IPL 2026: ಸ್ಯಾಮ್ ಕರನ್ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್‌ಗೆ ಸೇರಿದ ದಸೂನ್ ಶಾನಕ!
Dasun Shanaka joins Rajasthan Royals: ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಗಾಯಕ್ಕೆ ತುತ್ತಾಗಿರುವ ಕಾರಣ ಅವರ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಶ್ರೀಲಂಕಾ ನಾಯಕ ದಸೂನ್ ಶಾನಕ ಸ್ಥಾನವನ್ನು ಪಡದುಕೊಂಡಿದ್ದಾರೆ. ಈ ಬಗ್ಗೆ ರಾಜಸ್ಥಾನ್ ರಾಯಲ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಕಟಿಸಿದೆ.
ರಾಜಸ್ಥಾನ್ ರಾಯಲ್ಸ್‌ಗೆ ಸೇರ್ಪಡೆಯಾದ ದಸೂನ್ ಶಾನಕ. -
ನವದೆಹಲಿ: ಗಾಯಾಳು ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ (Sam Curran) ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2206) ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಶ್ರೀಲಂಕಾ ಟಿ20ಐ ತಂಡದ ನಾಯಕ ದಸೂನ್ ಶಾನಕ (Dasun Shanaka) ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಈ ಬಗ್ಗೆ ರಾಜಸ್ಥಾನ್ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ.
“19ನೇ ಆವೃತ್ತಿಯ ಆರಂಭದಲ್ಲಿಯೇ ಸ್ಯಾಮ್ ಕರನ್ ಅವರಂಥ ಗುಣಮಟ್ಟದ ಆಟಗಾರನನ್ನು ಕಳೆದುಕೊಂಡಿರುವುದು ನಮಗೆ ಭಾರಿ ನಿಶಾಶೆಯನ್ನು ತಂದಿದೆ," ಎಂದು ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕ ಮತ್ತು ಮುಖ್ಯ ತರಬೇತುದಾರ ಕುಮಾರ್ ಸಂಗಕ್ಕಾರ ಹೇಳಿದ್ದಾರೆ.
“ಬ್ಯಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸ್ಯಾಮ್ ಕರನ್ ನೀಡುವ ಮಹತ್ವವನ್ನು ನಾವು ಮೆಚ್ಚುತ್ತೇವೆ. ಆದರೆ, ದಸೂನ್ ಶಾನಕನನ್ನು ತಂಡಕ್ಕೆ ಸೇರಿಸುವ ಮೂಲಕ ನಾವು ಉತ್ತಮ ಬದಲಾವಣೆಯನ್ನು ಕಂಡಿದ್ದೇವೆ. ಅವರು ತಮ್ಮ ಬ್ಯಾಟ್‌ನಿಂದ ಪಂದ್ಯಗಳನ್ನು ನಮ್ಮ ಪರವಾಗಿ ಮುಗಿಸುವ ಸಾಮರ್ಥ್ಯವನ್ನು ಹೊಂದಿರುವುದು ಮತ್ತು ಗುಣಮಟ್ಟದ ಆಲ್‌ರೌಂಡರ್ ಆಗಿರುವುದರಿಂದ ನಮ್ಮ ತಂಡದ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತಾರೆ,” ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ.
IPL 2026: ಚೆನ್ನೈ ಸೂಪರ್ ಕಿಂಗ್ಸ್, ʻಹಾಲ್ ಆಫ್ ಫೇಮ್‌ಗೆʼ ಭಾಜನರಾದ ಮ್ಯಾಥ್ಯೂ ಹೇಡನ್, ಸುರೇಶ್ ರೈನಾ!
ಶ್ರಿಲಂಕಾದ ದಸೂನ್ ಶಾನಕ, ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಶ್ರಿಲಂಕಾ ತಂಡದ ಮ್ಯಾಚ್ ವಿನ್ನರ್ ಆಗಿದ್ದಾರೆ. ಹಾಗಾಗಿ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಅನುಭವ ಮತ್ತು ಶಾಂತ ಮನೋಭಾವವನ್ನು ತರಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಮ್ಮ ಆರಂಭಿಕ ಪಂದ್ಯವನ್ನು ಮಾರ್ಚ್ 30 ರಂದು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಾದಾಟ ನಡೆಸಲಿದೆ.
From the shores of Lanka to Rajasthan, this all-rounder is now ouRRs! 💗🔥
— Rajasthan Royals (@rajasthanroyals) March 23, 2026
Padhaaro mhare des, Dasun Shanaka 🇱🇰 pic.twitter.com/OY1iPsMHjZ
ದಸೂನ್ ಶಾನಕ ಅವರು ಸ್ಯಾಮ್ ಕರನ್ ಅವರ ಸ್ಥಾನಕ್ಕೆ 2 ಕೋಟಿ ರು. ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿದ್ದಾರೆ. ಅವರು 6 ಟೆಸ್ಟ್, 71 ಒಡಿಐ ಮತ್ತು 131 ಟಿ20ಐ ಪಂದ್ಯಗಳಲ್ಲಿ ಶ್ರಿಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 3,350ಕ್ಕೂ ಹೆಚ್ಚು ರನ್‌ಗಳು ಮತ್ತು 86 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IPL 2026: ಕೆಎಲ್ ರಾಹುಲ್‌ಗೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಡಿಸಿ ಕೋಚ್ ಹೇಮಾಂಗ್ ಬದಾನಿ!
ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮಾಯೆರ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ, ನಂಡ್ರೆ ಬರ್ಗರ್, ದಸೂನ್ ಶಾನಕ, ಆಡಮ್ ಮಿಲ್ನೆ, ಕ್ವೇನಾ ಎಂಫಕಾ, ವೈಭವ್ ಸೂರ್ಯವಂಶಿ, ಡೊನೊವಾನ್ ಫೆರೆರಾ, ರವಿ ಸಿಂಗ್, ಶುಭಮ್ ದುಬೆ, ಕುಲ್ದೀಪ್ ಸೇನ್, ಯಧ್ವೀರ್ ಸಿಂಗ್ ಚರಕ್, ಲ್ಯೂನ್ ಡ್ರೆ ಫ್ರೆಟೋರಿಯಸ್, ವಿಘ್ನೇಶ್ ಪತ್ತೂರು, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜ, ಬ್ರಿಜೇಶ್ ಶರ್ಮಾ, ಅಮನ್ ರಾವ್