IPL 2026 Auction: ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಟಾಪ್ 10 ಸ್ಟಾರ್ ಆಟಗಾರರು!
Top 10 unsold Players:ಅಬುಧಾಬಿಯಲ್ಲಿ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜು ನಡೆದಿತ್ತು. ಈ ಹರಾಜಿನಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 25.2 ಕೋಟಿ ರು ಗಳಿಗೆ ಖರೀದಿಸಿತು. ಆದರೆ, ಜೇಮಿ ಸ್ಮಿತ್, ಡೆವೋನ್ ಕಾನ್ವೇ ಸೇರಿದಂತೆ ಹಲವು ಸ್ಟಾರ್ ಆಟಗಾರರು ಅನ್‌ಸೋಲ್ಡ್ ಆಗಿದ್ದಾರೆ.
ಜೇಮಿ ಸ್ಮಿತ್
ಇಂಗ್ಲೆಂಡ್‌ನ ಸ್ಫೋಟಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ 144 ಕ್ಕಿಂತ ಹೆಚ್ಚಿನ ಟಿ20 ಸ್ಟ್ರೈಕ್ ರೇಟ್ ಹೊಂದಿದ್ದರೂ ಸಹ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.
ಜಾನಿ ಬೈರ್‌ಸ್ಟೋವ್
ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಾನಿ ಬೈರ್ ಸ್ಟೋವ್ ಅವರು ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಡೆವೋನ್ ಕಾನ್ವೆ
ಇಂಡಿಯನ್ ಪೀಮಿಯರ್ ಲೀಗ್ ಟೂರ್ನಿಯಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದರೂ ಡೆವೋನ್ ಕಾನ್ವೇ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ. ಇವರು ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.
ಮೈಕಲ್ ಬ್ರೇಸ್‌ವೆಲ್
ನ್ಯೂಜಿಲೆಂಡ್ ತಂಡದ ಮೈಕಲ್ ಬ್ರೇಸ್ ವೆಲ್ ಅವರು ಪವರ್ ಹಿಟ್ಟಿಂಗ್ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯವಿರುವ ಆಲ್‌ರೌಂಡರ್, ಆದರೂ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ.
ಶೇಯ್ ಹೋಪ್
2025ರಲ್ಲಿ ವೆಸ್ಟ್ ಇಂಡೀಸ್‌ನ ಎಲ್ಲಾ ಸ್ವರೂಪಗಳಲ್ಲಿ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್ ಆಗಿದ್ದ ಶೇಯ್ ಹೋಪ್, ಐಪಿಎಲ್ ಹರಾಜಿನಲ್ಲಿ ಸ್ಥಿರತೆಗಿಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳತ್ತ ತಂಡಗಳು ಒಲವು ತೋರಿದ್ದರಿಂದ ಈ ಅವಕಾಶವನ್ನು ಕಳೆದುಕೊಂಡರು.
ಜೇಕ್ ಮೆಗರ್ಕ್
ವಿಶ್ವ ಕ್ರಿಕೆಟ್‌ನ ಅತ್ಯಂತ ವಿನಾಶಕಾರಿ ಯುವ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಜೇಕ್ ಮೆಗರ್ಕ್ ಅವರು ಈ ಬಾರಿ ಹರಾಜಿನಲ್ಲಿ ಖರೀದಿಸಲು ಯಾವುದೇ ಫ್ರಾಂಚೈಸಿ ಒಲವು ತೋರಲಿಲ್ಲ.
ಮುಜೀಬ್ ಉರ್ ರೆಹಮಾನ್
ಜಾಗತಿಕ ಟಿ20 ಹಿನ್ನೆಲೆ ಹೊಂದಿರುವ ನಿಗೂಢ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್, ಭಾರತೀಯ ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳ ಮೇಲೆ ಫ್ರಾಂಚೈಸಿಗಳು ಆಸಕ್ತಿ ತೋರಿದ ಕಾರಣ ಅನ್‌ಸೋಲ್ಡ್ ಆದರು.
ಮಹೇಶ್ ತೀಕ್ಷಣ
ಪವರ್‌ಪ್ಲೇ ನಿಯಂತ್ರಣ ಮತ್ತು ಐಪಿಎಲ್ ಅನುಭವದ ಹೊರತಾಗಿಯೂ, ಮಹೇಶ್ ತೀಕ್ಷಣ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಮುಂದಾಗಲಿಲ್ಲ.
ಡ್ಯಾರಿಲ್ ಮಿಚೆಲ್
ಮಿನಿ ಹರಾಜಿನಲ್ಲಿ ಹಲವು ಅನ್‌ಕ್ಯಾಪ್ಡ್ ಆಟಗಾರರನ್ನು ಫ್ರಾಂಚಿಗಳು ಖರೀದಿಸಿದ್ದರಿಂದ ನ್ಯೂಜಿಲೆಂಡ್ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್ ಅವರನ್ನು ಯಾವುದೇ ತಂಡ ಖರೀದಿಸಲು ಆಸಕ್ತಿ ತೋರಲಿಲ್ಲ.
ಆಲ್ಝಾರಿ ಜೋಸೆಫ್
ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಆಲ್ಝಾರಿ ಜೋಸೆಪ್ ಅವರು ಕೂಡ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ.