ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs MI ಅಂಪೈರ್‌ ಸೂಚನೆಯನ್ನು ಪಾಲಿಸದ ಟಿಮ್‌ ಡೇವಿಡ್‌ಗೆ ಬಿತ್ತು ಭಾರಿ ದಂಡ!

ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ಅಂಪೈರ್‌ಗಳ ಸೂಚನೆಯನ್ನು ಪಾಲಿಸದ ಪರಿಣಾಮ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಟಿಮ್‌ ಡೇವಿಡ್‌ಗೆ ಪಂದ್ಯದ ಸಂಭಾವನೆಯಲ್ಲಿ ಶೇ 25 ರಷ್ಟು ದಂಡವನ್ನು ವಿಧಿಸಲಾಗಿದೆ. ಇದೇ ವೇಳೆ ಸ್ಲೋ ಓವರ್‌ ರೇಟಿಂಗ್‌ ಕಾರಣ ಮುಂಬೈ ಕಪ್ತಾನ ಹಾರ್ದಿಕ್‌ ಪಾಂಡ್ಯಗೂ ದಂಡ ವಿಧಿಸಲಾಗಿದೆ.

ಅಂಪೈರ್‌ ಸೂಚನೆಯನ್ನು ಪಾಲಿಸದ ಟಿಮ್‌ ಡೇವಿಡ್‌ಗೆ ಭಾರಿ ದಂಡ!

ಟಿಮ್‌ ಡೇವಿಡ್‌ ಬಾರಿ ಮೊತ್ತದ ದಂಡ ವಿಧಿಸಿದ ಐಪಿಎಲ್. -

Profile
Ramesh Kote Apr 13, 2026 6:41 PM

ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್‌ (MI) ನಡುವಣ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಅಂಪೈರ್‌ಗಳ ಸೂಚನೆಯನ್ನು ಉಲ್ಲಂಘಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ ಟಿಮ್‌ ಡೇವಿಡ್‌ಗೆ (Tim David) ಭಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ. ಇನ್ನು ಇದೇ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲ್‌ ಮಾಡಿದ ಪರಿಣಾಮ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯಗೂ ದಂಡವನ್ನು ಹಾಕಲಾಗಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 18 ರನ್‌ಗಳಿಂದ ಗೆದ್ದು ಬೀಗಿತು.

ಟಿಮ್‌ ಡೇವಿಡ್‌ ಅವರಿಗೆ ಶಿಸ್ತು ಉಲ್ಲಂಘನೆಗೆ ಸಂಬಂಧಿಸಿದ ಲೆವೆಲ್ 1 ಅಪರಾಧಕ್ಕಾಗಿ ಪಂದ್ಯದ ಶುಲ್ಕದ 25 ಶೇಕಡಾ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಅವರು ಅಂಪೈರ್‌ಗಳ ಸೂಚನೆಗಳನ್ನು ಎರಡು ಬಾರಿ ಪಾಲಿಸದೆ, ಆರ್‌ಸಿಬಿ ಇನಿಂಗ್ಸ್ ವೇಳೆ ಚೆಂಡನ್ನು ಹಿಂತಿರುಗಿಸುವ ಕುರಿತು ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಿದ ಕಾರಣ ಐಸಿಸಿ ನಿಯಮಗಳ ಕಲಂ 2.4 ಅನ್ನು ಉಲ್ಲಂಘಿಸಿದ್ದಾರೆ.

RCB vs MI: ಮುಂಬೈ ಇಂಡಿಯನ್ಸ್‌ಗೆ ಮಣ್ಣು ಮುಕ್ಕಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಮೊದಲ ಘಟನೆ 18ನೇ ಓವರ್‌ನಲ್ಲಿ ಸಂಭವಿಸಿದ್ದು, ಬದಲಾಯಿಸಿದ ಚೆಂಡನ್ನು ಹಿಂತಿರುಗಿಸಲು ಅಂಪೈರ್‌ಗಳು ಹಲವಾರು ಬಾರಿ ಕೇಳಿದರೂ ಟಿಮ್‌ ಡೇವಿಡ್‌ ಅವರು ಅದನ್ನು ತಡವಾಗಿ ಹಿಂತಿರುಗಿಸಿದರು. ಇದೇ ರೀತಿಯ ಮತ್ತೊಂದು ಘಟನೆ ಕೊನೆಯ ಓವರ್‌ನಲ್ಲಿಯೂ ನಡೆದಿದೆ.ಈ ಘಟನೆಗಳನ್ನು ಅವರು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಯಾವುದೇ ಆಕ್ಷೇಪಣೆ ಇಲ್ಲದೆ ಸ್ವೀಕರಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯಗೆ 12 ಲಕ್ಷ ರು ದಂಡ

ಹಾರ್ದಿಕ್‌ ಪಾಂಡ್ಯ ನಿಧಾನಗತಿಯ ಓವರ್-ರೇಟ್ ಕಾಯ್ದುಕೊಂಡ ಕಾರಣ ದಂಡಕ್ಕೆ ಒಳಗಾಗಿದ್ದಾರೆ. ಇದು ಐಪಿಎಲ್ ನಡವಳಿಕೆ ಸಂಹಿತೆಯ ಕಲಂ 2.22 ಅಡಿಯಲ್ಲಿ ಅವರ ತಂಡದ ಈ ಸೀಸನ್‌ನ ಮೊದಲ ಪ್ರಮಾದವಾಗಿರುವುದರಿಂದ, ಅವರಿಗೆ 12 ರು ಲಕ್ಷ ದಂಡ ವಿಧಿಸಲಾಗಿದೆ.

ಸ್ಕ್ಯಾನ್‌ಗೆ ಒಳಗಾಗಲಿರುವ ಹಿಟ್‌ಮ್ಯಾನ್‌: ಪಂಜಾಬ್‌ ಕಿಂಗ್ಸ್‌ ವಿರುದ್ಧ ರೋಹಿತ್‌ ಶರ್ಮಾ ಆಡ್ತಾರಾ?

ಹಾರ್ದಿಕ್‌ ಪಾಂಡ್ಯ ಹೇಳಿದ್ದೇನು?

“ನಾವು ತುಂಬಾ ಹೆಚ್ಚು ರನ್‌ಗಳನ್ನು ನೀಡಿದ್ದೇವೆ. ಕಳೆದ ಕೆಲವು ಪಂದ್ಯಗಳಲ್ಲಿ ಬೌಲಿಂಗ್ ಯೂನಿಟ್ ಆಗಿಯೂ ಹಾಗೂ ಬ್ಯಾಟಿಂಗ್ ಯೂನಿಟ್ ಆಗಿಯೂ ನಾವು ಹಿಂಬಾಲಿಸುತ್ತಿದ್ದೇವೆ. ನಾವು ಯಾವುದು ಉತ್ತಮವಾಗಿ ಮಾಡಬಹುದು ಮತ್ತು ಬೇಕಾದ ಮೋರಲ್ ಹಾಗೂ ಮೊಮೆಂಟಮ್ ಹೇಗೆ ಪಡೆಯಬಹುದು ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಹಲವು ವಿಷಯಗಳನ್ನು ಮರುಪರಿಶೀಲನೆ ಮಾಡಬೇಕಾಗಿದೆ. ಆದರೆ ಬ್ಯಾಟ್ ಹಾಗೂ ಬಾಲ್ ಎರಡರಲ್ಲಿಯೂ ನಾವು ಇನ್ನಷ್ಟು ಆಯ್ಕೆಗಳನ್ನು ನೋಡಬೇಕು. ನಾವು ಇನ್ನೂ ಉತ್ತಮವಾಗಿ ಬ್ಯಾಟ್ ಮಾಡಬೇಕು ಮತ್ತು ಚೆನ್ನಾಗಿ ಬೌಲ್‌ ಮಾಡಬೇಕು. ಹೀಗೆ ಮಾಡಿದರೆ, ಟಾಸ್ ಏನೇ ಆಗಿರಲಿ ನಾವು ಸರಿಯಾಗಿರುತ್ತೇವೆ,” ಎಂದು ಹಾರ್ದಿಕ್‌ ಪಾಂಡ್ಯ ಪಂದ್ಯದ ನಂತರದ ಸಂವಾದದಲ್ಲಿ ಹೇಳಿದ್ದರು.