ ಐಪಿಎಲ್‌ ದಿನಾಂಕದೊಂದಿಗೆ ಹೊಂದಿಕೊಂಡಿದೆ. ನಖ್ವಿ ಅವರು ವೇಳಾಪಟ್ಟಿಯಿಂದ ಯಾವುದೇ ಸಮಸ್ಯೆ ಇಲ್ಲ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಹಲವು ಸ್ಟಾರ್‌ ಆಟಗಾರರು ಕೂಡ ಪಿಎಸ್‌ಎಲ್‌ ಆಡುತ್ತಿದ್ದಾರೆ. ಆದರೆ, ಪಿಎಸ್‌ಎಲ್‌ಗೆ ಸಹಿ ಮಾಡಿ ಐಪಿಎಲ್‌ ಆಡಲು ಹೋಗುತ್ತಿರುವ ವಿದೇಶಿ ಆಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

IPL 2026: ಸ್ಯಾಮ್‌ ಕರನ್‌ ಸ್ಥಾನಕ್ಕೆ ರಾಜಸ್ಥಾನ್‌ ರಾಯಲ್ಸ್‌ಗೆ ಸೇರಿದ ದಸೂನ್‌ ಶಾನಕ!

“ನಿಯಮಗಳ ಪ್ರಕಾರ ಆ ವಿದೇಶಿ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷವೂ ಒಂದು ಪ್ರಕರಣವಿತ್ತು, ಹಾಗೆಯೇ ಈ ಬಾರಿ ಕೂಡ ನಡೆಯಲಿದೆ,” ಎಂದು ಮೊಹ್ಸಿನ್‌ ನಖ್ವಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

“ಐಪಿಎಲ್ ಜೊತೆ ವೇಳಾಪಟ್ಟಿ ಸಂಘರ್ಷ ಸಮಸ್ಯೆಯಲ್ಲ, ಏಕೆಂದರೆ ಆಟಗಾರರು ಅಲ್ಲಿ ಹೋಗುತ್ತಿರುವಾಗ, ನಾವು ಇಲ್ಲಿಯಲ್ಲಿಯೂ ಉತ್ತಮ ಆಟಗಾರರನ್ನು ಪಡೆಯುತ್ತೇವೆ. ವರ್ಷದ ಇತರ ಯಾವುದೇ ವಿಂಡೋ ಇಲ್ಲದ ಕಾರಣ, PSL ಅನ್ನು ಮುಂದೂಡಲು ಸಾಧ್ಯವಾಗಲಿಲ್ಲ,” ಅವರು ತಿಳಿಸಿದ್ದಾರೆ.