ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದ ಸಿಬ್ಬಂದಿಗೆ 25 ಲಕ್ಷ ರು ನಗದು ಬಹುಮಾನ ನೀಡಿದ ಎಸಿಎ!

ನಿರಂತರ ಮಳೆಯ ಭೀತಿ ನಡುವೆಯೂ ಗುವಾಹಟಿಯಲ್ಲಿ ಗ್ರೌಂಡ್‌ಸ್ಟಾಫ್‌ನ ಪ್ರಯತ್ನಗಳಿಂದಾಗಿ 2026ರ ಐಪಿಎಲ್ ಪಂದ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಪಂದ್ಯಗಳು ಯಾವುದೇ ಅಡಚಣೆಗಳಿಲ್ಲದೆ ಸುಗಮವಾಗಿ ನಡೆಯಲು ನೆರವಾದ ಕ್ಯುರೆಟರ್‌ಗಳು ಹಾಗೂ ಸಿಬ್ಬಂದಿಗೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ 25 ಲಕ್ಷ ರು ನಗದು ಬಹುಮಾನವನ್ನು ಘೋಷಿಸಿದೆ.

ಬರ್ಸಪರ ಕ್ರೀಡಾಂಗಣದ ಸಿಬ್ಬಂದಿಗೆ 25 ಲಕ್ಷ ರು ಬಗದು ಬಹುಮಾನ.

ನವದೆಹಲಿ: ಗುವಾಹಟಿಯ ಬರ್ಸಪರ ಕ್ರಿಕೆಟ್ (Barsapara Stadium) ಕ್ರೀಡಾಂಗಣದ ಪಿಚ್ ಕ್ಯುರೆಟರ್‌ ಹಾಗೂ ಅಂಗಣದ ಸಿಬ್ಬಂದಿಗೆ ಅವರ ಕಠಿಣ ಸೇವೆಯನ್ನು ಗುರುತಿಸಿ 25 ಲಕ್ಷ ರು ನಗದು ಬಹುಮಾನವನ್ನು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್‌ (ACA) ಘೋಷಿಸಿದೆ. ನಿರಂತರ ಮಳೆಯ ನಡುವೆಯೂ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅವರು ನೀಡಿದ ಕಠಿಣ ಪ್ರಯತ್ನಗಳನ್ನು ಗೌರವಿಸುವ ಸಲುವಾಗಿ ಈ ನಗದು ಬಹುಮಾನ ನೀಡಲಾಗಿದೆ ಎಂದು ಎಸಿಎ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಗುವಾಹಟಿಯಲ್ಲಿ ಆಡಿದ ಮೂರು ತವರು ಪಂದ್ಯಗಳಿಗೆ ಮಳೆ ಕಾಟ ನೀಡಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧದ ಒಂದು ಪಂದ್ಯ 11 ಓವರ್‌ಗಳಿಗೆ ಸೀಮಿತಗೊಂಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇತರ ಎರಡು ಪಂದ್ಯಗಳಿಗೂ ಹವಾಮಾನ ಪ್ರಭಾವ ಬೀರಿತ್ತು. ಆದರೆ ಈ ಎಲ್ಲಾ ಸವಾಲುಗಳ ನಡುವೆಯೂ ಗ್ರೌಂಡ್‌ಸ್ಟಾಫ್ ಪಿಚ್ ಮತ್ತು ಔಟ್‌ಫೀಲ್ಡ್ ಅನ್ನು ಪಂದ್ಯಕ್ಕೆ ತಕ್ಕಂತೆ ಸಿದ್ಧಪಡಿಸಿ ಪಂದ್ಯಗಳನ್ನು ಸಕ್ಸಸ್‌ ಮಾಡಿದ್ದರು.

ʻಪಾಂಡ್ಯ ಬ್ರದರ್ಸ್‌ ನಡುವೆ ಕಿರಿಕ್‌ʼ: ಹ್ಯಾಂಡ್‌ಶೇಕ್‌ ಮಾಡಲು ನಿರಾಕರಿಸಿದ ಹಾರ್ದಿಕ್‌-ಕೃಣಾಲ್‌!

“ಕಷ್ಟಕರ ಹವಾಮಾನ ಪರಿಸ್ಥಿತಿಗಳಲ್ಲಿಯೂ ಕ್ಯೂರೆಟರ್ ಮತ್ತು ಗ್ರೌಂಡ್‌ಸ್ಟಾಫ್ ಪಿಚ್‌ಗಳನ್ನು ಉನ್ನತ ಮಟ್ಟದಲ್ಲಿ ಸಿದ್ಧಪಡಿಸಿ ನಿರ್ವಹಿಸಿದ್ದಾರೆ,” ಎಂದು ಎಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. “ಅವರ ಪ್ರಯತ್ನಗಳಿದ ಪಂದ್ಯಗಳು ಯಶ್ವಸಿಯಾಗಿವೆ. ರಾಷ್ಟ್ರೀಯ ಮಟ್ಟದಲ್ಲಿ ಮೈದಾನದ ಖ್ಯಾತಿ ಹೆಚ್ಚಾಗಲು ಇವರ ಕೊಡುಗೆ ನೆರವು ಸಹಕಾರಿಯಾಗಿದೆ," ಎಂದು ತಿಳಿಸಿದೆ.

ಸವಾನಿ ಮಾನ್ಸಿಂಗ್‌ ಸ್ಟೇಡಿಯಂ ಪಂದ್ಯಗಳಿಗೆ ಸಿದ್ದ

ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗುವಾಹಟಿ ಎರಡನೇ ಹೋಮ್ ಗ್ರೌಂಡ್‌ ಆಗಿ ಕಾರ್ಯನಿರ್ವಹಿಸಿತು. ಜೈಪುರದಲ್ಲಿನ ನವೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೆಲವು ಪಂದ್ಯಗಳನ್ನು ಗುವಾಹಟಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ಗುವಾಹಟಿ ಪಂದ್ಯಗಳು ಪೂರ್ಣಗೊಂಡಿರುವುದರಿಂದ, ಆರ್‌ಆರ್‌ ಏಪ್ರಿಲ್ 25ರಂದು ತನ್ನ ಪ್ರಮುಖ ತವರು ಮೈದಾನವಾದ ಸಾವಾಯಿ ಮಾನ್ಸಿಂಗ್ ಸ್ಟೇಡಿಯಂಗೆ ಮರಳಲಿದೆ.

RCB vs MI ಅಂಪೈರ್‌ ಸೂಚನೆಯನ್ನು ಪಾಲಿಸದ ಟಿಮ್‌ ಡೇವಿಡ್‌ಗೆ ಬಿತ್ತು ಭಾರಿ ದಂಡ!

ಬಿಸಿಸಿಐ ಮಾನದಂಡಗಳಿಗೆ ಅನುಗುಣವಾಗಿ ಈ ಸ್ಟೇಡಿಯಂನಲ್ಲಿ ವ್ಯಾಪಕ ಸುಧಾರಣೆಗಳನ್ನು ಮಾಡಲಾಗಿದೆ. ನವೀಕರಿಸಿದ ಆಸನ ವ್ಯವಸ್ಥೆ, ಹೊಸ ಎಲೆವೇಟರ್‌ಗಳ ಸ್ಥಾಪನೆ, ಆಧುನಿಕ ಎಲ್‌ಇಡಿ ಫ್ಲಡ್‌ಲೈಟ್‌ಗಳು ಹಾಗೂ ನವೀಕರಿಸಲಾದ ಡ್ರೆಸಿಂಗ್ ರೂಮ್‌ಗಳನ್ನು ಒಳಗೊಂಡಂತೆ ಹಲವು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಅಭಿಮಾನಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದಕ್ಕೂ ವಿಶೇಷ ಒತ್ತು ನೀಡಲಾಗಿದೆ. ರಾಜಸ್ಥಾನ್ ಸರ್ಕಾರದ ಸಹಕಾರದೊಂದಿಗೆ ನಡೆದ ಈ ಅಭಿವೃದ್ಧಿ ಕಾರ್ಯಗಳು, 2026ರ ಐಪಿಎಲ್ ಉಳಿದ ಪಂದ್ಯಗಳನ್ನು ಆತಿಥ್ಯ ವಹಿಸಲು ಮೈದಾನ ಸಂಪೂರ್ಣ ಸಿದ್ಧವಾಗಿರುವುದನ್ನು ಖಚಿತಪಡಿಸುತ್ತವೆ.