ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

16 ಕೋಟಿ ರುಪಾಯಿ ಕುಸಿದ ವೆಂಕಟೇಶ್‌ ಅಯ್ಯರ್‌ ಮೌಲ್ಯ; ಅಲ್‌ರೌಂಡರ್‌ ಎಂಟ್ರಿ ಆರ್‌ಸಿಬಿಗೆ ಬಲ ತುಂಬುತ್ತಾ?

IPL Auction 2026: ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಅಭುದಾಬಿಯ ಎತಿಹಾರ್‌ ಮೈದಾನದಲ್ಲಿ ನಡೆಯುತ್ತಿದ್ದು, ಭರ್ಜರಿಯಾಗಿ ಸಾಗುತ್ತಿದ್ದು, ಭಾರತೀಯ ಆಲ್‌ರೌಂಡರ್‌ ವೆಂಕಟೇಶ್ ಐಯ್ಯರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 7 ಕೋಟಿ ರು.ಗೆ ಖರೀದಿಸಿದೆ. ಆ ಮೂಲಕ ಕಳೆದ ಸೀಸನ್‌ನಲ್ಲಿ ಕೆಕೆಆರ್ ಪರ ಆಡಿದ್ದ ವೆಂಕಟೇಶ್, ಈ ಬಾರಿ ಆರ್‌ಸಿಬಿ ಜೆರ್ಸಿ ತೊಟ್ಟು ಕಣಕ್ಕೆ ಇಳಿಯಲಿದ್ದಾರೆ.

ವೆಂಕಟೇಶ್‌ ಅಯ್ಯರ್‌

ಬೆಂಗಳೂರು, ಡಿ. 16: ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜು (IPL Auction 2026) ಪ್ರಕ್ರಿಯೆ ಭರ್ಜರಿಯಾಗಿ ಸಾಗುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭಾರತೀಯ ಆಲ್‌ರೌಂಡರ್‌ ವೆಂಕಟೇಶ್ ಐಯ್ಯರ್ (Venkatesh Iyer) ಅವರನ್ನು 7 ಕೋಟಿ ರು.ಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಸೀಸನ್‌ನಲ್ಲಿ ಕೆಕೆಆರ್ ಪರ ಆಡಿದ್ದ ವೆಂಕಟೇಶ್, ಈ ಬಾರಿ ಆರ್‌ಸಿಬಿ ಜೆರ್ಸಿ ತೊಟ್ಟು ಕಣಕ್ಕೆ ಇಳಿಯಲಿದ್ದಾರೆ. ಕಳೆದ ಆವೃತ್ತಿಯ ಮೆಗಾ ಹರಾಜಿನಲ್ಲಿ ಕೆಕೆಆರ್‌ ತಂಡ 23.75 ಕೋಟಿ ರು. ತೆತ್ತು ವೆಂಕಟೇಶ್‌ ಅಯ್ಯರ್‌ ಅವರನ್ನು ಖರೀದಿಸಿತ್ತು. ಆದರೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ ಅವರನ್ನು ಕೆಕೆಆರ್‌ ಹರಾಜಿಗೆ ಬಿಟ್ಟುಕೊಟ್ಟಿತ್ತು. ಈ ಬಾರಿ ಅವರ ಮೌಲ್ಯ 16.75 ಕೋಟಿ ರು. ಕಡಿಮೆಯಾಗಿದೆ.

ಕಳೆದ ಬಾರಿ 23.75 ರು.ಗೆ ಕೆಕೆಆರ್‌ ತಂಡದ ಪಾಲಾಗಿದ್ದ ವೆಂಕಟೇಶ್‌ ಅಯ್ಯರ್‌ ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ ಅವರು ಟೂರ್ನಿಯಲ್ಲಿ ಆಡಿದ್ದ 11 ಪಂದ್ಯಗಳಿಂದ ಕೇವಲ 142 ರನ್‌ಗಳನ್ನು ಕಲೆ ಹಾಕಿದ್ದರು. ವಿಶೇಷ ಎಂದರೆ ಕಳೆದ ಬಾರಿಯೂ ವೆಂಕಟೇಶ್‌ ಅಯ್ಯರ್‌ ಖರೀದಿಗೆ ಆರ್‌ಸಿಬಿ ಅಂತಿಮ ಹಂತದ ತನಕ ಬಿಡ್‌ ಮಾಡಿತ್ತು. ಆದರೆ ತನ್ನ ಬಳಿ ದೊಡ್ಡ ಮೊತ್ತ ಇಲ್ಲದ ಕಾರಣ ಹಿಂದೆ ಸರಿದಿತ್ತು. ಈ ಬಾರಿ ವೆಂಕಟೇಶ್ ಅಯ್ಯರ್ ಮೂಲ ಬೆಲೆ 2 ಕೋಟಿ ರು. ಆಗಿತ್ತು. ವೆಂಕಟೇಶ್ ಅಯ್ಯರ್ ಮಧ್ಯಮ ವೇಗದ ಬೌಲಿಂಗ್ ಮಾಡುವ ಕಾರಣ ಆರ್‌ಸಿಬಿಗೆ ಬ್ಯಾಟಂಗ್‌ ಮತ್ತು ಬೌಲಿಂಗ್‌ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿದೆ.

ಆರ್‌ಸಿಬಿ ಎಕ್ಸ್‌ ಪೋಸ್ಟ್‌:



ವೆಂಕಟೇಶ್‌ ಅಯ್ಯರ್‌ ಹಿನ್ನೆಲೆ

ಮಧ್ಯ ಪ್ರದೇಶ ಮೂಲದ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ 1994ರ ಡಿಸೆಂಬರ್‌ 25ರಂದು ಇಂದೋರ್‌ನಲ್ಲಿ ಜನಿಸಿದರು. ಅವರು ಭಾರತದ ಪರ 2 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಆದರೆ ಈ ವೇಳೆ ಇವರ ಬ್ಯಾಟ್‌ನಿಂದ ಒಂದೇ ಒಂದು ಬಿಗ್‌ ಇನಿಂಗ್ಸ್‌ ಬಂದಿಲ್ಲ. 2021ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಅಯ್ಯರ್‌ ಒಟ್ಟು 62 ಪಂದ್ಯಗಳಿಂದ 137.32 ಸ್ಟ್ರೈಕ್‌ ರೇಟ್‌ನಲ್ಲಿ 1,468 ರನ್‌ ಹೊಡೆದಿದ್ದಾರೆ. ಇದರಲ್ಲಿ 1 ಶತಕ ಮತ್ತು 12 ಅರ್ಧ ಶತಕ ಸೇರಿದೆ.

ವಿಡಿಯೊ ಇಲ್ಲಿದೆ:



2018ರ ಡಿಸೆಂಬರ್ 6ರಂದು ರಣಜಿ ಟ್ರೋಫಿಯಲ್ಲಿ ಮಧ್ಯ ಪ್ರದೇಶದ ಪರ ಆಡುವ ಮೂಲಕ ಅವರು ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟರು. 2021-22ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 51.66ರ ಸರಾಸರಿಯಲ್ಲಿ 155 ರನ್‌ಗಳೊಂದಿಗೆ ಮಧ್ಯ ಪ್ರದೇಶದ ಟಾಪ್‌ ಸ್ಕೋರರ್‌ ಎನಿಸಿಕೊಂಡರು. ಅದೇ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಛಾಪು ಬೀರಿದ ಅವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 133ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ 63.16ರ ಸರಾಸರಿಯಲ್ಲಿ 379 ರನ್ ಗಳಿಸಿದರು. ಇದರಲ್ಲಿ ಎರಡು ಶತಕಗಳು ಸೇರಿದ್ದವು. ಜತೆಗೆ 6 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಿತ್ತು ಗಮನ ಸೆಳೆದರು.

ಆರ್‌ಸಿಬಿ ಸೇರಿದ ಸ್ಫೋಟಕ ಬ್ಯಾಟರ್‌ ವೆಂಕಟೇಶ್‌ ಅಯ್ಯರ್‌

ಐಪಿಎಲ್‌ನಲ್ಲಿ ವೆಂಕಟೇಶ್‌ ಅಯ್ಯರ್‌

ದೇಶಿಯ ಕ್ರಿಕೆಟ್‌ನಲ್ಲಿ ಗಮನ ಸೆಳೆದ ವೆಂಕಟೇಶ್‌ ಅಯ್ಯರ್‌ 2021ರಲ್ಲಿ ಐಪಿಎಲ್‌ಗೆ ಕಾಲಿಟ್ಟರು. ಕೆಕೆಆರ್‌ ತಂಡ ಸೇರಿದ ಅವರು ಮೊದಲು ಕಣಕ್ಕಿಳಿದ್ದು ಆರ್‌ಸಿಬಿ ಮೂಲಕ ಎನ್ನುವುದು ವಿಶೇಷ. ಅದೇ ವರ್ಷ ಮೊದಲ ಅರ್ಧ ಶತಕ ಬಾರಿಸಿದರು. ಅದಾದ ಬಳಿಕೆ ಕೆಕೆಆರ್‌ನ ಪ್ರಮುಖ ಆಟಗಾರ ಎನಿಸಿಕೊಂಡರು. ಆ ವರ್ಷ 370 ರನ್‌ ಕಲೆ ಹಾಕಿ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದರು.

ಮೊದಲ ಶತಕ

2023ರಲ್ಲಿ ವೆಂಕಟೇಶ್‌ ಅಯ್ಯರ್‌ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದರು. ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ 51 ಬಾಲ್‌ಗಳಲ್ಲಿ 104 ರನ್‌ ಗಳಿಸಿದರು. 2024ರಂದು ಅಯ್ಯರ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 23.75 ಕೋಟಿ ರು.ಗೆ ಮರಳಿ ಖರೀದಿಸಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರೆನಿಸಿಕೊಂಡರು.

ಇದೀಗ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ವಿದೇಶಿ ಆಟಗಾರ ಯಾರು ಗೊತ್ತೆ?

ಅಂತಾರಾಷ್ಟ್ರೀಯ ಕೆರಿಯರ್‌

2021ರ ನವೆಂಬರ್ 17ರಂದು ನ್ಯೂಜಿಲೆಂಡ್ ವಿರುದ್ಧದ ಕಣಕ್ಕಿಳಿಯುವ ಮೂಲಕ ವೆಂಕಟೇಶ್‌ ಅಯ್ಯರ್‌ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಕಾಲಿಟ್ಟರು. ಅದೇ ವರ್ಷ ಡಿಸೆಂಬರ್‌ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೈದಾನಕ್ಕಿಳಿದು ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದರು. 2022ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಟಿ20 ತಂಡಕ್ಕೆ ಸೇರ್ಪಡೆಗೊಂಡರು. ಅಲ್ಲಿ ಅವರು ಮೂರು ಪಂದ್ಯಗಳನ್ನು ಆಡಿದರು.