Cameron Green: 25 ಕೋಟಿ ಪಡೆದರೂ ಗ್ರೀನ್‌ಗೆ ಸಿಗುವುದು 18 ಕೋಟಿ ಮಾತ್ರ!
IPL Auction 2026 Live: 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಗ್ರೀನ್ ಖರೀದಿಗೆ ಆರಂಭದಲ್ಲಿ ಕೆಕೆಆರ್ ಜತೆ ರಾಜಸ್ಥಾನ್ ತೀವ್ರ ಪೈಪೋಟಿ ನಡೆಸಿತು. 13.40 ಕೋಟಿ ತನಕ ಬಿಡ್ ಮಾಡಿದ ರಾಜಸ್ಥಾನ್ ಆ ಬಳಿಕ ಹಿಂದೆ ಸರಿಯಿತು. ರಾಜಸ್ಥಾನ್ ರೇಸ್‌ನಿಂದ ಹಿಂದೆ ಸರಿಯುತ್ತಿದ್ದಂತೆ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸ್ಪರ್ಧೆಗೆ ಇಳಿಯಿತು. 25 ಕೋಟಿ ತನಕ ಬಿಡ್ ಮಾಡಿ ಹಿಂದೆ ಸರಿಯಿತು.
Cameron Green -
ಅಬುಧಾಬಿ, ಡಿ.16: ಮಿನಿ ಹರಾಜಿನಲ್ಲಿ(IPL Auction 2026 Live) ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್(Cameron Green) 25.20 ಕೋಟಿ ರೂ. ಮೊತ್ತಕ್ಕೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ. ಆದರೆ ಅವರಿಗೆ ಸಿಗುವುದು 18 ಕೋಟಿ ರೂ. ಮಾತ್ರ. ಹೌದು, ಬಿಸಿಸಿಐನ ಮಿನಿ ಹರಾಜು ನಿಯಮಾವಳಿ ಇದಕ್ಕೆ ಕಾರಣವಾಗಿದೆ. ನಿಯಮದನ್ವಯ ಮಿನಿ ಹರಾಜಿನಲ್ಲಿ ವಿದೇಶಿಯರು, ಮೆಗಾ ಹರಾಜಿನ ಗರಿಷ್ಠ ಬಿಡ್ ಮತ್ತು ಗರಿಷ್ಠ ರಿಟೇನ್ ಮೊತ್ತಗಳಲ್ಲಿ ಕನಿಷ್ಠವಾದುದನ್ನಷ್ಟೇ ಪಡೆಯಲಿದ್ದಾರೆ. ಹೀಗಾಗಿ ಕಳೆದ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಗರಿಷ್ಠ 27 ಕೋಟಿ ರೂ.ಗೆ ಬಿಕರಿಯಾಗಿದ್ದರೂ, ರಿಟೇನ್ನ ಗರಿಷ್ಠ 18 ಕೋಟಿ ರೂ. ಆಗಿದೆ.
ಇದರಿಂದಾಗಿ ವಿದೇಶಿ ಆಟಗಾರನಾಗಿರುವ ಗ್ರೀನ್ 25.20 ಕೋಟಿಗೆ ಬಿಡ್ ಆದರೂ ಅವರಿಗೆ 18 ಕೋಟಿ ಮಾತ್ರ ಸಿಗಲಿದೆ. ಹೆಚ್ಚುವರಿ 7.20 ಕೋಟಿ ರೂ. ಬಿಸಿಸಿಐ ಪಾಲಾಗಲಿದೆ. ಈ ಮೊತ್ತವನ್ನು ಬಿಸಿಸಿಐ ಆಟಗಾರರ ಕಲ್ಯಾಣ ನಿಧಿಯಾಗಿ ಬಳಸಿಕೊಳ್ಳಲಿದೆ.
Presenting Kolkata's all-new GREEN initiative 😉💜 pic.twitter.com/1lBJ7NTNPx
— KolkataKnightRiders (@KKRiders) December 16, 2025
2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಗ್ರೀನ್ ಖರೀದಿಗೆ ಆರಂಭದಲ್ಲಿ ಕೆಕೆಆರ್ ಜತೆ ರಾಜಸ್ಥಾನ್ ತೀವ್ರ ಪೈಪೋಟಿ ನಡೆಸಿತು. 13.40 ಕೋಟಿ ತನಕ ಬಿಡ್ ಮಾಡಿದ ರಾಜಸ್ಥಾನ್ ಆ ಬಳಿಕ ಹಿಂದೆ ಸರಿಯಿತು. ರಾಜಸ್ಥಾನ್ ರೇಸ್‌ನಿಂದ ಹಿಂದೆ ಸರಿಯುತ್ತಿದ್ದಂತೆ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸ್ಪರ್ಧೆಗೆ ಇಳಿಯಿತು. 25 ಕೋಟಿ ತನಕ ಬಿಡ್ ಮಾಡಿ ಹಿಂದೆ ಸರಿಯಿತು. ಅಂತಿಮವಾಗಿ ಗ್ರೀನ್ ಕೆಕೆಆರ್ ಪಾಲಾದರೂ. ಗರಿಷ್ಠ ಮೊತ್ತದೊಂದಿಗೆ ಹರಾಜಿಗಿಳಿದ ಕೆಕೆಆರ್ ಗರಿಷ್ಠ ಮೊತ್ತವನ್ನೇ ವ್ಯಯಿಸಿ ಸ್ಟಾರ್ ಆಟಗಾರರನ್ನು ಬುಟ್ಟಿಗೆ ಹಾಕಿಕೊಂಡಿತು.
ಪ್ರತಿ ಹರಾಜಿನ ಗರಿಷ್ಠ ಬಿಡ್ (ರೂ.ಗಳಲ್ಲಿ)
2008: ಎಂಎಸ್ ಧೋನಿ-6.5 ಕೋಟಿ
2009: ಕೆವಿನ್ ಪೀರ್ಟಸೆನ್, ಆಂಡ್ರೋ ಫ್ಲಿಂಟಾಫ್-7.56 ಕೋಟಿ
2010: ಶೇನ್ ಬಾಂಡ್, ಕೈರಾನ್ ಪೊಲ್ಲಾರ್ಡ್-3.48 ಕೋಟಿ
2011: ಗೌತಮ್ ಗಂಭೀರ್-11.2 ಕೋಟಿ
2012: ರವೀಂದ್ರ ಜಡೇಜಾ-11.4 ಕೋಟಿ
2013: ಗ್ಲೆನ್ ಮ್ಯಾಕ್ಸ್ವೆಲ್-5.85 ಕೋಟಿ
2014: ಯುವರಾಜ್ ಸಿಂಗ್-14 ಕೋಟಿ
2015: ಯುವರಾಜ್ ಸಿಂಗ್-16 ಕೋಟಿ
2016: ಶೇನ್ ವ್ಯಾಟ್ಸನ್-9.5 ಕೋಟಿ
2017: ಬೆನ್ ಸ್ಟೋಕ್ಸ್-14.5 ಕೋಟಿ
2018: ಬೆನ್ ಸ್ಟೋಕ್ಸ್-12.5 ಕೋಟಿ
2019: ಜೈದೇವ್ ಉನಾದ್ಕತ್, ವರುಣ್ ಚಕ್ರವರ್ತಿ-8.4 ಕೋಟಿ
2020: ಪ್ಯಾಟ್ ಕಮ್ಮಿನ್ಸ್-15.5 ಕೋಟಿ
2021: ಕ್ರಿಸ್ ಮೋರಿಸ್-16.25 ಕೋಟಿ
2022: ಇಶಾನ್ ಕಿಶನ್-15.25 ಕೋಟಿ
2023: ಸ್ಯಾಮ್ ಕರನ್-18.5 ಕೋಟಿ
2024: ಮಿಚೆಲ್ ಸ್ಟಾರ್ಕ್-24.75 ಕೋಟಿ
2025: ರಿಷಭ್ ಪಂತ್-27 ಕೋಟಿ
2026: ಕ್ಯಾಮರಾನ್ ಗ್ರೀನ್-25.20 ಕೋಟಿ